ತೀರ್ಥಹಳ್ಳಿಯಲ್ಲಿ ಮತ್ತೆ ಶಿಕಾರಿ ಶೂಟ್​! ಶಿಕ್ಷಣಾಧಿಕಾರಿ ತೋಟದಲ್ಲಿ ಮಂಡಿ ಚಿಪ್ಪು ಎಗರಿಸಿದ್ದು ಯಾರು? ಕಾಂತರಾಜ್​ ಕೇಸ್​ಗೂ ಇದಕ್ಕೂ ಇದ್ಯಾ ಲಿಂಕ್?

One person was injured when gunshots were heard in a farm near Aragada in Theerthahalli talukತೀರ್ಥಹಳ್ಳಿ ತಾಲ್ಲೂಕಿನ ಆರಗದ ಸಮೀಪದ ತೋಟವೊಂದರಲ್ಲಿ ಕೋವಿಯಿಂದ ಗುಂಡು ಹಾರಿದ ಸದ್ದು ಕೇಳಿದ್ದು, ಓರ್ವರು ಗಾಯಗೊಂಡಿದ್ಧಾರೆ

ತೀರ್ಥಹಳ್ಳಿಯಲ್ಲಿ ಮತ್ತೆ ಶಿಕಾರಿ ಶೂಟ್​!  ಶಿಕ್ಷಣಾಧಿಕಾರಿ ತೋಟದಲ್ಲಿ ಮಂಡಿ ಚಿಪ್ಪು ಎಗರಿಸಿದ್ದು ಯಾರು? ಕಾಂತರಾಜ್​ ಕೇಸ್​ಗೂ ಇದಕ್ಕೂ ಇದ್ಯಾ ಲಿಂಕ್?

KARNATAKA NEWS/ ONLINE / Malenadu today/ Aug 5, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಮತ್ತೆ ಕೋವಿಯ ಸದ್ದು ಕೇಳಿ ಬಂದಿದೆ. ಈ ಹಿಂದೆ ಶಿಕಾರಿಗೆ ಹೋಗಿದ್ದ ಸಂದರ್ಭದಲ್ಲಿ ಕಾಂತರಾಜ್ ಎಂಬಾತ ಸಾವನ್ನಪ್ಪಿದ್ದರು. ಆನಂತರ ಪ್ರಕರಣ ಬೇರೆ ಬೇರೆ ತಿರುವು  ಪಡೆದುಕೊಂಡಿತ್ತು. ಇದೀಗ ಅಂದಿನ ಘಟನೆಯಲ್ಲಿ ಕೇಳಿಬಂದಿದ್ದ ಪರಿಚಿತ ಹೆಸರುಗಳೇ ನಿನ್ನೆ ರಾತ್ರಿ ತೀರ್ಥಹಳ್ಳಿಯಲ್ಲಿ ಕೇಳಿ ಬಂದ ಗುಂಡಿನ ಸದ್ದಿನ ಜೊತೆಗೂ ಕೇಳಿಬರುತ್ತಿದೆ. 


ನಡೆದಿದ್ದೇನು?

ತೀರ್ಥಹಳ್ಳಿ ತಾಲ್ಲೂಕಿನ ಆರಗದ ಸಮೀಪ ಗಿರಿಧರ್​ ಎಂಬವರ ತೋಟವಿದೆ. ಆ ತೋಟದ ಸಮೀಪ ನಿನ್ನೆ  ಶಿಕಾರಿ ನಡೆದಿದೆ  . ಈ ವೇಳೆ ಫೈರ್ ಆಗಿದೆ. ಕತ್ತಲಲ್ಲಿ ಹಾರಿದ ಕೋವಿಯ ಗುಂಡು, ಅಲ್ಲಿದ್ದ ಒಬ್ಬರ ಕಾಲಿನ ಮಂಡಿ ಚಿಪ್ಪು ಎಗರಿಸಿದೆ. ಘಟನೆ ಬೆನ್ನಲ್ಲೆ ಅವರು ಕೂಗಿಕೊಂಡಿದ್ದಾರೆ. ತಕ್ಷಣವೇ  ಗಾಯಾಳನ್ನ ತೀರ್ಥಹಳ್ಳಿ ಆಸ್ಪತ್ರೆಗೆ ಅಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಶಿಕಾರಿ ಮಾಡಿದವರು ಯಾರು?

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕೇಳಿ ಬಂದ ಕೋವಿಯ  ಸದ್ದನ್ನ ಪಟಾಕಿ ಸದ್ದಾಗಿ ಪರಿವರ್ತಿಸುವ ಕೆಲಸವೂ ನಡೆಯುತ್ತಿದೆ. ಇನ್ನೊಂದೆಡೆ ಆರೋಪಿಗಳನ್ನ ಅಂದರ್ ಮಾಡಲೇ ಬೇಕು ಎನ್ನುವ ಹಕ್ಕೋತ್ತಾಯವೂ ಕೇಳಿಬರುತ್ತಿದೆ. ಈಗಾಗಲೇ ತೀರ್ಥಹಳ್ಳಿ ಪೊಲೀಸರು ಇಬ್ಬರು ಅನುಮಾನಸ್ಪದ ವ್ಯಕ್ತಿಗಳನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ಈ ಹಿಂದೆ ಕಾಂತರಾಜ್​ ಶಿಕಾರಿ ಕೇಸ್​ನಲ್ಲಿ ಕೇಳಿ ಬಂದ ಹೆಸರಗಳು ಇವೆ ಎಂಬುದು ಸ್ಪಷ್ಟವಾಗುತ್ತಿವೆ. ಅದರ ನಡುವೆ ಕೇಸನ್ನ ಅದಾಗಲೇ ಸಾಪ್​ ಸಪಾಟ್ ಮಾಡುವ ಪ್ರಯತ್ನಗಳು ಸಹ ಹೈಪ್ರೊಫೈಲ್​ನಲ್ಲಿ ನಡೆಯುತ್ತಿವೆ. 

ರಾಜಕೀಯವೇ ಜೋರು,  ಪೊಲೀಸರಿಗೆ ಬೇಕಿದ ಬಲ ಚೂರು

ತೀರ್ಥಹಳ್ಳಿಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಆಕ್ಷನ್​ ಕೈಗೊಳ್ಳಲು ಇಲಾಖೆಯ ಇನ್ನಷ್ಟು ಬಲ ಬೇಕಿದೆ. ಪೊಲೀಸರ ಮೇಲೆಯೇ ಇಲ್ಲ ಸಲ್ಲದನ್ನ ಹೇಳಿ ತಲೆಗೆ ಕಟ್ಟುವ ಆರೋಪಿಗಳು ರಾಜರೋಷವಾಗಿ ಶಿಕಾರಿ ಮಾಡುತ್ತಿದ್ದಾರೆ. ರಾಜಕಾರಣದ ಬಲದೊಂದಿಗೆ ಕಾನೂನುನಿಂದ ತಪ್ಪಿಸಿಕೊಳ್ತಿರುವ ಪರಿಣಾಮ ಇದೀಗ ಮತ್ತೊಂದು ಶಿಕಾರಿ ಕೇಸ್ ಸಂಭವಿಸಿದ್ದು, ಕೋವಿಯ ಗುಂಡು ಹಾರಿದೆ. ನಾಳೆ ಇದು ಪಟಾಕಿ ಸದ್ದು ಎಂದರೂ ಅಚ್ಚರಿಯಿಲ್ಲ ಎನ್ನುತ್ತಾರೆ ಸ್ಥಳೀಯ ವ್ಯಕ್ತಿಯೊಬ್ಬರು.   

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು