ಆಧಾರ್​ ಕಾರ್ಡ್​ ಕಳೆದು ಹೋದರೇ! ಏನ್​​ ಮಾಡಬೇಕು!? ಇಲ್ಲಿದೆ ಓದಿ ಮಾಹಿತಿ

If the Aadhaar card is lost! What to do!? Read on to find out here

ಆಧಾರ್​ ಕಾರ್ಡ್​ ಕಳೆದು ಹೋದರೇ! ಏನ್​​ ಮಾಡಬೇಕು!?  ಇಲ್ಲಿದೆ ಓದಿ ಮಾಹಿತಿ

ಆಧಾರ್​ ಕಾರ್ಡ್​  ಈಗ ಎಷ್ಟು ಮಹತ್ವದ್ದು ಎಂಬುದನ್ನ ಬಿಡಿಸಿ ಹೇಳಬೇಕಿಲ್ಲ. ಹಾಗೊಂದು ವೇಳೆ ಈ ಆಧಾರ್ ಕಾರ್ಡ್ ಕಳೆದು ಹೋದರೆ, ಅದನ್ನ ಬೇರೆಯವರು ಮಿಸ್ ಯೂಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಆಧಾರ್ ಕಾರ್ಡ್ (Aadhaar card) ಕಳೆದು ಹೋದಾಗ ಏನು ಮಾಡಬೇಕು ಎಂಬುದನ್ನ ತಿಳಿದುಕೊಳ್ಳಬೇಕು.  

ಆಧಾರ್ ಕಾರ್ಡ್ ಕಳೆದರೆ  ಏನು ಮಾಡಬೇಕು?

ಇದಕ್ಕೆ ಉತ್ತರ ಸುಲಭ ಆಧಾರ್ ಕಾರ್ಡ್ ಕಳೆದು ಹೋದರೆ, ಆಧಾರ್​ ಕಾರ್ಡ್​ ಅಧಿಕೃತ ವೆಬ್​ಸೈಟ್​ ಯುಐಡಿಎಐನಲ್ಲಿ ನಿಮ್ಮ ಮೊಬೈಲ್ ನಂಬರ್ ಬಳಸಿ ಹೊಸ ಆಧಾರ್​ ಕಾರ್ಡ್​ ಪಡೆಯಬಹುದು.  ಆಧಾರ್ ಕಾರ್ಡ್ ನಂಬರ್ ನೀಡಿಯು ಹೊಸ ಆಧಾರ್ ಕಾರ್ಡ್​ ಪಡೆಬಹುದು. ಈ ವೇಳೆ ಮೊಬೈಲ್​ಗೆ ಬರುವ ಒಟಿಪಿ ನೀಡಬೇಕಾಗುತ್ತದೆ.  ಓಟಿಪಿಯನ್ನ ಆನ್​ಲೈನ್​ನಲ್ಲಿ ನಮೂದಿಸಿದರೇ, ಹೊಸ ಆಧಾರ್ ಕಾರ್ಡ್​ ಡೌನ್​ಲೋಡ್ ಮಾಡಿಕೊಳ್ಳಬಹುದು.  

ಇನ್ನೂ ಹೊಸ ಆಧಾರ್ ಕಾರ್ಡ್ ಪಡೆಯುವುದಕ್ಕೂ ಮೊದಲು, ಕಳೆದುಹೋದ ಆಧಾರ್​ ಕಾರ್ಡ್​ ನಂಬರ್​ನ್ನ ಲಾಕ್ ಮಾಡುವುದು ಉತ್ತಮ ಇದಕ್ಕಾಗಿ   https://resident.uidai.in/  ಲಾಗಿನ್ ಆದರೆ,  ‘ನನ್ನ ಆಧಾರ್’(My Aadhar) ಆಯ್ಕೆಯಲ್ಲಿ ‘ಆಧಾರ್ ಸರ್ವೀಸ್’ ಸೆಲೆಕ್ಟ್ ಮಾಡಬೇಕು. ಆನಂತರ  ಲಾಕ್​ ಅನ್​ಬಯೋಮೆಟ್ರಿಕ್ ಆಧಾರ್ ಸರ್ವೀಸ್ ಎಂಬ ಆಪ್ಶನ್ ಇರುತ್ತೆ. ಅಲ್ಲಿ ಕ್ಲಿಕ್​​ ಮಾಡಿ ನಿಮ್ಮ ಆಧಾರ್​ ನಂಬರ್ ಹಾಕಬೇಕು. ಆನಂತರ,ಮೊಬೈಲ್​ಗೆ ಒಟಿಪಿ ಬರುತ್ತದೆ . ಅದನ್ನ ನಮೂದಿಸಿದ ಬಳಿಕ ಡೇಟಾ ಲಾಕ್ ಮಾಡುವ ಆಯ್ಕೆ ಸ್ಕ್ರೀನ್ ಮೇಲೆ ಬರುತ್ತದೆ, ಕ್ಲಿಕ್​ ಮಾಡಿದರೆ, ನಿಮ್ಮ ಆಧಾರ್​ ಲಾಕ್​ ಆಗುತ್ತದೆ. ಆನಂತರ ಇದೇ ಮಾದರಿಯಲ್ಲಿ ಅನ್​ಲಾಕ್ ಕೂಡ ಮಾಡಿಕೊಳ್ಳಬಹುದು.