ಲಿಯೋನ್‌ಗೆ ಹೋಗಿ ಶಿವಮೊಗ್ಗಕ್ಕೆ ಬಂದ ವ್ಯಕ್ತಿ 6 ವರ್ಷದಿಂದ ನಾಪತ್ತೆ | ಇವರಿಬ್ಬರ ಬಗ್ಗೆ ಸುಳಿವು ಸಿಕ್ಕರೆ ತಕ್ಷಣ ಪೊಲೀಸರಿಗೆ ತಿಳಿಸಿ

A notice has been issued regarding the disappearance of two persons at Vinobanagar police station limits in Shivamogga.

ಲಿಯೋನ್‌ಗೆ ಹೋಗಿ ಶಿವಮೊಗ್ಗಕ್ಕೆ ಬಂದ ವ್ಯಕ್ತಿ 6 ವರ್ಷದಿಂದ ನಾಪತ್ತೆ | ಇವರಿಬ್ಬರ ಬಗ್ಗೆ  ಸುಳಿವು ಸಿಕ್ಕರೆ ತಕ್ಷಣ ಪೊಲೀಸರಿಗೆ ತಿಳಿಸಿ
Vinobanagar police station limits

SHIVAMOGGA | MALENADUTODAY NEWS | Jun 26, 2024  ಮಲೆನಾಡು ಟುಡೆ  

ಶಿವಮೊಗ್ಗ ವಿನೋಬನಗರ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ಸುದೀರ್ಘ ಅವಧಿಯಿಂದ ಮಿಸ್‌ ಆಗಿರುವ ಇಬ್ಬರು ವ್ಯಕ್ತಿಗಳ ಬಗ್ಗೆ ಪ್ರಕಟಣೆ ನೀಡಲಾಗಿದೆ. ಅದರ ವಿವರ ಹೀಗಿದೆ. 

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ರಾಹಿಂ ಖಲೀಲ್ ವುಲ್ಲಾ ಬಿನ್ ಅಬ್ದುಲ್ ಸಮ್ಮದ್ 39 ವರ್ಷ ಎಂಬುವವರು ವೆಸ್ಟ್ ಆಪ್ರಿಕಾದ ಸಿರಾ ಲಿಯೋನ್ ಎಂಬ ಪ್ರದೇಶಕ್ಕೆ ಕೆಲಸ ಮಾಡಲು ಹೋಗಿದ್ದರು. ಆ ಬಳಿಕ 2016 ರಲ್ಲಿ ಭಾರತಕ್ಕೆ ವಾಪಸ್ ಬಂದಿದ್ದರು. ಆದರೆ ಮನೆಗೆ ಬರದೆ 7 ವರ್ಷದಿಂದ ಕಾಣೆಯಾಗಿದ್ದಾರೆ. ಇವರ ವಿವರ ಹೀಗಿದೆ ಸುಮಾರು 5.8 ಅಡಿ ಎತ್ತರ ದುಂಡುಮುಖ ಕಪ್ಪಕೂದಲು ಗೋಧಿ ಮೈ ಬಣ್ಣ ಹೊಂದಿರುತ್ತಾರೆ. ಇವರ ಸುಳಿವು ಸಿಕ್ಕರೆ ವಿನೋಬನಗರ ಪೊಲೀಸ್‌ ಠಾಣೆಯನ್ನ ಸಂಪರ್ಕಿಸಲು ಸೂಚಿಸಲಾಗಿದೆ. 

ಮತ್ತೊಂದು ಪ್ರಕರಣದಲ್ಲಿ ನಗರದ ಕಿರಣ್ ಜಿ ಬಿನ್ ಗಣೇಶ್ ಎಂಬ 30 ವರ್ಷ ಯುವಕ ಏಪ್ರಿಲ್ 2023 ರಲ್ಲಿ ಮನೆಯಿಂದ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಈವರೆಗೂ ವಾಪಸ್ಸು ಬಂದಿರುವುದಿಲ್ಲ. ಈ ವ್ಯಕ್ತಿಯೂ ಸುಮಾರು 5.5 ಅಡಿ ಎತ್ತರ ದುಂಡುಮುಖ ಕಪ್ಪಕೂದಲು ಗೋಧಿ ಮೈ ಬಣ್ಣ ಮನೆಯಿಂದ ಹೋಗುವಾಗ ಲೈಟ್ ಬ್ಲೂ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಸಿರುತ್ತಾರೆ ಎಂದು ಪ್ರಕಟಣೆ ನೀಡಲಾಗಿದೆ. 

ಈ ಚಹರೆಯ ವ್ಯಕ್ತಿಗಳು ಕಂಡ ಬಂದಲ್ಲಿ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ, ದೂ.ಸಂ.: 9480803308 ಅಥವಾ ಕಂಟ್ರೋಲ್ ರೂಂ.ನಂ.: 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿರಿಸಿರುತ್ತಾರೆ.