ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ | ನಮ್ಮವರಿಂದ ನಮ್ಮೂರಿನಲ್ಲಿ ನಮ್ಮೂರ ಮಕ್ಕಳಿಗಾಗಿ ವಿನೂತನ ಕಾರ್ಯಕ್ರಮ

Humanity is the motivation for those involved in social service. said DYSP Gajanana Vamanasuthara.ಸಮಾಜ ಸೇವೆಯಲ್ಲಿ ತೊಡಗಿಕೊಂಡವರಿಗೆ ಮಾನವೀಯತೆ ಪ್ರೇರಣೆ ಯಾಗಿರುತ್ತದೆ. ಎಂದು ಡಿ ವೈ ಎಸ್ ಪಿ ಗಜಾನನ ವಾಮನಸುತಾರ ಹೇಳಿದರು.

ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ |  ನಮ್ಮವರಿಂದ ನಮ್ಮೂರಿನಲ್ಲಿ ನಮ್ಮೂರ ಮಕ್ಕಳಿಗಾಗಿ ವಿನೂತನ ಕಾರ್ಯಕ್ರಮ



KARNATAKA NEWS/ ONLINE / Malenadu today/ Oct 14, 2023 SHIVAMOGGA NEWS

ರಿಪ್ಪನ್ ಪೇಟೆ : ಸಮಾಜ ಸೇವೆಯಲ್ಲಿ ಮಾನವೀಯತೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಮಾಜ ಸೇವೆಯಲ್ಲಿ ತೊಡಗಿಕೊಂಡವರಿಗೆ ಮಾನವೀಯ ಪ್ರೇರಣೆ ಯಾಗಿರುತ್ತದೆ. ಎಂದು ಡಿ ವೈ ಎಸ್ ಪಿ ಗಜಾನನ ವಾಮನಸುತಾರ ಹೇಳಿದರು.

ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ಶಾಲೆಯ ಅಭಿಮಾನ,  ಸುಣ್ಣ ಬಣ್ಣದ ಅಭಿಯಾನ  ಕಾರ್ಯಕ್ರಮವನ್ನು ಉದ್ಘಾಟಿಸಿದ  ಮಾತನಾಡಿದ ಅವರು ಮಾನವನ ಜೀವಿತದಲ್ಲಿ ಅತ್ಯಂತ ಪವಿತ್ರವಾದ ಸ್ಥಳ ಶಾಲೆಯಾಗಿದ್ದು. ಶಾಲೆಯಲ್ಲಿ ಕಲಿತ ಪಾಠ ಪ್ರವಚನಗಳು, ಬದುಕಿನ ದಿಕ್ಕನ್ನೇ ಬದಲಾಯಿಸುವಂತಹ ಅದ್ಭುತವಾದ ಶಕ್ತಿಯನ್ನು ಹೊಂದಿರುತ್ತದೆ,ಕನ್ನಡದ ಶಾಲೆಯ ಬಗ್ಗೆ ಅಭಿಮಾನವನ್ನು ಹೊಂದಿ ಅದರಲ್ಲೂ ಸರ್ಕಾರಿ ಶಾಲೆಗಳ ಬಗ್ಗೆ ಗಮನಹರಿಸಿ ಸುಣ್ಣ ಬಣ್ಣದ ಜೊತೆಗೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಅಭಿವೃದ್ಧಿಗೆ  ಸಹಕಾರ ನೀಡುತ್ತಿರುವ ಪೋಸ್ಟ್ ಮ್ಯಾನ್  ಬಳಗದ ಕನ್ನಡ ಶಾಲೆಯ ಅಭಿಮಾನ ಸುಣ್ಣ ಬಣ್ಣದ ಅಭಿಯಾನ ಕಾರ್ಯಕ್ರಮ ನಿರಂತರವಾಗಿರಲಿ.  ಹಾಗೆಯೇ ಅವರುಗಳು ಶೈಕ್ಷಣಿಕ ಅಭಿವೃದ್ಧಿಗೆ ಸಮಾಜಕ್ಕೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

 "ಸರ್ಕಾರಿ ಶಾಲೆ ಅಭಿಮಾನ ಸುಣ್ಣಬಣ್ಣ ಅಭಿಯಾನ"ಕ್ಕೆ ಚಾಲನೆಯನ್ನು ಕನ್ನಡ ಶಾಲೆ ಉಳಿಸಿ ಘೋಷಣೆಯಡಿಯಲ್ಲಿ "ಅನುಕರಣೆ ಪ್ರತಿಷ್ಠಾನದ" ಮೂಲಕ ರಾಜ್ಯದ ನೂರಾರು ಶಾಲೆಯನ್ನು ಅಂದಗಾಣಿಸಿ ಯುವ ಪೀಳಿಗೆಗೆ ಆದರ್ಶವಾಗಿರುವ  ಕುಮಾರಿ|| ಕೆಚ್ಚೆದೆಯ ಕನ್ನಡತಿ ಅಕ್ಕ ಅನು ನೀಡಿದರು.

ನಂತರ ಮಾತನಾಡಿದ ಅಕ್ಕ ಅನು ಪೋಸ್ಟ್ ಮ್ಯಾನ್ ಸುದ್ದಿ ಬಳಗ ಆಯೋಜಿಸಿರುವ ಈ ಅಭಿಯಾನ ಯುವ ಪೀಳಿಗೆಗೆ ಮಾದರಿಯಾಬೇಕು,ಎಲ್ಲಾ ಕಾರ್ಯಕ್ರಮಗಳಿಂದ ದೂರವುಳಿಯುವ ನನಗೆ ಪೋಸ್ಟ್ ಮ್ಯಾನ್ ನ್ಯೂಸ್ ಬಳಗ ಆಯೋಜಿಸಿದ್ದ ಈ ವಿನೂತನ ಅಭಿಯಾನ ನನ್ನನ್ನು ಹೆಚ್ಚಾಗಿ ಸೆಳೆಯಿತು.ಸರ್ಕಾರಿ ಕನ್ನಡ ಶಾಲೆಗಳು ಪ್ರಸ್ತುತ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ.ಜನರಲ್ಲಿ ಅರಿವು ಮೂಡಿಸಬೇಕು. ಈ ಶಾಲೆಗಳಿಗೆ ದಾಖಲಾಗುವವರಲ್ಲಿ ಅತಿ ಹೆಚ್ಚಿನವರು ಬಡ ವಿದ್ಯಾರ್ಥಿಗಳಾಗಿರುವದರಿಂದ ಅವರಿಗೆ ಶಿಕ್ಷಣದ ಹಕ್ಕು ಕೊಡಿಸುವುದರ ಜತೆಗೆ ಸರ್ಕಾರಿ ಶಾಲೆ ಉಳಿಸುವ ಕೆಲಸಕ್ಕೆ ಎಲ್ಲಾರೂ ಕೈಜೋಡಿಸಬೇಕು ಎಂದು ಹೇಳಿದರು.ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಂದಿದ್ದ ನಮ್ಮ ತಂಡ ಪೋಸ್ಟ್ ಮ್ಯಾನ್ ಬಳಗದೊಂದಿಗೆ ನಾಲ್ಕೈದು ಶಾಲೆಗಳ ಸುಣ್ಣ ಬಣ್ಣ ಕಾರ್ಯಕ್ರಮದಲ್ಲಿ ಕೈ ಜೋಡಿಸಲು ನಿರ್ಧರಿಸಿದ್ದೇವೆ ಎಂದರು.

 ಪೋಸ್ಟ್ ಮ್ಯಾನ್ ಬಳಗದ ರಫಿ ರಿಪ್ಪನ್‌ಪೇಟೆ ಅಧ್ಯಕ್ಷತೆ  ವಹಿಸಿ ಮಾತನಾಡಿ ನಮ್ಮ ಬಳಗದಿಂದ ಹೊಸನಗರ ತಾಲೂಕಿನ ಒಟ್ಟು  21 ಸರ್ಕಾರಿ ಶಾಲೆಗಳ ಆಯ್ಕೆ ಮಾಡಿಕೊಂಡಿದೆ. ಕೆಂಚನಾಲ ಗ್ರಾಪಂ ವ್ಯಾಪ್ತಿಯ ಚಂದವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಆಯ್ಕೆ ಎಂದರು. 

ಈ ಕಾರ್ಯಕ್ರಮದಲ್ಲಿ ಹೊಸನಗರ ತಾಪಂ ಕಾರ್ಯ ನಿರ್ವಾಹಣಾಧಿಕಾರಿ ವೈ ನರೇಂದ್ರ ಕುಮಾರ್ ,ಕ್ರೀಯಾಶೀಲ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಕೃಷ್ಣಮೂರ್ತಿ ಹಾಗೂ ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಇದ್ದರು.


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?