ರಿಪೇರಿ ನಡೆಯುತ್ತಿದ್ದಾಗಲೇ ಕಂಬದಲ್ಲಿ ಹರಿದ ಕರೆಂಟ್! | ಓರ್ವ ಸೀರಿಯಸ್, ಐವರು ಬಚಾವ್ | ಏನಂದ್ರೂ FIR ಮಾಡಲ್ವಂತೆ!?
Here is the full details of the incident in Shikaripura ಶಿಕಾರಿಪುರದಲ್ಲಿ ನಡೆದ ಘಟನೆಯ ಪೂರ್ತಿ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ವಿದ್ಯುತ್ ಕಂಬದ ಲೈನ್ ಶಿಫ್ಟಿಂಗ್ ವೇಳೇ ವಿದ್ಯುತ್ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಐವರು ಪಾರಾಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಡಗಣಿ ಗ್ರಾಮದಲ್ಲಿ ಘಟನೆ ನಡೆದಿದೆ. ದಿಡೀರ್ ಕರೆಂಟ್ ಹರಿದ ಪರಿಣಾಮ ಒಬ್ಬನ ಸ್ಥಿತಿಯು ಗಂಭೀರವಾಗಿದೆ. ಅಲ್ಲದೆ ಈ ವೇಳೆ ಚೂರು ಹೆಚ್ಚು ಕಮ್ಮಿಯಾಗಿದ್ದರೂ ಐವರ ಜೀವ ಹೋಗುವ ಅಪಾಯವಿತ್ತು.
ಇದ್ದಕ್ಕಿದ್ದ ವಿದ್ಯುತ್ ಹರಿದ ಬೆನ್ನಲ್ಲೆ ಇಡೀ ಲೈನ್ ಟ್ರಿಪ್ ಆಗಿದೆ. ಹಾಗಾಗಿ ಲೈನ್ನಲ್ಲಿ ಹರಿದ ವಿದ್ಯುತ್ ತಕ್ಷಣವೇ ನಿಂತಿದೆ. ಇದರಿಂದಾಗಿ ಕಂಬಗಳ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ವಿದ್ಯುತ್ ಶಾಕ್ ಅನುಭವದ ಹೊಂದಿದ ಬೆನ್ನಲ್ಲೆ ಕೆಳಕ್ಕೆ ಹಾರಿದ್ದಾರೆ.
ಮೆಸ್ಕಾಂ ನಿರ್ಲಕ್ಷ್ಯ!
ಇನ್ನೂ ವಿದ್ಯುತ್ ಕಾಮಗಾರಿ ಕೈಗೊಳ್ಳಲು ಲೈನ್ ಕ್ಲೀಯರ್ ತೆಗೆದುಕೊಳ್ಳಲಾಗಿತ್ತು. ಆದರೆ, ಮೆಸ್ಕಾಂ ಸಿಬ್ಬಂದಿ ಲೈನ್ ಕ್ಲಿಯರೆನ್ಸ್ ಇದ್ದರೂ ಲೈನ್ನಲ್ಲಿ ವಿದ್ಯುತ್ ಹರಿವನ್ನ ಚಾಲು ಮಾಡಿದ್ದಾರೆ. ಶಿಕಾರಿಪುರದಲ್ಲಿ ಇದು ಈ ವರ್ಷ ನಡೆಯುತ್ತಿರುವ ಆರು ಪ್ರಕರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
READ : ಶಿವಮೊಗ್ಗದಲ್ಲಿಯು ನಡೆಯಲಿದೆ ಶಿವದೂತ ಗುಳಿಗ ಪ್ರದರ್ಶನ! ಏನಿದು ವಿಶೇಷ ಗೊತ್ತಾ?.
ವಿಶೇಷ ಅಂದರೆ, ಮೆಸ್ಕಾಂ ನಿರ್ಲಕ್ಷ್ಯದ ವಿರುದ್ಧ ದೂರು ನೀಡಿದರೆ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ ಎಂದು ಆರೋಪಿಸಿಲಾಗಿದೆ. ಈ ಬಗ್ಗೆ ಮಲೆನಾಡು ಟುಡೆಗೆ ಮಾತನಾಡಿದ ಹೆಚ್.ಟಿ.ಬಳಿಗಾರ್, ಪ್ರಕರಣದಲ್ಲಿ ಪೊಲೀಸ್ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಕಂಪ್ಲೆಂಟ್ ಕೊಟ್ಟರೂ ಸಹ ತೆಗೆದುಕೊಳ್ಳುತ್ತಿಲ್ಲ. ತಮ್ಮ ಮಗನಿಗಾದ ಅನ್ಯಾಯದ ಬಗ್ಗೆ ತಂದೆ ದೂರು ನೀಡಿದರೂ ಪೊಲೀಸರು ಕಂಪ್ಲೆಂಟ್ ತೆಗೆದುಕೊಳ್ಳುತ್ತಿಲ್ಲ.ಹೀಗಾಗಿ ನೊಂದ ಆ ತಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯು ನಡೆದಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!
ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್ | ಸಿಕ್ತು ಮಂಗಳೂರು ಸ್ಪೇಷಲ್ 93 ಬೀಡಿ | ಕಾರ್ಬನ್ ಮೊಬೈಲ್!