ಡಿಪ್ಲೊಮಾ ಕೋರ್ಸ್‌ ಸೇರಲು ಬಯಸಿದ್ದೀರಾ? ಮಾಚೇನಹಳ್ಳಿಯಲ್ಲಿಯೇ ಇದೆ ಅವಕಾಶ

Want to join a diploma course? The opportunity is in Machenahalli

ಡಿಪ್ಲೊಮಾ ಕೋರ್ಸ್‌ ಸೇರಲು ಬಯಸಿದ್ದೀರಾ? ಮಾಚೇನಹಳ್ಳಿಯಲ್ಲಿಯೇ ಇದೆ ಅವಕಾಶ
Machenahalli

SHIVAMOGGA | MALENADUTODAY NEWS | Jun 26, 2024  ಮಲೆನಾಡು ಟುಡೆ 

ಡಿಪ್ಲೊಮಾ ಕೋರ್ಸ್ : ಬಾಕಿ ಉಳಿದ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನ

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಶಿವಮೊಗ್ಗ ಇಲ್ಲಿ 2024-25 ನೇ ಸಾಲಿನ ಡಿಪ್ಲೊಮಾ ಕೋರ್ಸ್‍ಗಳಲ್ಲಿ ಖಾಲಿ ಉಳಿದಿರುವ ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಡಿಪ್ಲೊಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್(ಡಿಟಿಡಿಎಂ), ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್(ಡಿಎಂಸಿಹೆಚ್), ಡಿಪ್ಲೊಮಾ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್(ಡಿಪಿಎಂ) ಕೋರ್ಸ್‍ಗಳಲ್ಲಿ ಖಾಲಿ ಉಳಿದಿರುವ ಸೀಟುಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೊದಲು ಬಂದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಮೇರೆಗೆ ಸೀಟುಗಳನ್ನು ಹಂಚಿಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ಸಿಎ-38, ನಿದಿಗೆ ಕೈಗಾರಿಕಾ ಪ್ರದೇಶ, ಮಾಚೇನಹಳ್ಳಿ ಶಿವಮೊಗ್ಗ 577 222 ದೂ.ಸಂ: 08182-269054, 9902232839, 9448307027, 9880141054, 9449286543 ನ್ನು ಸಂಪರ್ಕಿಸಬಹುದೆಂದು ಜಿಟಿಟಿಸಿ ಪ್ರಾಂಶುಪಾಲರು ತಿಳಿಸಿದ್ದಾರೆ.