ಮೈಸೂರು-ತಾಳಗುಪ್ಪ ಟ್ರೈನ್‌ | ಚುನಾವಣೆ ಹಿನ್ನೆಲೆಯಲ್ಲಿ 10 ವಿಶೇಷ ರೈಲು ಸಂಚಾರ | ವಿವರ ಕ್ಲಿಕ್‌ ಮಾಡಿ

Mysore-Talaguppa Train | 10 special train traffic in the wake of the election Click Details. Shimoga Railway Station, Today's Train News, Mysore-Talaguppa Train Time,Mysore-Talaguppa Train

ಮೈಸೂರು-ತಾಳಗುಪ್ಪ ಟ್ರೈನ್‌ | ಚುನಾವಣೆ ಹಿನ್ನೆಲೆಯಲ್ಲಿ 10 ವಿಶೇಷ ರೈಲು ಸಂಚಾರ | ವಿವರ ಕ್ಲಿಕ್‌ ಮಾಡಿ
. Shimoga Railway Station, Today's Train News, Mysore-Talaguppa Train Time,Mysore-Talaguppa Train

SHIVAMOGGA | MALENADUTODAY NEWS | May 4, 2024    ‌ 

ಮೇ ಏಳರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಿಭಾಗ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ  ಮೈಸೂರು-ತಾಳಗುಪ್ಪ ಟ್ರೈನ್‌ ವಿಶೇಷವಾಗಿ ಒಂದು ಟ್ರಿಪ್‌ ಸಂಚಾರ ನಡೆಸಲಿದೆ. 

 

ಮೈಸೂರು – ತಾಳಗುಪ್ಪ – ಮೈಸೂರು ವಿಶೇಷ ರೈಲು. ಮೇ ಆರರಂದು ರಂದು ರಾತ್ರಿ 9.30ಕ್ಕೆ ಮೈಸೂರಿನಿಂದ ಹೊರಟು ಮೇ.7ರಂದು ಬೆಳಗ್ಗೆ 9ಕ್ಕೆ  ತಾಳಗುಪ್ಪ ತಲುಪಲಿದೆ. ಮೇ.7ರಂದು ಸಂಜೆ 6.30ಕ್ಕೆ ಹೊರಟು ತಾಳಗುಪ್ಪದಿಂದ ಹೊರಟು ಮೇ.8ರಂದು ಬೆಳಗ್ಗೆ 4 ಗಂಟೆಗೆ ಮೈಸೂರು ತಲುಪಲಿದೆ. ಈ ರೈಲು ಬೆಂಗಳೂರು, ತುಮಕೂರು, ಬೀರೂರು ಮಾರ್ಗದಲ್ಲಿ ಸಂಚರಿಸಲಿದೆ.

ರಾಜ್ಯದ ವಿವಿಧೆಡೆ ವಿಶೇಷ ರೈಲು

ಬೆಂಗಳೂರು – ವಿಜಯಪುರ – ಬೆಂಗಳೂರು – ಮೇ.6ರಂದು ಸಂಜೆ 7ಕ್ಕೆ ಹೊರಟು ಮೇ.7ರಂದು ಬೆಳಗ್ಗೆ 10.30ಕ್ಕೆ ವಿಜಯಪುರ ತಲುಪಲಿದೆ. ಮೇ.7ರಂದು ಸಂಜೆ 7ಕ್ಕೆ ಹೊರಟು ಮರುದಿನ ಬೆಳಗ್ಗೆ 11.15ಕ್ಕೆ ಬೆಂಗಳೂರು ತಲುಪಲಿದೆ.

 

ಯಶವಂತಪುರ – ಬೀದರ್‌ – ಯಶವಂತಪುರ – ಮೇ.6ರಂದು ರಾತ್ರಿ 11ಕ್ಕೆ ಯಶವಂತಪುರದಿಂದ ಹೊರಟು ಮೇ.7ರಂದು ಮಧ್ಯಾಹ್ನ 12ಕ್ಕೆ ಬೀದರ್ ತಲುಪಲಿದೆ. ಮೇ.7ರಂದು ಮಧ್ಯಾಹ್ನ 2.10ಕ್ಕೆ ಹೊರಟು ಮರುದಿನ ಬೆಳಗ್ಗೆ 4.15ಕ್ಕೆ ಯಶವಂತಪುರ ತಲುಪಲಿದೆ. 

ಶಿವಮೊಗ್ಗ ರೈಲ್ವೆ

https://malenadutoday.com/

ನೈರುತ್ಯ ರೈಲ್ವೆ ವಿಭಾಗದ ಪ್ರಕಟಣೆಯ ಫೋಟೋ