cs shadakshari : ಎಲೆಕ್ಷನ್​ಗೆ ನಿಲ್ತಾರಾ ರಾಜ್ಯಾಧ್ಯಕ್ಷ!? ಸಿಎಸ್​ ಷಡಾಕ್ಷರಿ ಹೇಳಿದ್ದೇನು? ಸರ್ಕಾರಿ ನೌಕರರಿಗೆ ಇನ್ಮುಂದೆ ಸಿಗಲಿದೆ ಈ ಸೌಲಭ್ಯ

cs shadakshari: Will CS Shadakshari, president of the State Government Employees' Association, contest the election? What did Shadakshari say at a press conference in this regard? Construction of Family Mart for Government Employees

cs shadakshari :  ಎಲೆಕ್ಷನ್​ಗೆ ನಿಲ್ತಾರಾ ರಾಜ್ಯಾಧ್ಯಕ್ಷ!? ಸಿಎಸ್​ ಷಡಾಕ್ಷರಿ ಹೇಳಿದ್ದೇನು? ಸರ್ಕಾರಿ ನೌಕರರಿಗೆ ಇನ್ಮುಂದೆ ಸಿಗಲಿದೆ ಈ ಸೌಲಭ್ಯ
cs shadakshari : ಎಲೆಕ್ಷನ್​ಗೆ ನಿಲ್ತಾರಾ ರಾಜ್ಯಾಧ್ಯಕ್ಷ!? ಸಿಎಸ್​ ಷಡಾಕ್ಷರಿ ಹೇಳಿದ್ದೇನು? ಸರ್ಕಾರಿ ನೌಕರರಿಗೆ ಇನ್ಮುಂದೆ ಸಿಗಲಿದೆ ಈ ಸೌಲಭ್ಯ

cs shadakshari  : ಶಿವಮೊಗ್ಗದ (SHIVAMOGGA) ಎನ್‌ಇಎಸ್‌ ಮೈದಾನದಲ್ಲಿ ಇದೇ  ಫೆಬ್ರವರಿ.4ರಂದು ಬೆಳಿಗ್ಗೆ 10.30ಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸರ್ಕಾರಿ ನೌಕಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ (cs shadakshari ) ಮಾಹಿತಿ ನೀಡಿದ್ಧಾರೆ. ಈ ಸಂಬಂಧ ನಿನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರಿಗಾಗಿ ಫ್ಯಾಮಿಲಿ ಮಾರ್ಟ್‌ನ್ನು ಉದ್ಘಾಟಿಸಲಾಗುತ್ತಿದೆ ಎಂದರು ಕಾರ್ಯಕ್ರಮದಲ್ಲಿ ತಾಲೂಕಿನ 7 ರಿಂದ 8 ಸಾವಿರ ನೌಕರರು ಭಾಗವಹಿಸಲಿದ್ದಾರೆ. ನೌಕರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರುಗಳಿಗೆ ಒಒಡಿ ಸೌಲಭ್ಯವನ್ನು ಜಿಲ್ಲಾಧಿಕಾರಿಯವರು ಮಂಜೂರು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು

*BREAKING NEWS : ಶಿಫಾರಸ್ಸುಗಳಿಗೆ ಸಿಎಂ ಶಾಕ್​! ತಹಶೀಲ್ದಾರ್​ ಸೇರಿ ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆಗಳಿಗೆ ಬ್ರೇಕ್*

cs shadakshari   ಸಿಎಸ್​ ಷಡಾಕ್ಷರಿ ಹೇಳಿದ್ದೇನು?

ಇದೇ ವೇಳೆ ಪ್ರಶ್ನಯೊಂದಕ್ಕೆ ಉತ್ತರಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ (CS Shadakshari)  ನಾನು ರಾಜಕೀಯ ಪ್ರವೇಶಿಸುವುದಿಲ್ಲ. ಈಗಾಗಲೇ ಈ ವಿಚಾರವನ್ನು ಸ್ಪಷ್ಟಪಡಿಸಿದ್ದೇನೆ. ರಾಜ್ಯದಲ್ಲಿರುವ 6 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುತ್ತಿದ್ದೇನೆ. ಹೀಗಾಗಿ, ರಾಜ್ಯದ 224 ಕ್ಷೇತ್ರಗಳ ನೌಕರರು ನನಗೆ ಸೇರಿದವರಾಗಿದ್ದಾರೆ. ನೌಕರರ ಪರವಾಗಿ ಸದಾ ಹೋರಾಡುತ್ತೇನೆ’ ಎಂದು ತಿಳಿಸಿದರು.

ಏನಿದು ಫ್ಯಾಮಿಲಿ ಮಾರ್ಟ್!

ಸರ್ಕಾರಿನೌಕರರಿಗೆಂದೇ ಫ್ಯಾಮಿಲಿ ಮಾರ್ಟ್‌ನ್ನು ಸರ್ಕಾರಿ ನೌಕರರ ಭವನದ ಪಕ್ಕದಲ್ಲಿಯೇ  ಸಿದ್ಧಪಡಿಸಲಾಗಿದೆ. ಸಂಸದ ರಾಘವೇಂದ್ರ ಅವರು ಇದರ ಉದ್ಘಾಟಿಸಲಿದ್ದಾರೆ. ಇದರಲ್ಲಿ ಶೇ.10 ರಿಂದ 60ರವರೆಗೆ ರಿಯಾಯಿತಿ ಸಿಗಲಿದೆ. ಸುಮಾರು 4 ಕೋಟಿ ರು. ವೆಚ್ಚ ಮಾಡಿ ಇದನ್ನು ಸಿದ್ಧಪಡಿಸಲಾಗಿದೆ. ಖಾಸಗಿ ಸಂಸ್ಥೆಯೊಂದು ಇದನ್ನು ನಿರ್ವಹಿಸಲಿದೆ. ಇಲ್ಲಿನ ಪ್ರತಿಕ್ರಿಯೆ ನೋಡಿದ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಮಾರ್ಟ್‌ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದರು.

ದಿನಸಿ, ಅಗತ್ಯ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಔಷಧ ಸೇರಿದಂತೆ 1700ಕ್ಕೂ ಹೆಚ್ಚು ವಸ್ತುಗಳು ಶೇ. 10 ರಿಂದ 60 ವರೆಗೆ ರಿಯಾಯಿತಿ ದರದಲ್ಲಿ ಸಿಗಲಿವೆ. ಸರ್ಕಾರಿ ನೌಕರರಿಗೆ ಇದರಿಂದ ಪ್ರಯೋಜನ ಆಗಲಿದೆ. ಸರ್ಕಾರಿ ನೌಕರರಿಗೆ ರಾಜ್ಯದಲ್ಲಿ ಎಲ್ಲಿಯೂ ಇಲ್ಲದಷ್ಟು ಸೌಲಭ್ಯ ಶಿವಮೊಗ್ಗದಲ್ಲಿ ಸಿಕ್ಕಿದೆ. ಎಲ್ಲಾ ತಾಲೂಕಿನ ಸರ್ಕಾರಿ ನೌಕರರ ಭವನಗಳಿಗೂ ಅನುದಾನ ನೀಡಲಾಗಿದೆ. ಸರ್ಕಾರಿ ನೌಕರರ ಸೊಸೈಟಿ ಮೂಲಕ 80 ಕೋಟಿ ಸಾಲ ನೀಡಲಾಗಿದೆ. ಅತ್ಯಂತ ಕಡಿಮೆ ದರದಲ್ಲಿ ನಿವೇಶನಗಳನ್ನು ಒದಗಿಸಲಾಗಿದೆ. ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದೆ ಎಂದರು.  

TODAY NEWS : ಜನವರಿ 30 ಕ್ಕೆ ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧ! ಕಾರಣ ಇಲ್ಲಿದೆ! ಇವತ್ತಿನ ಇನ್ನಷ್ಟು ಸುದ್ದಿಗಳು ಇಲ್ಲಿವೆ

*#SAVEVISL : ವಿಐಎಸ್​ಎಲ್​ ಕಾರ್ಖಾನೆಯು ಅಯೋಧ್ಯೆ ಇದ್ದಂತೆ | ಫ್ಯಾಕ್ಟರಿ ಉಳಿಸಲು ಧರಣಿ ಕುಳಿತ ವಿನಯ್ ಗುರೂಜಿ!| ಭದ್ರಾವತಿಯಲ್ಲಿ ಭುಗಿಲೆದ್ದ ಹೋರಾಟ*

*Secretary, Ministry of Civil Aviation : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್ಸ್​​ ಇಲ್ಲಿದೆ*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com