ಶಿವಮೊಗ್ಗ ನಗರದ ಊರುಗಡೂರು ಕ್ರಾಸ್​ ಬಳಿ ಪಲ್ಟಿಯಾದ ಲಾರಿ, ಕ್ರೇನ್​ಗೆ ಜೋರು ಕೆಲಸ

ಊರುಗಡೂರು ಕ್ರಾಸ್ ಬಳಿ ಇವತ್ತು ಬೆಳಗ್ಗೆ ಅಪಘಾತವೊಂದು ಸಂಭವಿಸಿದೆ. ರಟ್ಟಿನ ಬಾಕ್ಸ್ ಸಾಗಿಸುತ್ತಿದ್ದ ಲಾರಿಯೊಂದು ಆಕ್ಸಿಡೆಂಟ್ ಆಗಿದೆ. ಲಾರಿ ಚಕ್ರ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ

ಶಿವಮೊಗ್ಗ ನಗರದ  ಊರುಗಡೂರು ಕ್ರಾಸ್​ ಬಳಿ ಪಲ್ಟಿಯಾದ ಲಾರಿ, ಕ್ರೇನ್​ಗೆ ಜೋರು ಕೆಲಸ

ಶಿವಮೊಗ್ಗ  : ನಗರದ ಊರುಗಡೂರು ಕ್ರಾಸ್ ಬಳಿ ಇವತ್ತು ಬೆಳಗ್ಗೆ ಅಪಘಾತವೊಂದು ಸಂಭವಿಸಿದೆ.  ರಟ್ಟಿನ ಬಾಕ್ಸ್ ಸಾಗಿಸುತ್ತಿದ್ದ ಲಾರಿಯೊಂದು ಆಕ್ಸಿಡೆಂಟ್ ಆಗಿದೆ. ಲಾರಿ ಚಕ್ರ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ .  ಬೈಪಾಸ್‌ ರಸ್ತೆ ಬಳಿ ಘಟನೆ ನಡೆದಿದ್ದು, ಸ್ಥಳಕ್ಕೆ ಬಂದ ಪೊಲೀಸರು ಲಾರಿಯನ್ನು ಸ್ಥಳದಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದಾರೆ. 

BREAKING NEWS : ಶಿವಮೊಗ್ಗ KSRTC ಬಸ್​ಸ್ಟಾಂಡ್​ ಪಕ್ಕದಲ್ಲಿಯೇ ಪತ್ತೆಯಾಯ್ತು ಮೃತದೇಹ

ಇನ್ನೂ ಅಪಘಾತ ಹಿನ್ನೆಲೆಯಲ್ಲಿ ಕ್ಯಾಂಟರ್ ನಲ್ಲಿ ಸಾಗಿಸಲಾಗುತ್ತಿದ್ದ ರಟ್ಟಿನ ಬಾಕ್ಸ್ ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಯಾಗಿ ಬಿದ್ದಿತ್ತು. ಪೊಲೀಸರು ಕ್ರೇನ್ ಬಳಸಿ ಲಾರಿಯನ್ನು ಬದಿಗೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಯ್ತು. ಇನ್ನೂ ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಇನ್ನೂ ಈ ಸಂಬಂಧ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನು ಸಹ ಓದಿ:  ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link