Lakkinakoppa ಲಕ್ಕಿನಕೊಪ್ಪದ ಬಾರಾ ಇಮಾಮ್​ ಮಖಾನ್ ಬಗ್ಗೆ ನಿಮಗೆ ಗೊತ್ತಾ!

Lakkinakoppa: Do you know about Bara Imam Makhan of Lakkinakoppa,

Lakkinakoppa  ಲಕ್ಕಿನಕೊಪ್ಪದ ಬಾರಾ ಇಮಾಮ್​ ಮಖಾನ್ ಬಗ್ಗೆ ನಿಮಗೆ ಗೊತ್ತಾ!
Lakkinakoppa: Do you know about Bara Imam Makhan of Lakkinakoppa,

Lakkinakoppa ’ ರಾಜ್ಯದಲ್ಲಿ ವಿಶಿಷ್ಟ ಮೊಹರಂ ಆಚರಣೆ ನಡೆಯುವ ಲಕ್ಕಿನಕೊಪ್ಪದ ಬಾರಾ ಇಮಾಮ್​ ಮಖಾನ್ ಬಗ್ಗೆ ನಿಮಗೆ ಗೊತ್ತಾ! ಬೇಡಿಕೆ ಹರಕೆ ಈಡೇರುವ ಈ ಜಾಗದಲ್ಲಿ ಹಿಂದೂ-ಮುಸ್ಲಿಮರು ನಡೆಸುವ ಕೆಂಡದ ವಿಶೇಷತೆ ಏನು ಗೊತ್ತಾ!? ಜೆಪಿ ಸ್ಪೆಶಲ್​ ರಿಪೋರ್ಟ್​!

ಮುಸ್ಲಿಂ ಭಾಂದವರಿಗೆ ಹೊಸವರ್ಷವಾಗಿರುವ ಮೊಹರಂ ಹಬ್ಬವನ್ನು ಶಿವಮೊಗ್ಗ ತಾಲೂಕಿನ ಲಕ್ಕಿನ ಕೊಪ್ಪದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.

ರಾಜ್ಯದಲ್ಲಿಯೇ ಪ್ರಥಮವಾಗಿ ಮೊಹರಂ ಹಬ್ಬಕ್ಕೆ ಚಾಲನೆ ನೀಡುವ ಮೂಲಕ ಹೊಸವರ್ಷಕ್ಕೆ ನಾಂದಿಹಾಡುವ ಇಲ್ಲಿನ ಭಕ್ತಾಧಿಗಳು, ಜಿಲ್ಲೆಯ ವಿವಿಧೆಡೆಯಿಂದ ಪಂಜಾ ಹೊತ್ತು ಇಲ್ಲಿಗೆ ಬರುತ್ತಾರೆ.

ಲಕ್ಕಿನಕೊಪ್ಪದ ಬಾರಾ ಇಮಾಮ್ ಮಖಾನ್ ಸ್ಥಳದಲ್ಲಿ ಕೇವಲ ರಾತ್ರಿಹೊತ್ತು ನಡೆಯುವ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಎಲ್ಲಾ ಜಾತಿಮತ ಭೇದವಿಲ್ಲದೆ ಭಕ್ತಾಧಿಗಳು ಹರಕೆ
ತೀರಿಸುತ್ತಾರೆ.

ಕೇವಲ ಒಂದು ರಾತ್ರಿಯಷ್ಟೆ ನಡೆಯುವ ಜಾತ್ರಾ ಮಹೋತ್ಸವ

ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದ ಬಾರಾ ಇಮಾಮ್ ಮಖಾನ್ ಪವಿತ್ರ ಸ್ಥಳದಲ್ಲಿ ಮೊಹರಂ ಆಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಸುತ್ತಮುತ್ತಲ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸುವ ಭಕ್ತಾಧಿಗಳು ಹರಕೆ ತೀರಿಸಲು ಇಲ್ಲಿ ಕಾತುರರಾಗಿರುತ್ತಾರೆ.

ಇಲ್ಲಿ ಜಾತಿಮತ ಬೇದಕ್ಕೆ ಅವಕಾಶವಿಲ್ಲ.ಭಾವೈಕ್ಯತೆಯ ಪ್ರತಿರೂಪವಾಗಿರುವ ಈ ಹಬ್ಬದ ಆಚರಣೆಯಲ್ಲಿ ಮುಸ್ಲಿಂ ರಷ್ಟೆ ಹಿಂದುಗಳು ಸೇರಿ ಹಬ್ಬ ಆಚರಿಸುತ್ತಾರೆ.

ಕೋಮುವಾದದ ಅತೀಸೂಕ್ಷ್ಮ ಪ್ರದೇಶವಾಗಿರುವ ಶಿವಮೊಗ್ಗದಲ್ಲೂ ಈ ರೀತಿಯ ಬಾವೈಕ್ಯತೆಯನ್ನು ಸಾರುವ ಪವಿತ್ರ ಸ್ಥಳ ಇದೆಯೆಂದಾದರೆ ಅದು ಲಕ್ಕಿನಕೊಪ್ಪ ಬಾರಾ ಇಮಾಮ್ ಮಖಾನ್ ಸ್ಥಳ.

ಪವಿತ್ರ ಸ್ಥಳದ ಇತಿಹಾಸ

ಇಲ್ಲಿನ ಪವಿತ್ರ ಸ್ಥಳಕ್ಕೆ 1814ರಿಂದಲೂ ಇತಿಹಾಸವಿದೆ.ನೂರಾರು ವರ್ಷಗಳ ಇತಿಹಾಸವಿರುವ ಈ ಪವಿತ್ರಸ್ಥಳದಲ್ಲಿ ಬಾರಾ ಇಮಾಮ್ ನ್ನು ಪ್ರತಿಷ್ಟಾಪಿಸಿದ್ದು, ಹಿಂದು ಸಮುದಾಯದವರು.

ನಂತರ ಇಲ್ಲಿ ಜಾತ್ರೆಗೆ ಸಹಕಾರ ನೀಡಿದ್ದು ಸಹ ಹಿಂದು ಸಮುದಾಯದವರೇ. ಹೀಗಾಗಿ ಬಾರಾ ಇಮಾಮ್ ಮಖಾನ್ ಸುತ್ತಮುತ್ತಲ ಗ್ರಾಮದವರಿಗೆ ಭಾವೈಕ್ಯತೆಯ ಪ್ರತೀಕವಾಯಿತು.

ಇಲ್ಲಿ ಪೂಜೆಯಾದ ನಂತರವೇ ಜಿಲ್ಲೆಯಲ್ಲಿ ಉಳಿದ ಪ್ರಾರ್ಥನಾ ಮಂದಿಗಳಲ್ಲಿ ಉರುಸ್ ಗೆ ಚಾಲನೆ.

ಇದನ್ನೂ ಓದಿ : Bhadra river ಭದ್ರೆಯ ಆರ್ಭಟ, ಮುಳುಗಿದ ಭದ್ರಾವತಿ ಹೊಸ ಸೇತುವೆ! ಸಂಗಮೇಶ್ವರ ಮಂಟಪ! ಕವಲಗುಂದಿ, ಗುಂಡುರಾವ್ ಶೆಡ್​ನಲ್ಲಿ ಆತಂಕ!​

ದೇಶದೆಲ್ಲೆಡೆ ಮೊಹರಂ ಸಂದರ್ಭದಲ್ಲಿ ಚಂದ್ರ ಕಂಡ 10 ನೇ ದಿನಕ್ಕೆ ಮೊಹರಂ ಹಬ್ಬ ಆಚರಿಸುತ್ತಾರೆ.

ಆದರೆ ಲಕ್ಕಿನಕೊಪ್ಪದಲ್ಲಿ ಚಂದ್ರಕಂಡ 6 ನೇ ದಿನಕ್ಕೆ ಮೊಹರಂ ಗೆ ಚಾಲನೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಪಂಜಾ ಹೊತ್ತ ಭಕ್ತಾಧಿಗಳು ಬಾರಾ ಮಕಾನ್ ಗೆ ಬಂದು ಪೂಜೆ ಸಲ್ಲಿಸುತ್ತಾರೆ.

ಪೂಜೆಯಾದ ನಂತರ,ಹರಕೆ ಹೊತ್ತ ಭಕ್ತರು ಕೆಂಡ ಹಾಯುತ್ತಾರೆ.ನಂತರವಷ್ಟೆ ಜಿಲ್ಲೆಯ ಉಳಿದ ಪ್ರಾರ್ಥನಾ ಮಂದಿರಗಳಲ್ಲಿ ಹಬ್ಬ ಆಚರಿಸಲಾಗುತ್ತದೆ

ಚಿತ್ರದುರ್ಗ ಅಸ್ಥಿ ಪಂಜರ ನೆನಪಿಸಿದ ಘಟನೆ | 15-20 ದಿನದ ನಂತರ ಲಾರಿಯಲ್ಲಿ ವ್ಯಕ್ತಿಯ ಶವ ಪತ್ತೆ! ಶಿವಮೊಗ್ಗ ವೀರಭದ್ರ ಟಾಕೀಸ್​ ಬಳಿ ಘಟನೆ

ಬೇಡಿಕೊಂಡ ಹರಕೆ ಈಡೇರುತ್ತದೆ.

ಬಾರಾ ಇಮಾಮ್ ಮಖಾನ್ ಪವಿತ್ರ ಸ್ಥಳದಲ್ಲಿ ಬೇಡಿಕೊಂಡ ಹರಕೆ ಈಡೇರುತ್ತದೆ. ಹೀಗಾಗಿಯೇ ಮೊಹರಂ ಸಂದರ್ಭಲ್ಲಿ ಇಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತಾಧಿಗಳು ಬಂದು ಹರಕೆ ತೀರಿಸುತ್ತಾರೆ.

ಕೆಲವರು ಹರಕೆ ಹೊರುತ್ತಾರೆ.ಮಕ್ಕಳಿಲ್ಲದವರು, ಅನಾರೋಗ್ಯಪೀಡಿತರು. ವಿವಾಹವಾಗದವರುದೇಹದಲ್ಲಿ ಕಾಣಿಸಿಕೊಳ್ಳುವ ನರುಳ್ಳೆ ಹೀಗೆ ಹಲವು ಸಮಸ್ಯೆಗಳಗೆ ಇಲ್ಲಿ ಪರಿಹಾರ ಸಿಗುತ್ತದೆ ಎಂಬುದು ಭಕ್ತಾಧಿಗಳ ನಂಬಿಕೆಯಾಗಿದೆ.

ಹಳ್ಳಿಯಲ್ಲಿ ಒಂದು ಜಾತ್ರೆ ಎಂದರೆ ಊರಿನವರೆಲ್ಲರೂ ಸೇರಿ ಮಾಡುತ್ತಾರೆ. ಆದರೆ ಲಕ್ಕಿನಕೊಪ್ಪದಲ್ಲಿ ಇಕ್ಬಾಲ್ ಪಾಶ ಕುಟುಂಬಸ್ಥರ ನೇತ್ರತ್ವದಲ್ಲಿ ಜಾತ್ರೆ ನಡೆಯುವುದು ವಿಶೇಷ. ಯಾರಿಂದಲೂ ಹಣಬೇಡದೆ, ಇರುವ ಹಣಕಾಸಿನಲ್ಲೇ ಪ್ರತೀ ವರ್ಷ ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ.

ಜಾತ್ರೆಗೆ ಕೈಜೋಡಿಸುವ ಹಿಂದುಭಾಂದವರು.

ಬಾರಾ ಮಾಖಾನ್ ಹಬ್ಬದಲ್ಲಿ ಸುತ್ತಮುತ್ತ ಗ್ರಾಮದ ಹಿಂದುಬಾಂಧವರು ಕೈಜೋಡಿಸುತ್ತಾರೆ. ಕೆಂಡ ಹಾಯಲು ಬೇಕಾಗುವ ಕಟ್ಚಿಗೆಗಳನ್ನು ಕೆಮ್ಮಣ್ಣನ್ನು ಪೂರೈಸುವವರು ಹಿಂದುಗಳೇ. ಮುಸ್ಲಿಂ ರಂತೆ ಹಿಂದುಗಳು ಇಲ್ಲಿ ಹರಕೆ ಹೊತ್ತು ತೀರಿಸುವುದು ವಿಶೇಷ.

ಅಹೋರಾತ್ರಿ ನಡೆಯುವ ಲಕ್ಕಿನಕೊಪ್ಪದ ಜಾತ್ರಾ ಮಹೋತ್ಸವ ಇನ್ನು ವಿಶೇಷವಾಗಿರುತ್ತದೆ.

ಹಿಂದು ಧಾರ್ಮಿಕ ಹಬ್ಬಗಳಲ್ಲಿ ಜಾತ್ರೆ ನಡೆಯುವಂತೆ ಇಲ್ಲಿಯೂ ಸಹ ಮುಸ್ಲಿಂ ಬಾಂಧವರಿಗಾಗಿ ಜಾತ್ರೆ ನಡೆಯುತ್ತದೆ.

ಜಾತ್ರೆಗಲ್ಲಿ ದಾರ್ಮಿಕ ಆಚರಣೆಯ ಪರಿಕರಗಳನ್ನು ಹಣ್ಣು ಹಂಪಲು ಮಕ್ಕಳ ಆಟಿಕೆಗಳನ್ನು ಮಾರಲಾಗುತ್ತದೆ. ಜಾತ್ರೆಯಲ್ಲಿ ಎಲ್ಲಾ ಸಮುದಾಯವದವರು ಪಾಲ್ಗೊಳ್ಳುತ್ತಾರೆ.

ಅಹೋರಾತ್ರಿ ಪಂಜಾಗಳನ್ನು ಹೊತ್ತ ಭಕ್ತರು ದಾರಿಯಲ್ಲಿ ನಡೆದುಕೊಂಡು ಈ ಪವಿತ್ರ ಸ್ಥಳಕ್ಕೆ ಭೇಟಿ ಹರಕೆ ತೀರಿಸುತ್ತಾರೆ.

ಮತೀಯವಾಗಿ ಸೂಕ್ಷ್ಮ ವಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಕೋಮುಸೌಹಾರ್ದತೆಗೆ ಮತ್ತು ಬಾವೈಕ್ಯತೆ ನಾಂದಿ ಹಾಡುವ ಶ್ರದ್ದಾ ತಾಣಗಳು ಮಲೆನಾಡಿನಲ್ಲಿರುವುದು ವಿಶೇಷ.