ಅತ್ತ ಕಚೇರಿ ಉದ್ಘಾಟನೆ/ ಇತ್ತ ಬಿಜೆಪಿ ಸೇರ್ಪಡೆ/ ಆಯನೂರು ಮಂಜುನಾಥ್​- ಕೆಎಸ್​ ಈಶ್ವರಪ್ಪ ಏನು ಹೇಳಿದ್ರು!? ವಿವರ ಇಲ್ಲಿದೆ

Ayanur Manjunath- What did KS Eshwarappa say Here's the details

ಅತ್ತ ಕಚೇರಿ ಉದ್ಘಾಟನೆ/ ಇತ್ತ ಬಿಜೆಪಿ ಸೇರ್ಪಡೆ/ ಆಯನೂರು ಮಂಜುನಾಥ್​- ಕೆಎಸ್​ ಈಶ್ವರಪ್ಪ ಏನು ಹೇಳಿದ್ರು!? ವಿವರ ಇಲ್ಲಿದೆ
ಅತ್ತ ಕಚೇರಿ ಉದ್ಘಾಟನೆ/ ಇತ್ತ ಬಿಜೆಪಿ ಸೇರ್ಪಡೆ/ ಆಯನೂರು ಮಂಜುನಾಥ್​- ಕೆಎಸ್​ ಈಶ್ವರಪ್ಪ ಏನು ಹೇಳಿದ್ರು!? ವಿವರ ಇಲ್ಲಿದೆ

ಶಿವಮೊಗ್ಗದಲ್ಲಿ ಇವತ್ತು ಎರಡು ಪ್ರಮುಖ ಘಟನೆಗಳು ನಡೆದವು. ಒಂದು ಬಿಜೆಪಿ ಕಚೇರಿ ಸಮೀಪದಲ್ಲಿ ಬಿಜೆಪಿಯಿಂದ ಬಂಡಾಯ ಎದ್ದಿರುವ ಆಯನೂರು ಮಂಜುನಾಥ್ ತಮ್ಮ ನೂತನ ಕಚೇರಿಯನ್ನು ಆರಂಭಿಸಿದ್ಧಾರೆ. ಶಾಸಕರ ಕಾರ್ಯಾಲಯ ಎಂದೇ ಹೆಸರು ಬರೆಸಿ ಕಚೇರಿ ಆರಂಭಿಸಿರುವ ಅವರು ತಮ್ಮ ನಿಲುವಿಗೆ ಎಲ್ಲಾ ಕಡೆಯಿಂದಲೂ ಬೆಂಬಲ ವ್ಯಕ್ತವಾಗ್ತಿದೆ ಎಂದಿದ್ಧಾರೆ. 

ಕಾದು ನೋಡುವ ತಂತ್ರದಲ್ಲಿ ಆಯನೂರು ಮಂಜುನಾಥ್​

ತಮ್ಮ ರಾಜೀನಾಮೆಯ ಬಗ್ಗೆ  ಯಾವುದೇ ತೀರ್ಮಾನ ಕೈಗೊಳ್ಳದ ಆಯನೂರು  ಮಂಜುನಾಥ್ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯಾಗುವವರೆಗೂ ಕಾದು ನೋಡಲು ಮುಂದಾಗಿದ್ದಾರೆ. ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾಗುತ್ತಾರೆ ಎಂದು ಅಧ್ಯಯನ ಮಾಡಿ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,  ಶಿವಮೊಗ್ಗದಲ್ಲಿ ಶಾಂತಿ ಮಾತ್ರವಲ್ಲ. ನೆಮ್ಮದಿಯ ಅಗತ್ಯವಿದೆ ಎಂದು ಜನರು ನನ್ನ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ .  ನಾನು ಇನ್ನೂ 2, 3 ದಿನ ಕಾಯುತ್ತೇನೆ. ರಾಷ್ಟ್ರೀಯ ಪಕ್ಷಗಳು ಯಾರ್ಯಾರನ್ನು ಕಣಕ್ಕಿಳಿಸಲಿವೆ ಎಂಬುದನ್ನು ನೋಡುತ್ತೇನೆ. ಮುಂದಿನ ಕಾರ್ಯತಂತ್ರ ರೂಪಿಸಲು ಇದರಿಂದ ನೆರವಾಗುತ್ತದೆ. ನಾನು ಯಾರನ್ನು ಎದುರಿಸಬೇಕು ಎಂಬುದು ನನಗೆ ಗೊತ್ತಾಗುತ್ತದೆ. ಮುಂದಿನ ಚುನಾವಣಾ ವ್ಯೂಹ ರಚಿಸಲು ನೆರವಾಗುತ್ತದೆ ಎಂದು ತಿಳಿಸಿದರು. 

ಈಶ್ವರಪ್ಪರವರನ್ನು ಬದಲಾಯಿಸಬೇಕು

ಶಿವಮೊಗ್ಗದ ಅಭ್ಯರ್ಥಿ ಈಶ್ವರಪ್ಪ ಅವರನ್ನು ಬದಲಾಯಿಸಬೇಕು ಎಂದು ನಾನು ಬಲವಾಗಿ ಆಗ್ರಹಿಸಿದ್ದೇನೆ . ಈ ನಿಲುವು ಪ್ರಕಟ ಮಾಡಿದ ಮೇಲೆ ಬಿಜೆಪಿಯ ಅನೇಕರು  ನನ್ನ ನಿಲುವನ್ನು ಬೆಂಬಲಿಸಿದ್ದಾರೆ . ನನ್ನ ನಡೆ ಬಿಜೆಪಿಯಲ್ಲಷ್ಟೇ ಅಲ್ಲ. ಕಾಂಗ್ರೆಸ್‌ ನಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನನಗೆ ಬಿಜೆಪಿಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾಗಿದೆ. ಹಾಗಾಗಿ ಪಕ್ಷೇತರನಾಗಿ ಸ್ಪರ್ಧಿಸುವುದು ನಿಶ್ಚಿತ. 

ಹರ್ಷನ ಕೊಲೆ ವಿಚಾರ

ನನ್ನ ವಿರೋಧಿಗಳು ಹರ್ಷನ ಕೊಲೆಯನ್ನು ನನ್ನ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಆರೋಪಿಸುತ್ತಿದ್ದಾರೆ . ನಾನು ಹರ್ಷನ ಕೊಲೆ ಸಂದರ್ಭದಲ್ಲಿ ಏನು ಮಾಡಿದ್ದೇನೆ ಎಂದು ನನಗೆ ಮಾತ್ರ ಗೊತ್ತು. ಅದನ್ನು ಬೇರೆಯವರಿಗೆ ಹೇಳುವ ಅಗತ್ಯವಿಲ್ಲ. ಸಮಯ ಬಂದಾಗ ಅದಕ್ಕೆ ಸೂಕ್ತ ಉತ್ತರ ನೀಡುತ್ತೇನೆ . ಎಮೋಷನಲ್ ಆಗಿ ತೀರ್ಮಾನ ಮಾಡಲಾಗುವುದಿಲ್ಲ. ಜನರ ಮತ್ತು ಬೆಂಬಲಿಗರ ಭಾವನೆಗೂ ಬೆಲೆ ನೀಡಬೇಕು .

ನಿವೃತ್ತಿ ಸೂಚನೆ

ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ಕಣದಿಂದ ನಿವೃತ್ತಿ ಈಶ್ವರಪ್ಪ ಅವರಿಗೆ ಸೂಚನೆ ನೀಡಿರಬಹುದು. ಈಶ್ವರಪ್ಪ ಸುಧೀರ್ಘ ರಾಜಕೀಯದಿಂದ ನಿವೃತ್ತರಾಗಲು ಇದು ಸಕಾಲ ಎಂದ ಆಯನೂರು ಮಂಜುನಾಥ್​  ಕಾಂಗ್ರೆಸ್‌ ನಾಯಕರೊಂದಿಗೆ ನಡೆದ ಚರ್ಚೆಯನ್ನು ನಾನು ಈಗ ಹೇಳಲು ಆಗುವುದಿಲ್ಲ ಎಂದಿದ್ದಾರೆ. 

ರಾವಣ ಮತ್ತು ಇಂಧ್ರಜಿತು

ರಾವಣ ಮತ್ತು ಇಂದ್ರಜಿತು ಇವರಲ್ಲಿ ಮೊದಲು ಯಾರು ಯುದ್ಧಕ್ಕೆ ಬರುತ್ತಾರೆ ಎಂದು ನೋಡುತ್ತಿದ್ದೇನೆ , ಈಶ್ವರಪ್ಪ ಅಥವಾ ಅವರ ಮಗ ಕಾಂತೇಶ ಇವರಲ್ಲಿ ಯಾರು ಬರುತ್ತಾರೇ ನೋಡಬೇಕು, ನನ್ನ ಸವಾಲನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ನನಗಿದೆ , ಇಂದ್ರಜಿತುವಿನಂತೆ ಕಾಂತೇಶ್ ಸಹ ಮಾಯಾಯುದ್ಧ ದಲ್ಲಿ ಸಿದ್ಧಹಸ್ತರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. 

ಅತ್ತ ಆಯನೂರು ಕಚೇರಿ ಉದ್ಘಾಟನೆ ಇತ್ತ ಬಿಜೆಪಿ ಸೇರ್ಪಡೆ

ಇನ್ನೂ ಆಯನೂರು ಮಂಜುನಾಥ್​ ರವರ ಕಚೇರಿ ಉದ್ಘಾಟನೆ ಒಂದು ಕಡೆಯಾದರೆ, ಇನ್ನೊಂದು ಕಡೆ  ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ವಿವಿಧ ಪಕ್ಷಗಳಿಂದ ವಿವಿಧ ಮುಖಂಡರು ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಲವರನ್ನ ಪಕ್ಷ ಕ್ಕೆ ಬರಮಾಡಿಕೊಂಡ ಕೆಎಸ್​ ಈಶ್ವರಪ್ಪನವರು ಆಯನೂರು ಮಂಜುನಾಥ್​ರವರ ಟೀಕೆಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಜಾರಿದ್ದರು. 

ಆಯನೂರು ಮಂಜುನಾಥ್​ರವರನ್ನ ಏಕವಚನದಲ್ಲಿ ತಾವು ಸಂಬೋಧಿಸಿಲ್ಲ ಎಂದಷ್ಟೆ ಹೇಳಿದ ಅವರು, ಅವರ ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದಿದ್ದಾರೆ. ಅಲ್ಲದೆ, ಚಿತ್ರ ನಟ ಸುದೀಪ್​ ಬೆಂಬಲಕ್ಕೆ ಟೀಕಿಸಿತ್ತಿರುವ ಕಾಂಗ್ರೆಸ್​ನ್ನ ತರಾಟ ತೆಗೆದುಕೊಂಡ ಕೆಎಸ್​ ಈಶ್ವರಪ್ಪ,  ಸಿದ್ದರಾಮಯ್ಯರವರು ಎಲ್ಲಿ ನಿಂತರೂ ಸೋಲು ಖಚಿತ ಎಂದರು, 

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 




ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




MALENADUTODAY.COM/ SHIVAMOGGA / KARNATAKA WEB NEWS


HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada Ayanur Manjunath, KS Eshwarappa, Shivamogga Constituency, Shivamogga City Constituency, Shivamogga BJP, RudreGowda, Meghraj, K E Kanthesh, Eshwarappa and his son. ಆಯನೂರು ಮಂಜುನಾಥ್, ಕೆಎಸ್​ ಈಶ್ವರಪ್ಪ, ಶಿವಮೊಗ್ಗ ಚುನಾವಣೆ , ಶಿವಮೊಗ್ಗ ನಗರ ಕ್ಷೇತ್ರ , ಶಿವಮೊಗ್ಗ ಬಿಜೆಪಿ, ರುದ್ರೇಗೌಡರು, ಮೇಘರಾಜ್, ಕೆ.ಇ.ಕಾಂತೇಶ್, ಈಶ್ವರಪ್ಪ ಮತ್ತು ಅವರ ಮಗ,