12 ಅಡಿ ಉದ್ದ ಕಾಳಿಂಗಕ್ಕೆ ಮೇಜರ್ ಸರ್ಜರಿ! ರೋಚಕ ಕಾರ್ಯಾಚರಣೆ ವಿಡಿಯೋ ನೋಡಿ!

The Kalinga Foundation in Agumbe, with the help of veterinary doctors, successfully operated on the injured king cobra

12 ಅಡಿ ಉದ್ದ ಕಾಳಿಂಗಕ್ಕೆ ಮೇಜರ್ ಸರ್ಜರಿ!  ರೋಚಕ ಕಾರ್ಯಾಚರಣೆ ವಿಡಿಯೋ ನೋಡಿ!
king cobra agumbe

KARNATAKA NEWS/ ONLINE / Malenadu today/ Aug 5, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಆಗುಂಬೆಯಲ್ಲಿರುವ ಕಾಳಿಂಗ ಪೌಂಡೇಶನ್​ 12 ಅಡಿ ಉದ್ದದ ಕಾಳಿಂಗ ಸರ್ಪವೊಂದಕ್ಕೆ ಯಶಸ್ವಿಯಾಗಿ ಆಪರೇಷನ್ ಮಾಡಿಸಿದೆ. ಇದರ ವಿಡಿಯೋ ಇದೀಗ ಹೊರಬಿದ್ದಿದ್ದು, ದೃಶ್ಯಗಳು ಅಚ್ಚರಿ ಮೂಡಿಸ್ತಿದೆ.  ತೀರ್ಥಹಳ್ಳಿ ತಾಲೂಕಿನ ಕಮ್ಮರಡಿಯ ಮನೆಯೊಂದರ ಬಳಿ ಕಾಳಿಂಗ ಸರ್ಪ  ಕಾಣಿಸಿಕೊಂಡಿತ್ತು. ಕಳೆದ ಜುಲೈ  13 ರಂದು ಜೋರು ಮಳೆಯ ನಡುವೆ ತುರ್ತು ಕರೆಗೆ ಸ್ಪಂದಿಸಿದ ಕಾಳಿಂಗ ಪೌಂಡೇಶನ್​ನ ಸದಸ್ಯರು ಸ್ಥಳಕ್ಕೆ ತೆರಳಿದ್ದರು. ಆನಂತರ ಅಲ್ಲಿದ್ದ ಕಾಳಿಂಗ ಸರ್ಪ ಹಿಡಿದು ಸಂರಕ್ಷಿಸಿದಾಗ, ಅದು  ಗಾಯಗೊಂಡಿರುವ ವಿಚಾರ ಕಂಡುಬಂದಿದೆ. ಹೀಗಾಗಿ ಅದನ್ನು ಆ ರಾತ್ರಿ ಸಂರಕ್ಷಿಸಿ ಮರುದಿನ ಪಶುವೈದ್ಯ ಡಾ.ಯುವರಾಜ್​ ಹೆಗ್ಡೆ ನೃತೃತ್ವದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯ್ತು.  

ಗಾಯ ಗೊಂಡಿದ್ದ ರಿಂದ ಕಾಳಿಂಗ ಸರ್ಪ ವನ್ನು ತೀರ್ಥಹಳ್ಳಿಗೆ ತರಲು ಸಾಧ್ಯವಿರಲಿಲ್ಲ. ಹಾಗಾಗಿ ಗುಡ್ಡೇಕೇರಿಯ ಲ್ಲಿರುವ ಕಾಳಿಂಗ ಫೌಂಡೇಶನ್‌ಗೆ ತಂದು ಅನೆಸ್ತೇಷಿಯ ಕೊಟ್ಟು ಶಸ್ತ್ರಚಿಕಿತ್ಸೆ ನಡೆಸಲಾ ಯಿತು . ಇದರ ನಂತರ ಕಾಳಿಂಗ ನಿರಂತರ ನಿಗಾದಲ್ಲಿ ಚೇತರಿಕೆ ಕಂಡಿದೆ.  ಕಾಳಿಂಗ ಫೌಂಡೇಶನ್‌ನಲ್ಲಿಯೇ ಕಾಳಿಂಗ ಸರ್ಪಕ್ಕೆ ಆರೈಕೆ ಮಾಡಲಾಗಿದೆ. ಅಂತಿಮವಾಗಿ  ಆರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕಾಳಿಂಗ ಸರ್ಪವನ್ನು ಅರಣ್ಯಕ್ಕೆ ಬಿಡಲಾಗಿದೆ.  

ಏನಿದು ಕಾಳಿಂಗ ಪೌಂಡೇಶನ್​ 

ಆಗುಂಬೆ ಸಮೀಪದ ಗುಡ್ಡೇಕೇರಿಯಲ್ಲಿ ಕಾಳಿಂಗ ಸೆಂಟರ್ ಫಾರ್ ರೈನ್‌ಫಾರೆಸ್ಟ್ ಇಕಾಲಜಿ ಎಂಬ ಸಂಸ್ಥೆ ಇದೆ. ಹರ್ಪಿಟಾಲಜಿಸ್ಟ್ ಪಿ. ಗೌರಿ ಶಂಕರ್ ಅವರು ಈ ಸಂಸ್ಥೆ ಆರಂಭಿಸಿದ್ದಾರೆ. ಕಾಳಿಂಗ ಸರ್ಪದ ಕುರಿತು ಸಂಶೋಧನೆ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆಸಕ್ತರು ಸಂಸ್ಥೆಗೆ ಭೇಟಿ ನೀಡಿ ಕಾಳಿಂಗ ಸರ್ಪದ ಕುರಿತು ಕುತೂಹಲಕರ ಮಾಹಿತಿ ಪಡೆಯಬಹುದಾಗಿದೆ. ವನ್ಯಜೀವಿ ವಲಯದಲ್ಲಿ ಕಾಳಿಂಗ ಫೌಂಡೇಷನ್‌ಗೆ ವಿಶೇಷ ಹೆಸರಿದೆ.


 ರೈಲಿಗೆ ಸಿಲುಕಿ ವ್ಯಕ್ತಿ ಸಾವು

ಸಾಗರ  ತಾಲೂಕಿನ ಆನಂದಪುರ ಸಮೀಪದ ಎಡೆಹಳ್ಳಿ ಬಳಿ ವ್ಯಕ್ತಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.ಸುಮಾರು 40 ರಿಂದ 45 ವರ್ಷ ಅಂದಾಜಿನ ವಯಸ್ಸಿನ ವ್ಯಕ್ತಿ ಸಾವನ್ನಪ್ಪಿದ್ದು, ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.ಸಾವಿಗೆ ಕಾರಣವೂ ಸ್ಪಷ್ಟವಾಗಿಲ್ಲ . ಬೆಂಗಳೂರಿನಿಂದ ತಾಳಗುಪ್ಪ ಕಡೆ ಬರುವ ರಾತ್ರಿ 9 ಗಂಟೆಯ ರೈಲಿಗೆ ವ್ಯಕ್ತಿ ಸಿಲುಕಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದು ಪ್ರಕರಣ ಸಂಬಂಧ ರೈಲ್ವೆ ಪೊಲೀಸ್ ತಂಡ  ವಿಚಾರಣೆ ನಡೆಸ್ತಿದೆ  

ತೀರ್ಥಹಳ್ಳಿಯಲ್ಲಿ ಮತ್ತೆ ಶಿಕಾರಿ ಶೂಟ್​! ಶಿಕ್ಷಣಾಧಿಕಾರಿ ತೋಟದಲ್ಲಿ ಮಂಡಿ ಚಿಪ್ಪು ಎಗರಿಸಿದ್ದು ಯಾರು? ಕಾಂತರಾಜ್​ ಕೇಸ್​ಗೂ ಇದಕ್ಕೂ ಇದ್ಯಾ ಲಿಂಕ್?



ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಮತ್ತೆ ಕೋವಿಯ ಸದ್ದು ಕೇಳಿ ಬಂದಿದೆ. ಈ ಹಿಂದೆ ಶಿಕಾರಿಗೆ ಹೋಗಿದ್ದ ಸಂದರ್ಭದಲ್ಲಿ ಕಾಂತರಾಜ್ ಎಂಬಾತ ಸಾವನ್ನಪ್ಪಿದ್ದರು. ಆನಂತರ ಪ್ರಕರಣ ಬೇರೆ ಬೇರೆ ತಿರುವು  ಪಡೆದುಕೊಂಡಿತ್ತು. ಇದೀಗ ಅಂದಿನ ಘಟನೆಯಲ್ಲಿ ಕೇಳಿಬಂದ ಹೆಸರುಗಳೇ ನಿನ್ನೆ ರಾತ್ರಿ ತೀರ್ಥಹಳ್ಳಿಯಲ್ಲಿ ಕೇಳಿ ಬಂದ ಗುಂಡಿನ ಸದ್ದಿನ ಜೊತೆಗೂ ಕೇಳಿಬರುತ್ತಿದೆ. 


ನಡೆದಿದ್ದೇನು?

ತೀರ್ಥಹಳ್ಳಿ ತಾಲ್ಲೂಕಿನ ಆರಗದ ಸಮೀಪ ಗಿರಿಧರ್​ ಎಂಬವರ ತೋಟವಿದೆ. ಆ ತೋಟದ ಸಮೀಪ ನಿನ್ನೆ ಕೆಲವರು ಶಿಕಾರಿಗೆ ಹೋಗಿದ್ದಾರೆ. ತೋಟದಲ್ಲಿ ಏನೋ ಸದ್ದಾಗುತ್ತಿರುವದನ್ನ ಗಮನಿಸಿದ ಗಿರಿಧರ್ ತೋಟದಲ್ಲಿ ಹುಡುಕಾಡಿದ್ದಾರೆ. ಈ ವೇಳೆ ಫೈರ್ ಆಗಿದೆ. ಕತ್ತಲಲ್ಲಿ ಹಾರಿದ ಕೋವಿಯ ಗುಂಡು, ಗಿರಿಧರ್​ರವರ ಕಾಲಿನ ಮಂಡಿ ಚಿಪ್ಪು ಎಗರಿಸಿದೆ. ಘಟನೆ ಬೆನ್ನಲ್ಲೆ ಅವರು ಕೂಗಿಕೊಂಡಿದ್ದಾರೆ. ತಕ್ಷಣವೇ ಅಲ್ಲಿಗೆ ಬಂದ ಮನೆಯವರು ಗಿರಿಧರ್​ರವರನ್ನ ತೀರ್ಥಹಳ್ಳಿ ಆಸ್ಪತ್ರೆಗೆ ಅಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಶಿಕಾರಿ ಮಾಡಿದವರು ಯಾರು?

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕೇಳಿ ಬಂದ ಕೋವಿಯ  ಸದ್ದನ್ನ ಪಟಾಕಿ ಸದ್ದಾಗಿ ಪರಿವರ್ತಿಸುವ ಕೆಲಸವೂ ನಡೆಯುತ್ತಿದೆ. ಇನ್ನೊಂದೆಡೆ ಆರೋಪಿಗಳನ್ನ ಅಂದರ್ ಮಾಡಲೇ ಬೇಕು ಎನ್ನುವ ಹಕ್ಕೋತ್ತಾಯವೂ ಕೇಳಿಬರುತ್ತಿದೆ. ಈಗಾಗಲೇ ತೀರ್ಥಹಳ್ಳಿ ಪೊಲೀಸರು ಇಬ್ಬರು ಅನುಮಾನಸ್ಪದ ವ್ಯಕ್ತಿಗಳನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ಈ ಹಿಂದೆ ಕಾಂತರಾಜ್​ ಶಿಕಾರಿ ಕೇಸ್​ನಲ್ಲಿ ಕೇಳಿ ಬಂದ ಹೆಸರಗಳು ಇವೆ ಎಂಬುದು ಸ್ಪಷ್ಟವಾಗುತ್ತಿವೆ. ಅದರ ನಡುವೆ ಕೇಸನ್ನ ಅದಾಗಲೇ ಸಾಪ್​ ಸಪಾಟ್ ಮಾಡುವ ಪ್ರಯತ್ನಗಳು ಸಹ ಹೈಪ್ರೊಫೈಲ್​ನಲ್ಲಿ ನಡೆಯುತ್ತಿವೆ. 

ರಾಜಕೀಯವೇ ಜೋರು,  ಪೊಲೀಸರಿಗೆ ಬೇಕಿದ ಬಲ ಚೂರು

ತೀರ್ಥಹಳ್ಳಿಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಆಕ್ಷನ್​ ಕೈಗೊಳ್ಳಲು ಇಲಾಖೆಯ ಇನ್ನಷ್ಟು ಬಲ ಬೇಕಿದೆ. ಪೊಲೀಸರ ಮೇಲೆಯೇ ಇಲ್ಲ ಸಲ್ಲದನ್ನ ಹೇಳಿ ತಲೆಗೆ ಕಟ್ಟುವ ಆರೋಪಿಗಳು ರಾಜರೋಷವಾಗಿ ಶಿಕಾರಿ ಮಾಡುತ್ತಿದ್ದಾರೆ. ರಾಜಕಾರಣದ ಬಲದೊಂದಿಗೆ ಕಾನೂನುನಿಂದ ತಪ್ಪಿಸಿಕೊಳ್ತಿರುವ ಪರಿಣಾಮ ಇದೀಗ ಮತ್ತೊಂದು ಶಿಕಾರಿ ಕೇಸ್ ಸಂಭವಿಸಿದ್ದು, ಕೋವಿಯ ಗುಂಡು ಹಾರಿದೆ. ನಾಳೆ ಇದು ಪಟಾಕಿ ಸದ್ದು ಎಂದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಸ್ಥಳೀಯ ವ್ಯಕ್ತಿಯೊಬ್ಬರು.   




ಇನ್ನಷ್ಟು ಸುದ್ದಿಗಳು 



 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು