MALENADUTODAY.COM | SHIVAMOGGA | #KANNADANEWSWEB
ಸದ್ಯ ಶಿವಮೊಗ್ಗ ಏರ್ಪೋರ್ಟ್ ರಾಜ್ಯವಷ್ಟೆ ಅಲ್ಲದೆ ಹೊರರಾಜ್ಯದಲ್ಲಿಯು ಟ್ರೆಂಡಿಂಗ್ ನ್ಯೂಸ್ ಆಗಿದೆ. ಮೇಲಾಗಿ ಶಿವಮೊಗ್ಗ ವಿಮಾನ ನಿಲ್ಧಾಣದ ಕ್ರೇಜ್ ಶಿವಮೊಗ್ಗದಲ್ಲಿಯು ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ನಲ್ಲಿಯು ವಿಮಾನದ ಪುತ್ತಳಿಯೊಂದನ್ನ ಇಡಲಾಗಿದೆ. ಏರ್ ಇಂಡಿಯಾ ವಿಮಾನದ ಮಾದರಿಯನ್ನು ಅಮೀರ್ ಅಹಮದ್ ಸರ್ಕಲ್ನಲ್ಲಿ ಇರಿಸಲಾಗಿದೆ.
ಶಿವಮೊಗ್ಗ ನಗರದಲ್ಲಿ ಹಬ್ಬ, ಸಡಗರ, ಸಂಭ್ರಮ, ಕಾರ್ಯಕ್ರಮ , ಸಮಾವೇಶ ಏನೇ ಇದ್ದರೂ ಅದಕ್ಕೆಲ್ಲಾ ಅಮೀರ್ ಅಹಮದ್ ಸರ್ಕಲ್ ಅದಕ್ಕೆ ತಕ್ಕಹಾಗೆ ಸಿಂಗಾರಗೊಳ್ಳುತ್ತಾ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಈ ಕ್ರೇಜ್ ಇನ್ನಷ್ಟು ಹೆಚ್ಚಳವಾಗಿದೆ. ಕಳೆದ ಕೆಲ ಕಾರ್ಯಕ್ರಮಗಳ ಸಂದರ್ಭದಲ್ಲಿ ಅಮೀರ್ ಅಹಮದ್ ಸರ್ಕಲ್ ಹೇಗೆ ಸಿಂಗಾರಗೊಂಡಿತ್ತು ಎಂಬುದು ನಗರವಾಸಿಗಳ ಅನುಭವಕ್ಕೂ ಬಂದಿತ್ತು.
ಸದ್ಯ ಇದೀಗ ವಿಮಾನ ನಿಲ್ದಾಣದ ಉದ್ಘಾಟನೆಗೂ ಎಎ ಸರ್ಕಲ್ ಸಿದ್ಧಗೊಂಡಿದೆ. ವಿಮಾನ ನಿಲ್ದಾಣದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವುದು ಹಾಗೂ ಬಿಎಸ್ವೈರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಹೆಚ್ಚಿನ ಆಸಕ್ತಿ ತೋರಿದೆ. ನಗರದೆಲ್ಲೆಡೆ ಬಿಜೆಪಿ ಬಾವುಟ ಬಂಟಿಂಗ್ಸ್ ಹಾಕಿದ್ದು ಅಮೀರ್ ಅಹಮದ್ ಸರ್ಕಲ್ನಲ್ಲಿ ಭಾವುಟಗಳನ್ನ ಹಾಕಿದೆ. ಇದರ ನಡುವೆ ಏರ್ಇಂಡಿಯಾ ವಿಮಾನದ ಮಾಡೆಲ್ ಇಡಲಾಗಿದ್ದು, ಅದು ಅಲ್ಲಿ ಓಡಾಡುವ ಪ್ರಯಾಣಿಕರ ಹಾಗೂ ವಾಹನಸವಾರರ ಗಮನಸೆಳೆಯುತ್ತಿದೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #
