ಮತದಾರರಿಗೆ ಮತ್ತೆ ಪತ್ರ ಬರೆದ ಆಯನೂರು ಮಂಜುನಾಥ್ ! ವಿವರ ಇಲ್ಲಿದೆ ಓದಿ!

Ayanur Manjunath writes to voters again Read the details here!

ಮತದಾರರಿಗೆ ಮತ್ತೆ ಪತ್ರ ಬರೆದ ಆಯನೂರು ಮಂಜುನಾಥ್ ! ವಿವರ ಇಲ್ಲಿದೆ ಓದಿ!

KARNATAKA NEWS/ ONLINE / Malenadu today/ May 23, 2023 SHIVAMOGGA NEWS

Ayanur manjunath/ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ದಿಂದ ಸೋತ ಅಭ್ಯರ್ಥಿ ಆಯನೂರು ಮಂಜುನಾಥ್​ ಮತ್ತೆ ತಮ್ಮ ಮತದಾರರಿಗೆ ಪತ್ರ ಬರೆದಿದ್ದಾರೆ.  ಪದವೀಧರರರಿಗೆ ಮತ್ತು ನೌಕರರಿಗೆ ಪತ್ರ ಬರೆದಿರುವ ಆಯನೂರು ಮಂಜುನಾಥ್​,  ವಿಧಾನಸಬಾ ಚುನಾವಣೆಯ ಸೋಲಿನಿಂದ ನಾನು ವಿಚಲಿತನಾಗಿಲ್ಲ. ಆದರೆ ಸದನದಲ್ಲಿ ನೌಕರರ, ಕಾರ್ಮಿಕರ ಪರವಾಗಿ ಧ್ವನಿ ಎತ್ತುವ ವಂಚಿತನಾಗಿರುವುದಕ್ಕೆ ನಿರಾಸೆಯಾಗಿದೆ ಎಂದಿದ್ಧಾರೆ. ಅಲ್ಲದೆ ಮುಂದೆ ಮತ್ತೊಮ್ಮೆ ಅವಕಾಶ ದೊರೆಯುತ್ತದೆ. ಎಂಬ ನಂಬಿಕೆ ನನಗಿದೆ ಎಂದಿದ್ದಾರೆ. 

ಕಾರ್ಮಿಕರ ನೋವು ನಲಿವಿನಲಿ ಇರುತ್ತೇನೆ

ನೈರುತ್ಯ ಪದವೀಧರ ಕ್ಷೇತ್ರದ ಪ್ರತಿನಿಧಿ ಯಾಗಿ ತಮ್ಮಿಂದ ಆಯ್ಕೆಯಾದ ನಂತರ ಸದನದಲ್ಲಿ ಪ್ರಾಮಾಣಿಕವಾಗಿ ನಿಮ್ಮನ್ನು ಪ್ರತಿನಿಧಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ. ಈಗ ಪರಿಸ್ಥಿತಿ ಏನೇ ಇರಲಿ, ಸರ್ಕಾರ ಯಾವುದೇ ಇರಲಿ, ನೌಕರರ, ಕಾರ್ಮಿಕರ ನೋವು-ನಲಿವಿನಲ್ಲಿ ಸದಾ ಜೊತೆಯಲ್ಲಿ ಇದ್ದು ಕಾರ್ಯನಿರ್ವಹಿಸುತ್ತೇನೆ ಎಂದಿದ್ದಾರೆ.

ಸರ್ಕಾರಿ ಹಾಗೂ ಖಾಸಗಿ ನೌಕರರ, ಶಿಕ್ಷಕರ, ಉಪನ್ಯಾಸಕರ, ಅನುದಾನಿತ, ಅನುದಾನ ರಹಿತ ಶಿಕ್ಷಕರ ಹಾಗೂ ಶಿಕ್ಷಕೇತರ ನೌಕರರ, ಸರ್ಕಾರಿ ನಿವೃತ್ತ ನೌಕರರ, ಅತಿಥಿ ಉಪನ್ಯಾಸಕ , ಅತಿಥಿ ಶಿಕ್ಷಕರ ಸಮಸ್ಯೆಗಳಲ್ಲದೇ, ಪೌರ ಕಾರ್ಮಿಕರು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನಿರುದ್ಯೋಗಿ ಪದವೀಧರರು ಮತ್ತು ಉನ್ನತ ಶಿಕ್ಷಣಕ್ಕೆ ಪಡೆದ ಶೈಕ್ಷಣಿಕ ಸಾಲ ಮನ್ನಾ ಮಾಡುವಂತೆ ಹಾಗೂ ಸಂಘಟಿತ ಹಾಗೂ ಅಸಂಘಟಿತ ನೌಕರರು,  ಕಾರ್ಮಿಕರು ಇತ್ಯಾದಿ ಸಮೂಹಗಳ ಹಿತರಕ್ಷಣೆಗಾಗಿ ಸದನದಲ್ಲಿ ಗಟ್ಟಿಧ್ವನಿಯಲ್ಲಿ ಪ್ರತಿನಿಧಿಸುವ ಪ್ರಯತ್ನವನ್ನು ಮಾಡಿದ್ದೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ವಿಧಾನ ಸಭೆಯಲ್ಲಿ ಪರಿಣಾಮಕಾರಿ ಪ್ರಯತ್ನವಾಗದೆ, ಕೇವಲ ವಿಧಾನ ಪರಿಷತ್ತಿನಲ್ಲಿ ಪೂರ್ಣ ಯಶಸ್ಸು ಪಡೆಯುವುದು 'ಕಷ್ಟಸಾಧ್ಯ'ವಾದ ಸಂಗತಿ. ಆದ್ದರಿಂದ ಈ ಹಿನ್ನೆಲೆಯಲ್ಲಿ ಅಧಿಕಾರ ಕೇಂದ್ರವಾದ ವಿಧಾನ ಸಭೆಯಲ್ಲಿ ಈ ಬಾರಿ ತಮ್ಮೆಲ್ಲರ ಧ್ವನಿಯಾಗಬೇಕೆಂದು ಬಯಸಿದ್ದೆ. ಅಲ್ಲೊಂದು ಶಾಸಕರ ತಂಡಕಟ್ಟಿ, ಎಲ್ಲಾ ಸ್ತರದ ನೌಕರರು ಹಾಗು ಕಾರ್ಮಿಕರ ಶೋಷಿತ, ದೀನದಲಿತರ ಧ್ವನಿಯಾಗಿ ಪ್ರತಿಧ್ವನಿಸಬೇಕೆಂದು ಬಯಸಿದ್ದೆ ಎಂದಿದ್ದಾರೆ.