Shimoga Sogane airport : ಮೋದಿ ಆಗಮನಕ್ಕೆ ಕಾಯುತ್ತಿದೆ ಶಿವಮೊಗ್ಗವಿಮಾನ ನಿಲ್ದಾಣ! ಉದ್ಘಾಟನೆಗೆ ಸಿದ್ದಗೊಂಡ AIRPORTನ ಡ್ರೋಣ್ ದೃಶ್ಯ ನೋಡಿದ್ರಾ

Shimoga Sogane airport captured on drone camera

ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ಧಾಣದ ಕಾಮಗಾರಿ ಆಲ್​ಮೋಸ್ಟ್ ಕಂಪ್ಲೀಟ್ ಆಗಿದೆ. ಇನ್ನೇನು ಇದೇ ಫೆಬ್ರವರಿ27 ರಂದು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಸೋಶಿಯಲ್ ಮೀಡಿಯಾ ಕ್ಯಾಂಪೇನ್​ಗಳು ಜೋರಾಗಿ ನಡೆಯುತ್ತಿವೆ. 

SUMALATHA : ಬಿಜೆಪಿಗೆ ಸಂಸದೆ ಸುಮಲತಾ! ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರು ಹೇಳಿದ್ದೇನು!? ವಿವರ ಇಲ್ಲಿದೆ

ನಿನ್ನೆಯಷ್ಟೆ  ಶಿವಮೊಗ್ಗ ನಗರದ ವಿದ್ಯಾನಗರದಲ್ಲಿನ ಪ್ಲೇಓವರ್​ನ ದೃಶ್ಯ ವೈರಲ್​ ಆಗಿತ್ತು. ಇದರ ಬೆನ್ನಲ್ಲೆ ಸೋಶಿಯಲ್ ಮೀಡಿಯಾದಲ್ಲಿ ವಿಮಾನ ನಿಲ್ಧಾಣದ ಡ್ರೋಣ್​​ ದೃಶ್ಯಗಳು ಹರಿದಾಡುತ್ತಿವೆ. 662.38 ಎಕರೆ ಪ್ರದೇಶದಲ್ಲಿ 449 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೋಗಾನೆ ವಿಮಾನ ನಿಲ್ಧಾಣಕ್ಕೆ ಯಾರ ಹೆಸರು ಇಡಬೇಕು ಎಂಬ ವಿಚಾರ ಚರ್ಚೆಯಲ್ಲಿರುವಂತೆಯೇ ಅಧಿಕೃತ ಹೆಸರಿನ ಘೋಷಣೆಯು ಸಹ ಇನ್ನೂ ಗೌಪ್ಯವಾಗಿದೆ. ಡಾ.ಬಿ.ಆರ್​ ಅಂಬೇಡ್ಕರ್​, ಶಾಂತವೇರಿ ಗೋಪಾಲಗೌಡರು, ಕುವೆಂಪು, ಎಸ್​,ಬಂಗಾರಪ್ಪ, ಶಿವಪ್ಪನಾಯಕರು ಸೇರಿದಂತೆ ಹಲವು ಮಹನೀಯರ ಹೆಸರನ್ನು ಇಡಬೇಕು ಎಂಬ ಒತ್ತಾಯ ಜೋರಾಗಿ ಕೇಳಿಬರುತ್ತಿದೆ. ಇದಕ್ಕಾಗಿ ಪ್ರತಿಭಟನೆಗಳು ಹಾಗೂ ಚರ್ಚೆಗಳು ಸಹ ಬಿರುಸಾಗಿ ನಡೆಯುತ್ತಿವೆ.

*shivamogga airport news : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಡಾ.ಬಿ.ಆರ್​. ಅಂಬೇಡ್ಕರ್​ರವರ ಹೆಸರಿಡಿ!*

3050 ಮೀಟರ್​  ಉದ್ದ, 45 ಮೀಟರ್​ ಅಗಲದ ರನ್‍ವೇ, ಆರ್​ಇಎಸ್‍ಎ, ಬಾಹ್ಯ(ಪೆರಿಫಿರಲ್) ರಸ್ತೆ, ಎಪ್ರಾನ್, ಟ್ಯಾಕ್ಸಿ ವೇ, ಕಾಂಪೌಂಡ್, ಕಾರ್ ಪಾರ್ಕಿಂಗ್ ಏರಿಯಾ, ಇತರೆ ಕಾಮಗಾರಿಗಳು ಹಾಗೂ 4340 ಚದುರ ಮೀಟರ್ ಅಳತೆಯಲ್ಲಿ ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, 2347 ಚದುರ ಮೀಟರ್ ಅಳತೆಯಲ್ಲಿ ಎಟಿಸಿ ಕಟ್ಟಡ, 2 ಎಲೆಕ್ಟ್ರಿಕ್ ಸಬ್ ಸ್ಟೇಷನ್, 1 ಫೈರ್ ಸ್ಟೇಷನ್ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇರಲಿದೆ. ಈ ಮಧ್ಯೆ  ವಿಮಾನ ನಿಲ್ದಾಣಕ್ಕೆ (Airport) ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್‍ಐಐಡಿಸಿ) ಅಧ್ಯಕ್ಷ ಡಾ.ಕೆ.ಶೈಲೇಂದ್ರ ಬೆಲ್ದಾಳೆ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದ್ಧಾರೆ.

hosanagara news : ಕೋರ್ಟ್​ ವ್ಯಾಜ್ಯದ ನಡುವೆ ಪಂಜುರ್ಲಿ ದೈವಕ್ಕಾಗಿ ನಿರ್ಮಿಸಿದ್ದ ಹೊಸ ದೇಗುಲ ಕಟ್ಟಡ ಧ್ವಂಸ*

VISL ಗೇ ಶಾಹಿ ಗಾರ್ಮೆಂಟ್ಸ್​ ಪರ್ಯಾಯವೇ? ಅಪ್ಪ ಕಳ್ಳ-ಮಗ ಸುಳ್ಳ! ಭದ್ರಾವತಿಯಲ್ಲಿ ಸಂಸದರಿಗೆ ಘೇರಾವ್​! ಬಿಜೆಪಿಗೆ ಮುಖಭಂಗ! ಫೆ.3 ಕ್ಕೆ ಹೆಚ್​​ಡಿಕೆ ಎಂಟ್ರಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com