ಪೊಲೀಸ್ ಐಡಿ ಕಾರ್ಡ್​ ತೋರಿಸಿ ಅಜ್ಜಿಯ ಸರ ಕದ್ದ ಕಳ್ಳರು

ಇಷ್ಟೊಂದು ಬಂಗಾರ ಹಾಕಿಕೊಂಡು ಏಕೆ ಓಡಾಡುತ್ತಿದ್ದೀರಿ, ಕಳ್ಳತನಗಳು ನಡೆಯುತ್ತಿವೆ, ಬಿಚ್ಚಿಟ್ಟುಕೊಂಡು ಬ್ಯಾಗ್​ನಲ್ಲಿ ಹಾಕಿಕೊಳ್ಳಿ ಎಂದು ಮಹಿಳೆಗೆ ಬೈಕ್​ನಲ್ಲಿ ಬಂದವರು ಹೇಳಿದ್ದಾರೆ.

ಪೊಲೀಸ್ ಐಡಿ ಕಾರ್ಡ್​ ತೋರಿಸಿ ಅಜ್ಜಿಯ ಸರ ಕದ್ದ ಕಳ್ಳರು
ಕೋಟೆ ಪೊಲೀಸ್ ಸ್ಟೇಷನ್​

ಶಿವಮೊಗ್ಗದ ವಿದ್ಯಾನಗರದಲ್ಲಿ ನಡೆದ ಸರಗಳ್ಳತನ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಇಲ್ಲಿನ ಜಗದಾಂಬ ಬೀದಿಯಲ್ಲಿ ಈ ಘಟನೆ ನಡೆದಿದೆ. 

ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ

ಸ್ಥಳೀಯ ನಿವಾಸಿಯೊಬ್ಬರ ಬಳಿ, ಬೈಕ್​ನಲ್ಲಿ ಬಂದಿದ್ದ ಇಬ್ಬರು ತಾವಿಬ್ಬರು ಪೊಲೀಸರು ಎಂದು ಐಡಿ ಕಾರ್ಡ್​ ತೋರಿಸಿದ್ದಾರೆ. ಅದು ನಕಲಿ ಎಂಬುದು, ನಿವಾಸಿಗೆ ತಿಳಿದು ಬರಲಿಲ್ಲ. 

ದಿನದ ರಾಜಕಾರಣದ ಸುದ್ದಿ : ಮೋದಿ & ಬೊಮ್ಮಾಯಿ ವಿರುದ್ಧ ದೇವರಿಗೆ ಉಯಿಲು ಕೊಡಲಿ ಹರತಾಳು ಹಾಲಪ್ಪ

ಹಿರಿಯರಿದ್ದೀರಿ, ಇಷ್ಟೊಂದು ಬಂಗಾರ ಹಾಕಿಕೊಂಡು ಏಕೆ ಓಡಾಡುತ್ತಿದ್ದೀರಿ, ಕಳ್ಳತನಗಳು ನಡೆಯುತ್ತಿವೆ, ಬಿಚ್ಚಿಟ್ಟುಕೊಂಡು ಬ್ಯಾಗ್​ನಲ್ಲಿ ಹಾಕಿಕೊಳ್ಳಿ ಎಂದು ಮಹಿಳೆಗೆ ಬೈಕ್​ನಲ್ಲಿ ಬಂದವರು ಹೇಳಿದ್ದಾರೆ. 

ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್​ ನ್ಯೂಸ್ / ದಾವಣಗೆರೆ, ಆನವೇರಿ, ಮಲೆಬೆನ್ನೂರು, ಹರಿಹರ ಕೃಷಿಕರಿಗೆ ಅನುಕೂಲ

ಈ ವೇಳೆ ಹಿರಿಯ ಮಹಿಳೆಯು ಆಯ್ತು ಮನೆಗೆ ಹೋಗಿ ಬಿಚ್ಚಿಡುತ್ತೇನೆ ಎಂದಿದ್ದಾರೆ. ಆದರೆ ಇದಕ್ಕೆ ಒಪ್ಪದ ಬೈಕ್ ಸವಾರರು, ಇಲ್ಲಿಯೇ ಒಡವೆಗಳನ್ನು ತೆಗೆದು ಬ್ಯಾಗ್​ಗೆ ಹಾಕಿಕೊಳ್ಳಿ ಎಂದು ಖುದ್ದು ಅವರೇ ಸಹಾಯ ಮಾಡುವಂತೆ ಮಾಡಿ, ಬ್ಯಾಗ್​ಗೆ ಹಾಕಬೇಕಿದ್ದ ಒಡವೆಗಳನ್ನು ಕದ್ದೊಯ್ದಿದ್ದಾರೆ

ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್​ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ

ಸದ್ಯ ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ (kote police station) ಕೇಸ್​ ದಾಖಲಾಗಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ (Shivamogga city) ಸರಗಳ್ಳತನದ ಪ್ರಕರಣಗಳು ವರದಿಯಾಗಿಲ್ಲ. ಇದೀಗ ವರದಿಯಾಗಿದ್ದು, ಶಿವಮೊಗ್ಗಕ್ಕೆ ಮತ್ತೆ ಸರಗಳ್ಳರ ಗ್ಯಾಂಗ್ (chain snatching) ಎಂಟ್ರಿಕೊಟ್ಟಿದ್ಯಾ ಎಂಬ ಅನುಮಾನ ಮೂಡುತ್ತಿದೆ. 

ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್​/ ಕೇಳೋರೆ ಇಲ್ಲದ ಅನಾಥೆ ಸಾವಿಗೆನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್​/ EXCLUSIVE JP REPORT

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link