ವೀರಶೈವ ಲಿಂಗಾಯಿತ ಸಮುದಾಯದ ಪರವಾಗಿ ವಿಜಯೇಂದ್ರ ಯಡಿಯೂರಪ್ಪ ಆಕ್ರೋಶ! ಕಾರಣ!?

Congress betrays Veerashaiva Lingayat community Vijayendra Yediyurappa

ವೀರಶೈವ  ಲಿಂಗಾಯಿತ ಸಮುದಾಯದ  ಪರವಾಗಿ ವಿಜಯೇಂದ್ರ ಯಡಿಯೂರಪ್ಪ ಆಕ್ರೋಶ! ಕಾರಣ!?

KARNATAKA NEWS/ ONLINE / Malenadu today/ May 19, 2023 SHIVAMOGGA NEWS

@BYVijayendra/ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಿಕಾರಿಪುರ ಶಾಸಕ ವಿಜಯೇಂದ್ರ ಯಡಿಯೂರಪ್ಪ ಹರಿಹಾಯ್ದಿದ್ದಾರೆ. ಈ ಸಂಬಂಧ ಟ್ವೀಟ್  ಮಾಡಿರುವ ಅವರು, 

 ಕಾಂಗ್ರೆಸ್​  ಪಕ್ಷದ ತಾನು ಅಧಿಕಾರಕ್ಕೆ ಬರುವುದ್ದಕ್ಕಾಗಿ ವೀರಶೈವ ಲಿಂಗಾಯತ ಸಮುದಾಯ (veerashaiva Lingayat community) ದ ಒಲವನ್ನು ಗಳಿಸಿಕೊಂಡಿತ್ತು. ತನ್ನ ಗೆಲುವಿಗೆ ಸಮುದಾಯವನ್ನು ಮೆಟ್ಟಿಲಾಗಿಸಿಕೊಂಡ ಕಾಂಗ್ರೆಸ್, ಗದ್ದುಗೆ ಏರುತ್ತಲ್ಲೆ ಸಮುದಾಯವನ್ನು ಮರೆತಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಕಾಂಗ್ರೆಸ್​ನಲ್ಲಿ ಸಮುದಾಯದ 39 ಶಾಸಕರು ಗೆದ್ದಿದ್ದರೂ ಸಹ, ಅಲ್ಲಿ ಗಟ್ಟಿಧ್ವನಿಯು ಕಾಣುತ್ತಿಲ್ಲ ಕಾಂಗ್ರೆಸ್ ಪಕ್ಷದ ನಿಜವಾದ ಮುಖ ಇದೀಗ ಪ್ರದರ್ಶನಗೊಳ್ಳುತ್ತಿದೆ. ಸಮುದಾಯವನ್ನು ದಾರಿತಪ್ಪಿಸಿದ ಕಾಂಗ್ರೆಸ್ ಯಾವತ್ತಿಗೂ ಲಿಂಗಾಯಿತ ಸಮುದಾಯಕ್ಕೆ ನ್ಯಾಯ ಒದಗಿಸಿಲ್ಲ, ಬಿಜೆಪಿ ಪಕ್ಷವೊಂದೆ ಬಸವಣ್ಣರ ಮಾತು ತತ್ವ ಸಿದ್ಧಾಂತದ ಅಡಿಯಲ್ಲಿ ಸಮುದಾಯಕ್ಕೆ ನ್ಯಾಯ ಒದಗಿಸುವ ಪಕ್ಷ ಎಂದು ಬರೆದುಕೊಂಡಿದ್ದಾರೆ.  

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟ್ರೋಲ್​ ತಪ್ಪಿದ ಒಮಿನಿ! ಚರಂಡಿಗೆ ಉರುಳಿ ಅಪಘಾತ!

ಸಾಗರ/ ತಾಲ್ಲೂಕಿನ ಐಗಿನ್ ಬೈಲ್ ಸಮೀಪ ಹಾದು ಹೋಗುವ ರಾಷ್ಟ್ರೀ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ಕಾರೊಂದು ರಸ್ತೆ ಪಕ್ಕದ ಚರಂಡಿಗೆ ಉರುಳಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. 

ಗಾಯಾಳುಗಳನ್ನು ಸಾರಿಗೆ ಇಲಾಖೆಯ ನಿವೃತ್ತ ನೌಕರ ನಿಂಗಪ್ಪ ಹಾಗೂ ಅವರ ಪತ್ನಿ ಗೌರಮ್ಮ ಎಂದು ಗುರುತಿಸಲಾಗಿದೆ. ಸಾಗರದಲ್ಲಿ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶಿವಮೊಗ್ಗಕ್ಕೆ ವಾಪಸ್ ಹೋಗುತ್ತಿದ್ದರು. ಈ ವೇಳೆ  ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಆನಂದಪುರದಲ್ಲಿ ಅಪಘಾತ/ ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ವಾಹನ ಡಿಕ್ಕಿ! ಹಿಟ್ & ರನ್​ ಘಟನೆಯಲ್ಲಿ ಪಾದಚಾರಿ ಸಾವು!

ಸಾಗರ/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಪಾದಚಾರಿಯೊಬ್ಬರಿಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಲ್ಲಿನ ಯೆಡೆಹಳ್ಳಿಯ ಪೆಟ್ರೋಲ್ ಬಂಕ್ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು , ಅಲ್ಲಿಂದ ಎಸ್ಕೇಪ್​ ಆಗಿದೆ. 

ನಿನ್ನೆ ರಾತ್ರಿ ನಡೆದ ಘಟನೆ ಯಲ್ಲಿ 56 ವರ್ಷದ ಶಿವಕುಮಾರ್ ಎಂಬವರು, ಗಂಭೀರವಾಗಿ ಗಾಯಗೊಂಡಿದ್ದರು.ತಕ್ಷಣವೇ ಅವರನ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಆನಂದಪುರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.