ತಾಳಗುಪ್ಪ-ಹುಬ್ಬಳ್ಳಿ ರೈಲ್ವೆ ಮಾರ್ಗ | ಹೊಸ ಅಪ್​ಡೇಟ್ ವಿಷಯ ಏನು ಗೊತ್ತಾ?

Here is a report about the railway line passing through Shimoga-Shirasi-Dharwad districtsಶಿವಮೊಗ್ಗ-ಉತ್ತರಕನ್ನಡ- ಧಾರವಾಡ ಜಿಲ್ಲೆಗಳಲ್ಲಿ ಹಾದು ಹೋಗುವ ರೈಲ್ವೆ ಮಾರ್ಗದ ಬಗ್ಗೆ ವರದಿ ಇಲ್ಲಿದೆ

ತಾಳಗುಪ್ಪ-ಹುಬ್ಬಳ್ಳಿ ರೈಲ್ವೆ ಮಾರ್ಗ |  ಹೊಸ ಅಪ್​ಡೇಟ್ ವಿಷಯ ಏನು ಗೊತ್ತಾ?



KARNATAKA NEWS/ ONLINE / Malenadu today/ Oct 14, 2023 SHIVAMOGGA NEWS

ಇತ್ತೀಚೆಗೆ ಶಿಕಾರಿಪುರ-ಶಿವಮೊಗ್ಗ ರೈಲು ಮಾರ್ಗದ ಅಪ್​ಡೇಟ್ ಸಿಕ್ಕಿತ್ತು . ಇದೀಗ ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣದ ಬಗ್ಗೆ ಅಪ್​ಡೇಟ್ ದೊರಕಿದೆ.  ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗ ಯೋಜನೆಯ ಸರ್ವೇ ಕಾರ್ಯ ಚುರುಕುಗೊಂಡಿದೆ.  ರೈಲು ಮಾರ್ಗದ ಗಡಿ ಗುರುತಿಸಿ ಕಲ್ಲು ನಿಲ್ಲಿಸಲಾಗಿದೆ. 

ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ-ತಡಸ ಮಾರ್ಗವಾಗಿ ಹುಬ್ಬಳ್ಳಿಗೆ ಸಂಚರಿಸುವ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಸರ್ವೇ ನಡೆಯುತ್ತಿದೆ. 

ಸದ್ಯ ಮುಂಡಗೋಡ ತಾಲೂಕಿನ ಮಳಗಿ ಭಾಗದ ಕ್ಯಾಗದಿಕೊಪ್ಪ, ಕಲ್ಲಹಕ್ಕಲ, ಧರ್ಮಾ ಕಾಲನಿ, ಮಳಲಗಾಂವ, ಗೊಟಗೊಡಿಕೊಪ್ಪ ಮುಂತಾದ ಭಾಗದಲ್ಲಿ ಈಗಾಗಲೇ ರೈಲು ಮಾರ್ಗದ ಗಡಿ ಗುರುತಿಸಿ ಕಲ್ಲು ನಿಲ್ಲಿಸಲಾಗಿದೆ. 

ಪಾಳಾ-ಮುಂಡಗೋಡ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗಲಿರುವ ರೈಲು ಮಾರ್ಗ ಇದಾಗಿದೆ. ಒಟ್ಟು ಮೂರು ಜಿಲ್ಲೆಗಳಲ್ಲಿ ಅಂದರೆ ಉತ್ತರ ಕನ್ನಡ , ಶಿವಮೊಗ್ಗ,  ಧಾರವಾಡ ಜಿಲ್ಲೆಗಳಲ್ಲಿ ಈ ರೈಲು ಹಾದುಹೋಗಲಿದೆ.


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?