TODAY NEWS : ಜನವರಿ 30 ಕ್ಕೆ ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧ! ಕಾರಣ ಇಲ್ಲಿದೆ! ಇವತ್ತಿನ ಇನ್ನಷ್ಟು ಸುದ್ದಿಗಳು ಇಲ್ಲಿವೆ

TODAY NEWS: Ban on sale of meat in Shimoga on January 30 Here's the reason! Here's more news from today

TODAY NEWS :  ಜನವರಿ 30 ಕ್ಕೆ ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧ! ಕಾರಣ ಇಲ್ಲಿದೆ!  ಇವತ್ತಿನ ಇನ್ನಷ್ಟು ಸುದ್ದಿಗಳು ಇಲ್ಲಿವೆ
TODAY NEWS : ಜನವರಿ 30 ಕ್ಕೆ ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧ! ಕಾರಣ ಇಲ್ಲಿದೆ! ಇವತ್ತಿನ ಇನ್ನಷ್ಟು ಸುದ್ದಿಗಳು ಇಲ್ಲಿವೆ

ಜ.30 ರಂದು ಮಾಂಸ ಮಾರಾಟ ನಿಷೇಧ

ಶಿವಮೊಗ್ಗ ಜ.27: ಶಿವಮೊಗ್ಗ ಮಹಾನಗರ ಪಾಲಿಕೆಯು ಜನವರಿ 30 ರ ಸರ್ವೋದಯ ದಿನದಂದು ನಗರದಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ನೀಡಿದೆ. ಅಂದು ಕಡ್ಡಾಯವಾಗಿ ಮಾಂಸದ ಉದ್ದಿಮೆಯನ್ನು ಮುಚ್ಚುವುದು ಹಾಗೂ ಮಾಂಸ ಮಾರಾಟ ನಿಲ್ಲಿಸುವುದು. ಈ ಆದೇಶ ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕರು ತಿಳಿಸಿದ್ದಾರೆ.

ಜ.31: ಮೆಸ್ಕಾಂ : ಜನ ಸಂಪರ್ಕ ಸಭೆ

ಹೊಸನಗರ, ಜ.27: ಮೆಸ್ಕಾಂ ಹೊಸನಗರ ಉಪ ವಿಭಾಗ ಕಚೇರಿಯಲ್ಲಿ ಜ. 31 ರಂದು ಬೆಳಿಗ್ಗೆ 11 ಗಂಟೆ n ಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ.ಮೆಸ್ಕಾಂನ ಅಧಿಕಾರಿಗಳು ಸಭೆಯಲ್ಲಿ ಭಾಗವಹಿ ಸಲಿದ್ದಾರೆ. ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದ ರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳು ವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ 05:9448289517

*BIG EXCLUSIVE : Cafe Coffee Day : ಅವರ್ ಬಿಟ್, ಇವರ್ ಬಿಟ್​ ತೀರ್ಥಹಳ್ಳಿ ಎಲೆಕ್ಷನ್​ ಕಣಕ್ಕೆ ಬಂತು ಡಿಕೆ ಶಿವಕುಮಾರ್ ಅಳಿಯನ ಹೆಸರು*

ಸವಿತಾ ಮಹರ್ಷಿ ಜಯಂತಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಸವಿತಾ ಸಮಾಜ, ಶಿವಮೊಗ್ಗ,  ಇವರ ಸಂಯಕ್ತಾಶ್ರಯದಲ್ಲಿ ಜ.28 ರ ಸಂಜೆ 4 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಸವಿತಾ ಮಹರ್ಷಿ ಜಯಂತಿಯನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ರೇಷ್ಮೆ, ಯುವ ಸಬಲೀಕರಣ, ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಇವರು ನೆರವೇರಿಸುವರು. ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಕನ್ನಡ ಮತ್ತು ಸಂಸ್ಕೃತಿ. ಇಲಾಖೆ ಹಾಗೂ ಇಂಧನ ಸಚಿವರಾದ ವಿ.ಸುನಿಲ್ ಕುಮಾರ್, ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಇವರ ಘನ ಉಪಸ್ಥಿತಿ ಇರಲಿದೆ. ಶಾಸಕರಾದ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲಾ ಸವಿತಾ ಸಮಾಜ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿ.ಪಂ ಸಿಇಓ  ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸವಿತಾ ಪೀಠ ಮಹಾಸಂಸ್ಥಾನ ಮಠ ಕೊಂಚೂರು, ಆರ್.ರಾಘವೇಂದ್ರ ಶಿಕಾರಿಪುರ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.

*#SAVEVISL : ವಿಐಎಸ್​ಎಲ್​ ಕಾರ್ಖಾನೆಯು ಅಯೋಧ್ಯೆ ಇದ್ದಂತೆ | ಫ್ಯಾಕ್ಟರಿ ಉಳಿಸಲು ಧರಣಿ ಕುಳಿತ ವಿನಯ್ ಗುರೂಜಿ!| ಭದ್ರಾವತಿಯಲ್ಲಿ ಭುಗಿಲೆದ್ದ ಹೋರಾಟ*

ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಮುಂದೂಡಿಕೆ

ಶಿವಮೊಗ್ಗ ತಾಲ್ಲೂಕಿನ ಹೊಳಲೂರಿನಲ್ಲಿ ಕಂದಾಯ ಸಚಿವರಾದ ಆರ್.ಅಶೋಕ್ ಇವರ ಅಧ್ಯಕ್ಷತೆಯಲ್ಲಿ  ದಿನಾಂಕ : 28-01-2023 ರಂದು ಏರ್ಪಡಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿರುತ್ತದೆ.

ಜ.28 ರಂದು ವಿದ್ಯುತ್ ವ್ಯತ್ಯಯ

ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-5 ರಲ್ಲಿ ಜ.28 ರಂದು ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಎಲ್‍ಐಸಿ ಆಫೀಸ್, ತೆರಿಗೆ ಕಚೇರಿ, ಗೋಪಾಳ ಮುಖ್ಯರಸ್ತೆ, ಮೋರ್ ಅಕ್ಕಪಕ್ಕ, ಗೋಪಾಳ ಎ, ಬಿ, ಸಿ, ಡಿ, ಇ ಮತ್ತು ಎಫ್ ಬ್ಲಾಕ್, ಕೆಹೆಚ್‍ಬಿ ಎಲ್‍ಐಜಿ, ಎಂಐಜಿ ಅಲ್‍ ಹರೀಮ್ ಲೇಔಟ್, 100 ಅಡಿ ರಸ್ತೆ, ಪೆಟ್ರೋಲ್ ಬಂಕ್, ವಾಣಿಜ್ಯ ತೆರಿಗೆ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

*Secretary, Ministry of Civil Aviation : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್ಸ್​​ ಇಲ್ಲಿದೆ*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com