ಪಾದಚಾರಿಗೆ ಡಿಕ್ಕಿ ಹೊಡೆದು ಕರೆಂಟ್ ಕಂಬಕ್ಕೆ ಗುದ್ದಿ ಬೈಕ್ ಸವಾರ! ಇಬ್ಬರ ದುರ್ಮರಣ!

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS

ರಾತ್ರಿ ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಸಂಭವಿಸಿದ ಘಟನೆಯಲ್ಲಿ ಪಾದಚಾರಿ ಹಾಗೂ ಬೈಕ್​ ಸವಾರ ಇಬ್ಬರು ಮೃತಪಟ್ಟಿರುವ ಘಟನೆ ಸುತ್ತುಕೋಟೆಯ ಬಳಿ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆ ಗ್ರಾಮಾಂತರ ವ್ಯಾಪ್ತಿಯಲ್ಲಿ, ಬರುವ ಸುತ್ತುಕೋಟೆಯಲ್ಲಿ  ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಹನುಮಮಂತಪ್ಪ ಹಾಗೂ ಮೇಘರಾಜ್ ಎಂಬವರು ಸಾವನ್ನಪ್ಪಿದ್ದಾರೆ. 

Shivamogga Malenadu Today

ಶಿವಮೊಗ್ಗದ ಹೊನ್ನಾಪುರದ ಮೇಘರಾಜ್ ಎಂಬವರು ಶಿವಮೊಗ್ಗ, ಆಯನೂರು , ಕುಂಸಿ ಚೋರಡಿ ಮಾರ್ಗವಾಗಿ ಶಿರಾಳಕೊಪ್ಪದ ಮಂಚಿಕೊಪ್ಪಕ್ಕೆ ಹೋಗುತ್ತಿದ್ದರು. ಈ ವೇಳೆ ಸುತ್ತುಕೋಟೆಯಲ್ಲಿ  ಬಳಿ ಹನುಮಂತಪ್ಪ ಎಂಬವರು ನಡೆದುಕೊಂಡು ಬರುತ್ತಿದ್ದರು. ರಾತ್ರಿ ಕತ್ತಲಲ್ಲಿ ಮೇಘರಾಜ್​ ಬೈಕ್ ಹನುಮಂತಪ್ಪರವರಿಗೆ ಡಿಕ್ಕಿ ಹೊಡೆದಿದೆ. ಇನ್ನೊಂದೆಡೆ ನಿಯಂತ್ರಣಕ್ಕೆ ಸಿಗದ ಬೈಕ್​ ಕರೆಂಟ್ ಕಂಬಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಮೇಘರಾಜ್​ಗೆ ಗಂಭೀರ ಗಾಯವಾಗಿ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ  ಪಾದಚಾರಿ ಹನುಮಂತಪ್ಪ ಆಸ್ಪತ್ರೆಗೆ ಸಾಗುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. 

 

Shivamogga Malenadu Today


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!


 

Leave a Comment