ಇತ್ತೀಚೆಗೆಷ್ಟೆ ಶರಾವತಿ ಸಂತ್ರಸ್ತರನ್ನು ಕರೆದುಕೊಂದು ಶಾಸಕ ಹರತಾಳು ಹಾಲಪ್ಪರವರು ಧರ್ಮಸ್ಥಳಕ್ಕೆ ಹೋಗಿದ್ದರು, ಅಲ್ಲಿ, ಸಂತ್ರಸ್ತರು ಧರ್ಮಸ್ಥಳದ ಮಂಜುನಾಥಸ್ವಾಮಿಯ ಮುಂದೆ ತಮ್ಮ ಕೋರಿಕೆಯನ್ನು ಇಟ್ಟು ಪೂಜೆ ಸಲ್ಲಿಸಿದ್ದರು, ನಂತರ ಕಾವಂದರಿಗೂ ತಮ್ಮ ಮನವಿ ಸಲ್ಲಿಸಿ ಶರಾವತಿ ಸಂತ್ರಸ್ತರ ಸ್ಥಿತಿಗತಿಗಳನ್ನು ತಿಳಿಸಿದ್ದರು. ಈ ಸಂಬಂಧ ಟುಡೆಯಲ್ಲಿನ ವರದಿ ಇಲ್ಲಿದೆ : ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮೊರೆ ಹೋದ ಶರಾವತಿ ಸಂತ್ರಸ್ತರು/ ದೇವರಿಗೆ ಮನವಿ ಸಲ್ಲಿಸಿ ಪೂಜೆ/ ಕೋರಿಕೆ
ಹರತಾಳು ಹಾಲಪ್ಪರವರ (haratalu halappa) ಈ ಭೇಟಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸರ್ಕಾರದ ಕೈಯಲ್ಲಿ ಆಗುವುದಿಲ್ಲ ಎಂದು ದೇವರ ಮೊರೆಹೋಗಿರಬಹುದು ಎಂದು ಬೇಳೂರು ಗೋಪಾಲ ಕೃಷ್ಣ (belurgopala krishna)ರವರು ಟೀಕಿಸಿದ್ದರು: ಅದರ ವಿವರ ಇಲ್ಲಿದೆ ಓದಿ : ಹರತಾಳು ಹಾಲಪ್ಪರವರು ಶರಾವತಿ ಸಂತ್ರಸ್ತರಿಗಾಗಿ ಧರ್ಮಸ್ಥಳದಲ್ಲಿ ನ್ಯಾಯ ಕೇಳಲು ಹೋಗಿದ್ದಕ್ಕೆ ಕಾಂತಾರ ಮಹಿಮೆ ಕಾರಣ
ಇದರ ಬೆನ್ನಲ್ಲೆ ನಿನ್ನೆ ಹೊಸನಗರದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ (kimmane ratnakar) ಕೂಡ ಹರತಾಳು ಹಾಲಪ್ಪರ ನಡೆಯನ್ನು ಟೀಕಿಸಿದ್ದಾರೆ. ವೋಟು ಇರುವುದು ಸಾಗರ ಕ್ಷೇತ್ರದಲ್ಲಿ, ಧರ್ಮಸ್ಥಳದಲ್ಲಿ ಅಲ್ಲ, ಶಾಸನ ಸಭೆಯಲ್ಲಿ ಕೇಳಬೇಕಾದ ಪ್ರಶ್ನೆಯನ್ನು ಧರ್ಮಸ್ಥಳದ ಸನ್ನಿಧಿಯಲ್ಲಿ ಕೇಳಿದರೇ ಪ್ರಯೋಜನವೇನು.
ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಭ್ರಷ್ಟರು ಎಸಿ ಆಗುವುದು ಬೇಡ/ ರಾಜ್ಯ ಸರ್ಕಾರಕ್ಕೆ ಒತ್ತಾಯ/ ಏನಿದು ಬೇಡಿಕೆ ವಿವರ ಇಲ್ಲಿದೆ ಓದಿ
ನಿಮ್ಮದೇ ಸರ್ಕಾರಗಳಿವೆ, ಶಾಸನ ಸಭೆಯಲ್ಲಿ ಪ್ರಶ್ನೆಯನ್ನು ಕೇಳಲಾಗದಿದ್ದರೇ ರಾಜೀನಾಮೆ ಕೊಡಿ , ಪ್ರಶ್ನೆ ಕೇಳಿಸಿ ಕೆಲಸ ಮಾಡಿಕೊಂಡು ಬರುವಂತವರನ್ನ ಜನರು ಆಯ್ಕೆ ಮಾಡುತ್ತಾರೆ. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿಯವರನ್ನು ಕೇಳಿ ಸಮಸ್ಯೆ ಬಗೆಹರಿಸುವುದು ಬಿಟ್ಟು ಮಾನಸಿಕ ನೆಮ್ಮದಿಗಾಗಿ ಆಶ್ರಯ ಬಯಸಿ ಹೋಗುವ ಧರ್ಮಸ್ಥಳಕ್ಕೆ ಹೋಗಿದ್ದೀರಿ.
ಕೊನೆಪಕ್ಷ ಅಲ್ಲಿ ದೇವರಿಗೆ ಉಯಿಲು ಬರೆದು ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಕೇಳಿ, ಕೆಲಸ ಮಾಡಿ ಕೊಡದಿದ್ದರೇ ಶಾಪ ಹಾಕಿ ಮೋದಿ, ಬೊಮ್ಮಾಯಿ ವಿರುದ್ಧ ಉಯಿಲು ಬರೆಯಿರಿ ಎಂದು ವ್ಯಂಗ್ಯವಾಡಿದರು
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
ನಮ್ಮ ಸೋಶಿಯಲ್ ಮೀಡಿಯಾ : ಟ್ವಿಟ್ಟರ್ : ಫೇಸ್ಬಕ್ : ಇನ್ಸ್ಟಾಗ್ರಾಮ್ : ಟೆಲಿಗ್ರಾಂ : ವಾಟ್ಸ್ಯಾಪ್
ಮೋದಿ & ಬೊಮ್ಮಾಯಿ ವಿರುದ್ಧ ಹುಯಿಲು ಕೊಡಲಿ ದೇವರಿಗೆ #kimmaneratnakar #shivamogga #harataluhalappa #sharavati pic.twitter.com/qr5X9HAUeU
— malenadutoday.com (@CMalenadutoday) December 24, 2022




