ಶಿವಮೊಗ್ಗ ಜಿಲ್ಲೆ ಕೇವಲ ಒಂದು ಗಂಟೆಯಲ್ಲಿ ನಡೆಯುವ ಎಳ್ಳಮಾವಾಸ್ಯೆ ವಿಶೇಷ ಜಾತ್ರೆ ಬಗ್ಗೆ ನಿಮಗೆ ಗೊತ್ತಾ?

ಕೇವಲ ಒಂದು ಗಂಟೆಗಳ ಕಾಲ ನಡೆಯುವ ಜಾತ್ರೆ ಎಂದೇ ಗುಮ್ಮನಮಕ್ಕಿಯ ಎಳ್ಳಮಾವಾಸ್ಯೆ ಜಾತ್ರೆ ಹೆಸರು ಪಡೆದಿದೆ.

ಸದ್ಯ ಶಿವಮೊಗ್ಗ ಜಿಲ್ಲೆಯ ಹಲವೆಡೆ ಎಳ್ಳಮಾವಾಸ್ಯೆ ಜಾತ್ರೆಗಳು ನಡೆಯುತ್ತಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಗುಮ್ಮನಮಕ್ಕಿಯಲ್ಲಿ ನಡೆಯುವ ಜಾತ್ರೆ ವಿಶೇಷವಾಗಿರುತ್ತದೆ. ಗುತ್ತಿಯಡೆಹಳ್ಳಿ ಗುತ್ಯಮ್ಮ, ಹೊಸಹಳ್ಳಿ, ಗಾಳಿಮಾರಿ, ಸಮಕಾನಿಯಮ್ಮ, ಹಾಲುಬಳ್ಳಿ ಚಾಮುಂಡೇಶ್ವರಿ ಹೀಗೇ ಒಟ್ಟು ಐದು ಶಕ್ತಿ ದೇವತೆಗಳನ್ನು ಒಂದೇ ಕಡೆ ತಂದು ವಿಶೇಷ ಜಾತ್ರೆಯನ್ನು ನಡೆಸಲಾಗುತ್ತದೆ. 

ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ

ತಲೆಮಾರಿನ ಕಥೆಗೊತ್ತಾ

ಪುರಾಣಗಳ ಪ್ರಕಾರ, ಈ ಐದು ಶಕ್ತಿ ದೇವತೆಗಳು ಅಕ್ಕತಂಗಿಯರು ಎನ್ನಲಾಗುತ್ತಿದೆ. ವರ್ಷಕ್ಕೊಮ್ಮೆ ಈ ಐದು ದೇವತೆಗಳು ವರ್ಷಕ್ಕೊಮ್ಮೆ ತುಂಗಾನದಿ ತೀರದಲ್ಲಿ ಒಟ್ಟು ಸೇರುವ ಪ್ರತೀತಿಯಿತ್ತಂತೆ. ಇನ್ನೂ ಗುಮ್ಮನಮಕ್ಕಿ ಎಂಬಲ್ಲಿ ಹಿಂದೆ ದುಷ್ಟಶಕ್ತಿಗಳ ಕಾಟವಿದ್ದಿತಂತೆ. ಈ ಹಿನ್ನೆಲೆಯಲ್ಲಿ ದೈವಶಕ್ತಿಗಳು ಅಲ್ಲಿ ಸೇರಿ ದುಷ್ಟಶಕ್ತಿಗಳನ್ನು ದೂರ ಮಾಡುತ್ತಿದ್ದರು ಎಂಬುದು ನಂಬಿಕೆ. 

ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ

ಈ ಹಿನ್ನೆಲೆಯಲ್ಲಿ ಎಳ್ಳಮಾವಾಸ್ಯೆ ದಿನ ಐದು ಶಕ್ತಿ ದೇವತೆಗಳನ್ನು ಪಲ್ಲಕ್ಕಿ ಮೇಲೆ ಗುಮ್ಮನಮಕ್ಕಿಗೆ ಕರೆತಂದು ಅಲ್ಲಿಯ ಕಟ್ಟೆಗಳ ಮೇಲೆ ಇಟ್ಟು ವಿಶೇಷ ಪೂಜೆ ನಡೆಸಲಾಗುತ್ತದೆ. ಈ ವೇಳೆ ಪಲ್ಲಕ್ಕಿಯಲ್ಲಿ ಬರುವ ಶಕ್ತಿ ದೇವತೆಗಳ ಚಿತ್ರಣ, ಒಂದು ರೀತಿಯ ವಿಶಿಷ್ಟತೆಯನ್ನು ಹೊಂದಿರುತ್ತದೆ.  ಇಲ್ಲಿ ಪೂಜೆ ಸಲ್ಲಿಸಿ, ಆನಂತರ ದೇವತೆಗಳ ಮೂಲ ಸ್ಥಾನಕ್ಕೆ ಹಿಂತಿರುಗಿ ಹೋಗುವ ಕ್ರಮವಿದೆ. 

ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್​ ನ್ಯೂಸ್ / ದಾವಣಗೆರೆ, ಆನವೇರಿ, ಮಲೆಬೆನ್ನೂರು, ಹರಿಹರ ಕೃಷಿಕರಿಗೆ ಅನುಕೂಲ

ಸೀಮೆಯ ದೇವತೆಗಳ ವಿಶೇಷತೆಯೇ ಬೇರೆ

ತೀರ್ಥಹಳ್ಳಿ ಭಾಗದಲ್ಲಿ ಆಯಾ ಸೀಮೆಯ ದೇವತೆಗಳು ಎಂದು ಕರೆಯುವ ವಾಡಿಕೆ ಇದೆ. ಅದೇ ರೀತಿಯಲ್ಲಿ ಈ ಶಕ್ತಿ ದೇವತೆಗಳನ್ನು ಸೀಮೆಯ ದೇವತೆಗಳು ಎಂದು ಕರೆಯುತ್ತಾರೆ. ವಿಶೇಷ ಅಂದರೆ, ಪಲ್ಲಕ್ಕಿಯಲ್ಲಿ ಸೇರುವ ದೇವತೆಗಳ ಬಳಿಯಲ್ಲಿ ಭಕ್ತರು ಗುರುತಪ್ಪಣೆಯನ್ನು ಪಡೆಯುತ್ತಾರೆ. ಇಷ್ಟಾರ್ಥಗಳನ್ನು ಸ್ಮರಿಸಿಕೊಂಡು ಪಲ್ಲಕಿಯ ಬಳಿಯಲ್ಲಿ ಬೇಡಿಕೊಂಡರೆ, ಗುರುತೊಂದನ್ನ ಮುಟ್ಟುವ ಮೂಲಕ ದೇವತೆಗಳು ಪಲ್ಲಕಿಯ ಮೂಲಕವೇ ಉತ್ತರ ನೀಡುತ್ತವೆ ಎಂಬ ನಂಬಿಕೆ ಇಲ್ಲಿದೆ. 

ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್​ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ

ಕೇವಲ ಒಂದು ಗಂಟೆಯ ಜಾತ್ರೆ

ಕೇವಲ ಒಂದು ಗಂಟೆಗಳ ಕಾಲ ನಡೆಯುವ ಜಾತ್ರೆ ಎಂದೇ ಗುಮ್ಮನಮಕ್ಕಿಯ ಎಳ್ಳಮಾವಾಸ್ಯೆ ಜಾತ್ರೆ ಹೆಸರು ಪಡೆದಿದೆ. ಅಂದರೆ, ಸಂಜೆ ನಾಲ್ಕು ಗಂಟೆ ಸುಮಾರಿಗೆ ಶಕ್ತಿ ದೇವತೆಗಳು ಪಲ್ಲಕಿಯ ಮೂಲಕ ಬಂದು ಸಂಜೆ ಐದು ಗಂಟೆಯ ಹೊತ್ತಿಗಾಗಲೇ ಹೊರಡಲು ಅಣಿಯಾಗುತ್ತವೆ. ಅಲ್ಲಿಗೆ ಜಾತ್ರೆ ಮುಗಿದಂತೆ, ಅಷ್ಟರಲ್ಲಿಯೇ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಸೇರಿ ಜಾತ್ರೆಯಲ್ಲಿ ದೇವತೆಗಳ ಆಶೀರ್ವಾದ ಪಡೆಯುತ್ತಾರೆ 

ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್​/ ಕೇಳೋರೆ ಇಲ್ಲದ ಅನಾಥೆ ಸಾವಿಗೆ, ನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್​/ EXCLUSIVE JP REPORT

ಮಲೆನಾಡು ಶಿವಮೊಗ್ಗದಲ್ಲಿ ಇಂತಹ ಹಲವು ವಿಶಿಷ್ಟ ಜಾತ್ರೆಗಳು ಉತ್ಸವಗಳು ನಡೆಯುತ್ತವೆ. ಅದರ ಹಿಂದೆ ಸಾಕಷ್ಟು ವಿಶಿಷ್ಟ ಹಿನ್ನೆಲೆಗಳು ಇರುತ್ತವೆ. ಮಲೆನಾಡಿಗರ ನಂಬಿಕೆಗಳ, ಆಚರಣೆಗಳ ಹಾಗೂ ಮಲೆನಾಡಿಗರ ವಿಶಿಷ್ಟತೆಯ ಇನ್ನಷ್ಟು ವಿಡಿಯೋಗಳನ್ನು ಓದುಗರ  ಮುಂದಿಡುವ ನಮ್ಮ ಪ್ರಯತ್ನ ನಿಮಗೆ ಇಷ್ಟವಾದಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ

ಇದನ್ನು ಸಹ ಓದಿ : ಹರತಾಳು ಹಾಲಪ್ಪರವರು ಶರಾವತಿ ಸಂತ್ರಸ್ತರಿಗಾಗಿ ಧರ್ಮಸ್ಥಳದಲ್ಲಿ ನ್ಯಾಯ ಕೇಳಲು ಹೋಗಿದ್ದಕ್ಕೆ ಕಾಂತಾರ ಮಹಿಮೆ ಕಾರಣ

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link