Shigli Basya ತ್ರಿವರ್ಣ ಧ್ವಜವನ್ನೆ ಬದುಕಿನ ಉಸಿರಾಗಿಸಿಕೊಂಡ ಮಾಜಿ ಕಳ್ಳ ಶಿಗ್ಲಿ ಗದಗ ಮೂಲದ ಬಸ್ಯಾನ ಬಗ್ಗೆ ನಿಮಗೆಷ್ಟು ಗೊತ್ತು!? JP Exclusive

How much do you know about Shigli Basya, a former thief JP Exclusive

Shigli Basya  ತ್ರಿವರ್ಣ ಧ್ವಜವನ್ನೆ ಬದುಕಿನ ಉಸಿರಾಗಿಸಿಕೊಂಡ ಮಾಜಿ ಕಳ್ಳ ಶಿಗ್ಲಿ ಗದಗ ಮೂಲದ ಬಸ್ಯಾನ ಬಗ್ಗೆ ನಿಮಗೆಷ್ಟು ಗೊತ್ತು!?  JP Exclusive
How much do you know about Shigli Basya, a former thief JP Exclusive

Shigli Basya ಟವರ್​ ಹತ್ತಿದ್ರೂ, ರೈಲ್ವೆ ಟ್ರ್ಯಾಕ್​ ಮೇಲೆ ಪಾದಯಾತ್ರೆ ಮಾಡಿದ್ರೂ, ಕೊನೆಗೆ ಮರ ಹತ್ರಿದ್ರೂ ಬೇಕೆ ಬೇಕಿತ್ತು ರಾಷ್ಟ್ರಧ್ವಜ! ತ್ರಿವರ್ಣ ಧ್ವಜವನ್ನೆ ಬದುಕಿನ ಉಸಿರಾಗಿಸಿಕೊಂಡ ಮಾಜಿ ಕಳ್ಳ ಶಿಗ್ಲಿ ಗದಗ ಮೂಲದ ಬಸ್ಯಾನ ಬಗ್ಗೆ ನಿಮಗೆಷ್ಟು ಗೊತ್ತು!? ಈತನ ಈಸೂರು ಲಿಂಕ್​ ಏನು!? JP Exclusive

ರಾಷ್ಚ್ರದ್ವಜದ ಘನತೆ ಗೌರವ ಏನೆಂಬುದು ಈ ಮಾಜಿ ಕಳ್ಳನಿಗೆ ಚೆನ್ನಾಗಿಯೇ ಗೊತ್ತಿತ್ತು. ತನ್ನೆಲ್ಲಾ ಬೇಡಿಕೆ ಹೋರಾಟಗಳಿಗೆ ಈತ ಬಳಸಿಕೊಳ್ಳುತ್ತಿದ್ದೇ ಈ ರಾಷ್ರ್ಬದ್ವಜವನ್ನ

ಟವರ್ ಹತ್ತಿದ್ರು, ಫ್ಲಾಗ್…ರೈಲ್ವೆ ಟ್ರ್ಯಾಕ್ ಮೇಲೂ ಫ್ಲ್ಯಾಗ್​…ತನ್ನ ಹೋರಾಟದ ಬದುಕಿಗೆ ನ್ಯಾಷನಲ್ ಫ್ಲ್ಯಾಗ್ ಅನ್ನೇ ಉಸಿರಾಗಿಸಿಕೊಂಡ ಆ ಮಾಜಿ ಕಳ್ಳ ಯಾರು ಗೊತ್ತಾ..?

ಮನೆ ಮನದಲ್ಲೂ ತ್ರಿವರ್ಣ ಧ್ವಜ

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಪ್ರತಿ ಮನೆ ಮನೆಯಲ್ಲೂ ಆಗಸ್ಟ್ 13 ರಿಂದ 15 ರವರೆಗೆ ರಾಷ್ಟ್ರಧ್ವಜವನ್ನು ಹಾರಿಸಿ, ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸಲು ಕೇಂದ್ರ ಸರ್ಕಾರ `ಹರ್ ಘರ್ ತಿರಂಗಾ’ ಘೋಷವಾಕ್ಯದಡಿ ಅಭಿಯಾನಕ್ಕೆ ಕರೆ ನೀಡಿದೆ.

ಇದರಂತೆ ಜಿಲ್ಲೆಯ ಪ್ರತಿ ಮನೆಗಳ, ಸರ್ಕಾರಿ ಕಚೇರಿ ಕಟ್ಟಡಗಳು, ಸರ್ಕಾರೇತರ ಸಂಘ ಸಂಸ್ಥೆಗಳ ಕಟ್ಟಡ, ನಗರ, ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ವ್ಯವಸ್ಥಿತವಾಗಿ ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರೇರಣೆ ನೀಡುವ ಕಾರ್ಯ ಮಾಡಲಾಗಿದೆ.

ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮನೆಗಳ ಮೇಲೆ ತ್ರಿವರ್ಣ ಧ್ಜಜವನ್ನು ಹಾರಿಸಲು ಸಿದ್ಧತೆಗಳನ್ನು ಮಾಡಲಾಗಿದೆ.

ರಾಷ್ಟ್ರಪ್ರೇಮದ ಸಂಕೇತವಾದ ತ್ರಿವರ್ಣ ದ್ವಜದ ಬಗ್ಗೆ ಸರ್ಕಾರ ಅಭಿಯಾನ ಮಾಡುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರದ್ವಜದ ಬಗ್ಗೆ ಗೌರವ ಹೊಂದಿರಬೇಕು.

ಕೇವಲ ರಾಷ್ಚ್ರೀಯ ಹಬ್ಬಗಳಲ್ಲಿ ಮಾತ್ರ ಅದಕ್ಕೆ ಗೌರವ ನೀಡಿದರೆ ಸಾಲದು. ಪ್ರತಿದಿನ ಪ್ರತಿಕ್ಷಣ ಅದರ ಮೇಲಿನ ರಾಷ್ಟ್ರಪ್ರೇಮ ಇಮ್ಮಡಿಗೊಳ್ಳಬೇಕು.

ಮಾಜಿ ಕಳ್ಳನ ರಾಷ್ಟ್ರಪ್ರೇಮ!

ಇಲ್ಲೊಬ್ಬ ಮಾಜಿ ಕಳ್ಳ ತನ್ನ ಹೋರಾಟಕ್ಕೆ ಬದುಕಿನುದ್ದಕ್ಕೂ, ರಾಷ್ಚ್ರದ್ವಜವನ್ನೇ ಬಳಸಿಕೊಂಡಿದ್ದು ನಿಜಕ್ಕೂ ಅಚ್ಚರಿಯ ಸಂಗತಿ. ಇದು ಆತನ ಕ್ರಿಮಿನಲ್ ಮೈಂಡ್ ಅಂದರೂ..ಆತನೊಳಗೊಬ್ಬ ರಾಷ್ಟ್ರಭಕ್ತ ಅವಿತು ಕೂತಿದ್ದ ಎಂಬುದರಲ್ಲಿ ಎರಡು ಮಾತಿಲ್ಲ.

ಆತನ ಹೆಸರೇ ಶಿಗ್ಲಿ ಬಸ್ಯಾ. ಗದಗ ಮೂಲದ ಶಿಗ್ಲಿ ಬಸ್ಯಾ ಯಾರಿಗೆ ತಾನೆ ಗೊತ್ತಿಲ್ಲ.. ಈತನ ಹೆಸರು ಕರ್ನಾಟಕದ ಜನತೆಗೆ ಚಿರಪರಿಚಿತ,

ಯಾಕೆಂದ್ರೆ ಈತ ಜೈಲಿನಲ್ಲಿರುವಾಗಲೇ ಮರ ಮೊಬೈಲ್ ಟವರ್ ಹತ್ತಿ ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದ ಪ್ರಚಂಡ.

ತನ್ನ ಕೇಸ್​ಗಳನ್ನು ತಾನೇ ವಾದಿಸಿ ಗೆದ್ದ ಪ್ರಚಂಡ

ಈತ ಕದ್ದಿದ್ದು ಬರೋಬ್ಬರಿ ಸಾವಿರ ಮನೆಯಲ್ಲಿ ಆದ್ರೂ..ಕೇಸು ದಾಖಲಾಗಿದ್ದು ಮಾತ್ರ 260 ಪ್ರಕರಣಗಳಲ್ಲಿ. ಈತನ ಮೇಲಿದ್ದ 260 ಕಳ್ಳತನ ಪ್ರಕರಣಗಳು ಖುಲಾಸೆಗೊಂಡಿದೆ.

ವಿಶೇಷ ಅಂದರೆ, ಈತ ತನ್ನ ಪರ ವಾದಕ್ಕೆ ಯಾವ ವಕೀಲರನ್ನು ನೇಮಿಸಿಕೊಳ್ಳುವುದಿಲ್ಲ.

ಬದಲಾಗಿ ತನ್ನ ಕೇಸಿಗೆ ತಾನೇ ವಕೀಲನಾಗಿ ವಾದಿಸುತ್ತಾ, ಪಬ್ಲಿಕ್ ಪ್ರಾಸಿಕ್ಯೂಟರ್,ಪೊಲೀಸ್ ಅಧಿಕಾರಿ,ಹಾಗು ಪ್ರಮುಖ ಸಾಕ್ಷ್ಯಿಗಳಿಗೆ ಖಡಕ್ ಚೆಕ್ ನೀಡುತ್ತಿದ್ದ.

ಹೀಗೆ ತನ್ನದೇ ಕೇಸ್​ಗಳನ್ನೇ ತಾನೇ ಕಾನೂನು ಓದಿ ಕೋರ್ಟ್​ನಲ್ಲಿ ಗೆದ್ದ ಬಸ್ಯ ಸದ್ಯಕ್ಕೆ ಎಲ್ಲಾ ಕೇಸುಗಳಿಂದ ಮುಕ್ತನಾಗಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ.

ರಾಷ್ಟ್ರಧ್ವಜವೇ ಈತನ ಅಸ್ತ್ರ!

ಜೈಲಿನಲ್ಲಿರುವಾಗ ಮರ ಏರುವುದು ಟವರ್ ಏರಿ ಪ್ರತಿಭಟನೆ ನಡೆಸುವುದು ಈತನಿಗೆ ಮಾಮೂಲಿಯಾಗಿತ್ತು.

ಜೈಲಿನಿಂದ ಹೊರಕ್ಕೆ ಬಂದ ಮೇಲೂ ಈತ ಮರ ಇಲ್ಲವೇ ಟವರ್ ಏರಿದರೇ ಪೊಲೀಸರಿಗೆ ಹಾಗು ಸ್ಥಳೀಯ ಆಡಳಿತಕ್ಕೆ ಪೀಕಲಾಟವಾಗುತ್ತಿತ್ತು.

ರಾಷ್ಟ್ರದ್ವಜ ಹಿಡಿದು ಟವರ್ ಏರಿದವನನ್ನು ಹೇಗಾದ್ರು ಮನವೊಲಿಸಿ ಅಧಿಕಾರಿಗಳು ಕೆಳಗಿಳಿಸುತ್ತಿದ್ದರು…

ಜೈಲಿನಲ್ಲಿರುವಾಗ ಕಾನೂನಿನ ಹೋರಾಟಕ್ಕೆ, ಜೈಲಿನಿಂದ ಹೊರಬಂದ ನಂತರ ತನ್ನ ಮನೆ, ಜನಪರ ಹೋರಾಟಗಳಿಗೆ ಬಸ್ಯಾ ಅವಲಂಬಿಸಿದ್ದೇ ರಾಷ್ಚ್ರದ್ವಜವನ್ನು.

ಈಸೂರಿನಲ್ಲಿರುವ ಸಂದರ್ಭದಲ್ಲಿ ಮನೆ ನಿವೇಶನಕ್ಕಾಗಿ ಟವರ್ ಏರಿ ಕುಳಿತಿದ್ದ ಬಸ್ಯ ಆ ನಂತರ ಕುಟುಂಬ ಸಮೇತ ದ್ವಜವನ್ನು ಹಿಡಿದು ಪಾದಯಾತ್ರೆ ಮಾಡಿದ್ದ.

ಸಾಮಾಜಿಕ ಹೋರಾಟಗಳಿಗಾಗಿ ರೈಲ್ವೆ ಟ್ರಾಕ್ ಮೇಲೆ ನೂರಾರು ಕಿಲೋಮೀಟರ್ ಪಾದಯಾತ್ರೆ ನಡೆದಿದ್ದ ಈತ ಅನೇಕ ರಸ್ತೆಗಳಲ್ಲಿ ರಾಷ್ಚ್ರದ್ವಜ ಹಿಡಿದು ನಾಡಿನ ಜನತೆಯ ಗಮನ ಸೆಳೆದಿದ್ದ.

ಕೈದಿಗಳನ್ನು ಸನ್ನಡತೆ ಆದಾರದ ಮೇಲೆ ಬಿಡುಗಡೆಗೊಳಿಸುವಂತೆ ಬಸ್ಯಾ ಧಾರಾವಾಡದಿಂದ ಬೆಂಗಳೂರಿನವರೆಗೆ ರಾಷ್ಟ್ರದ್ವಜ ಹಿಡಿದು ರೈಲ್ವೆ ಟ್ರಾಕ್ ಮೇಲೆ ಪಾದಯಾತ್ರೆ ಮಾಡಿದ್ದು ಈತನ ಜೀವನದ ಬಹುಮುಖ್ಯ ಭಾಗವಾಗಿತ್ತು.

ಪೊಲೀಸರಿಗೂ ಪ್ರತಿಭಟಿಸುವ ಹಕ್ಕು ಕೇಳಿದ್ದ ಬಸ್ಯ!

ಮಹದಾಯಿ ಯೋಜನೆ ವಿಚಾರವಾಗಿ, ಜನಲೋಕಪಾಲ್ ಕಾಯ್ದೆ ಜಾರಿಗಾಗಿ, ಸಮಾಜದಲ್ಲಿ ಪೊಲೀಸರಿಗೂ ಪ್ರತಿಭಟಿಸುವ ಹಕ್ಕು ನೀಡಬೇಕೆಂದು ಆಗ್ರಹಿಸಿ ಸಾವಿರಾರು ಕಿಲೋಮೀಟರ್ ಪಾದಯಾತ್ರೆ ಮಾಡಿದ್ದಾನೆ.

ಅಂದು ಜೈಲಿನಲ್ಲಿದ್ದಾಗ ತನ್ನ ಸ್ವಾರ್ಥಕ್ಕೆ ರಾಷ್ಟ್ರದ್ವಜವನ್ನು ಅಸ್ತ್ರವನ್ನಾಗಿ ಶಿಗ್ಲಿ ಬಳಸಿದ ಎಂದು ಹೇಳುವವರು ಸಾಕಷ್ಟು ಮಂದಿ ಇದ್ದಾರೆ.

ಆದರೆ ತನ್ನ ಮೇಲಿದ್ದ ಸುಮಾರು 260 ಕಳ್ಳತನ ಕೇಸ್ ಗಳನ್ನು ತಾನೇ ವಾದ ಮಾಡಿ ಗೆದ್ದು ಬಂದ ನಂತರ, ಶಿಗ್ಲಿ ಬಸ್ಯಾ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಾಗ ನಿಸ್ವಾರ್ಥವಾಗಿ ರಾಷ್ಚ್ರದ್ವಜವನ್ನು ಹಿಡಿದು ಪಾದಯಾತ್ರೆ ಹೊರಟಿದ್ದು ಸುಳ್ಳಲ್ಲ.

ರಾಷ್ಟ್ರದ್ವಜದಲ್ಲಿ 130 ಕೋಟಿ ಜನರ ಶಕ್ತಿ ಅಡಗಿದೆ..ಆ ಶಕ್ತಿಯನ್ನೇ ನನ್ನ ಹೋರಾಟಕ್ಕೆ ಬಳಸಿಕೊಳ್ಳುತ್ತಿದ್ದೇನೆ ಸಾರ್ ಎಂದು ಶಿಗ್ಲಿ ಬಸ್ಯಾ ಮಲೆನಾಡು ಟುಡೆಗೆ ತಿಳಿಸಿದ್ದಾನೆ.

ಕಳ್ಳತನಕ್ಕೆ ವಿದಾಯ ಹೇಳಿ, ಈಗ ಸಾಮಾಜಿಕ ಕಾರ್ಯಕರ್ತನಾಗಿರುವ ಶಿಗ್ಲಿ ಬಸ್ಯಾ..ತಮ್ಮ ಪತ್ನಿಯನ್ನು ಗ್ರಾಮ ಪಂಚಾಯಿತಿ ಸದಸ್ಯೆಯನ್ನಾಗಿ ಮಾಡುವಲ್ಲಿ ಕೂಡ ಯಶಸ್ವಿಯಾಗಿದ್ದಾನೆ.

ಶಿಗ್ಲಿ ಗ್ರಾಮದಲ್ಲಿ ಬಸ್ಯನ ಬದಲಾವಣೆಯನ್ನು ಕಂಡೇ ಗ್ರಾಮಸ್ಥರು ಆತನ ಪತ್ನಿಯನ್ನು ಗೆಲ್ಲಿಸಿದರು..ಬಸ್ಯಾ ಬದಲಾಗದಿದ್ದರೆ..ಆತನ ಪತ್ನಿಗೆ ಗ್ರಾಮದಲ್ಲಿ ಕವಡೆ ಕಾಸಿನ ಕಿಮ್ಮತ್ತು ಇರುತ್ತಿರಲಿಲ್ಲ..

ಒಟ್ಟಾರೆ, ತಾನು ಬದಲಾದರೂ ತನ್ನೊಂದಿಗೆ ರಾಷ್ಟ್ರಧ್ವಜ ಹಾಗೂ ಅದನ್ನು ಹಿಡಿದು ಹೋರಾಡುವ ಹಟವನ್ನು ಬದಲಾಯಿಸಿಕೊಂಡಿಲ್ಲ.

ಅಲ್ಲದೆ ನಮ್ಮ ನಿತ್ಯ ಹೋರಾಟದ ಬದುಕಿಗೆ ರಾಷ್ಟ್ರದ್ವಜವೂ ಹೇಗೆ ಆಸರೆಯಾಗಬಲ್ಲದು..ನಮ್ಮ ಬೇಡಿಕೆಗಳನ್ನು ಹೇಗೆ ಈಡೇರಿಸಬಲ್ಲದು ಎಂಬುದನ್ನು ಬಸ್ಯಾ ಸಾಕ್ಷೀಕರಿಸಿ ಕೊಟ್ಟಿದ್ದಾನೆ. ಈಗಲೂ ಬಸ್ಯ ಹೋರಾಟಕ್ಕೆ ಅಣಿಯಾದ್ರೆ, ಮೊದಲು ರಾಷ್ಟ್ರದ್ವಜ ಆತನ ಕೈಯಲ್ಲಿರುತ್ತೆ.

ಒಬ್ಬ ಮಾಜಿ ಕಳ್ಳನಿಗಿರುವ ರಾಷ್ಟ್ರಪ್ರೇಮ. ಶ್ರೀಸಾಮಾನ್ಯನಲ್ಲೂ ಮೂಡಿ ಬರಲಿ. ಕಳ್ಳನ ರಾಷ್ಟ್ರಪ್ರೇಮವನ್ನು ವೈಭವೀಕರಿಸುವ ಅವಶ್ಯಕತೆ ಇಲ್ಲದಿದ್ದರೂ, ಕೆಟ್ಟವರು ಒಳ್ಳೆಯವರಾದಾಗ ಅವರನ್ನು ಸಮಾಜಕ್ಕೆ ಪರಿಚಯಿಸುವುದು ಮಾಧ್ಯಮದ ಹೊಣೆಗಾರಿಕೆ..

ಶಿಗ್ಲಿ ಬಸ್ಯನಾ ರಾಷ್ಟ್ರಪ್ರೇಮದ ವಿಡಿಯೋ ಇಲ್ಲಿದೆ ನೋಡಿ