ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಜಿಲ್ಲಾಧಿಕಾರಿ ಹೇಳಿದ ಪ್ರಮುಖ ಅಂಶಗಳು ಇಲ್ಲಿದೆ !

Here are the key points made by the Deputy Commissioner about the inauguration of Shivamogga Airport!

 MALENADUTODAY.COM | SHIVAMOGGA  | #KANNADANEWSWEB

ಮಾಜಿ ಮುಖ್ಯಮಂತ್ರಿ  ಬಿ.ಎಸ್ ಯಡಿಯೂರಪ್ಪ ಹುಟ್ಟುಹಬ್ಬದ ದಿನವೇ ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಯಾಗಲಿದೆ. ಸದ್ಯ ಅದ್ದೂರಿ ಕಾರ್ಯಕ್ರಮದ ಉದ್ಘಾಟನೆಗೆ ಕೌಂಟ್ ಡೌನ್ ಶುರುವಾಗಿದೆ.. ವಿಮಾನ‌ ನಿಲ್ದಾಣದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಕಾರಣ ಏರ್​ಪೋರ್ಟ್ ಸುತ್ತಮುತ್ತ ಭಾರೀ ಬಂದೋಬಸ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇವತ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿಸಿ ಡಾ.ಸೆಲ್ವಮಣಿ ದೆಹಲಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ವಿಮಾನದಲ್ಲಿ ಶಿವಮೊಗ್ಗ ದ ವಿಮಾನ ನಿಲ್ದಾಣಕ್ಕೆ  ಬಂದಿಳಿಯಲಿದ್ದಾರೆ. 11.30 ಕ್ಕೆ ಅವರು ಆಗಮಿಸಿ AIRPORT ಉದ್ಘಾಟನೆ ಮಾಡಲಿದ್ದಾರೆ. ಡಿಜಿಟಲ್ ಸ್ಕ್ರೀನ್​ನ ಬಟನ್ ಒತ್ತುವ ಮೂಲಕ ಉದ್ಘಾಟನೆ ಮಾಡಿ, ನಂತರ ಸ್ಟೇಜ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 

ಏರ್ ಪೋರ್ಟ್ ಉದ್ಘಾಟನೆ  ಕಾರ್ಯಕ್ರಮ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ, ಇದು ಸರ್ಕಾರಿ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದ ಡಿಸಿ ಕೆ.ಎಸ್.ಆರ್.ಟಿ.ಸಿ ಯಿಂದ ಸಾವಿರ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಒಂದು ಲಕ್ಷ ಜನರು ಕುಳಿತುಕೊಂಡು ಕಾರ್ಯಕ್ರಮ ನೋಡಲು ಆಸನದ ವ್ಯವಸ್ಥೆ ಮಾಡಲಾಗಿದೆ, ಊಟದ ವ್ಯವಸ್ಥೆಯ ಜೊತೆಗೆ ಪಾರ್ಕಿಂಗ್​ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ತಿಳಿಸಿದ್ದಾರೆ.