ಕಾರಿನಲ್ಲಿತ್ತು ಕಾಳಿಂಗ | ವಿಷಸರ್ಪದ ಜೊತೆ 50 ಕಿಲೋಮೀಟರ್ ಪ್ರಯಾಣ | ಬೆಕ್ಕೊಂದು ನೀಡಿತು ಜೀವ ಉಳಿಸುವ ಸುಳಿವು| VIRAL ದೃಶ್ಯ

Malenadu Today

KARNATAKA NEWS/ ONLINE / Malenadu today/ Oct 19, 2023 SHIVAMOGGA NEWS’

ಓಡಾಡುವ ಕಾರಿನಲ್ಲಿ ಕಾಳಿಂಗ ಸರ್ಪ ಸೇರಿಕೊಂಡರೇ ಪರಿಸ್ಥಿತಿ ಏನಾಗಬೇಡ ಹೇಳಿ? ಇಂತಹದ್ದೊಂದು ಘಟನೆ  ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜೋಯಿಡಾದಲ್ಲಿ ನಡೆದಿದೆ

ಸುಮಾರು10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾರಿನಲ್ಲಿ ಸೇರಿಕೊಂಡು ಆತಂಕ ಮೂಡಿಸಿತ್ತು.  ಕ್ಯಾಸಲ್ ರಾಕ್ ಸಮೀಪದ ಖಾಂಡೆವಾಡಿ ಗ್ರಾಮದ ನಾಲ್ವರು ಸಹೋದರರು ಜಗಲಬೇಟ ಸಮೀಪ ಮೆಸ್ಟ್ ಬಿರೋಡಾ ದತ್ತಾತ್ರೆಯ ದೇವಸ್ಥಾನಕ್ಕೆ ಆಗಮಿಸಿದಾಗ ಕಾರಿನಲ್ಲಿ ಹಾವು ಸೇರಿಕೊಂಡಿರುವ ಸುಳಿವುಗೊತ್ತಾಗಿದೆ. 

ಬೆಕ್ಕೊಂದು ಕಾರಿನ ಸುತ್ತ ಸುತ್ತುತ್ತಿತ್ತು. ಅದನ್ನು ನೋಡಿ ಅಲ್ಲಿದ್ದವರಿಗೆ ಏನೋ ಅನುಮಾನ ಕಾಡಿದೆ. ಹಾಗಾಗಿ ಕಾರಿನಲ್ಲಿ  ಹುಡುಕಿದ್ದಾರೆ. ಆ ಸಂದರ್ಭದಲ್ಲಿ ಕಾರಿನ ಹಿಂದಿನ ಚಕ್ರಗಳ ನಡುವೆ ಕಾಳಿಂಗ ಬುಸುಗುಡುತ್ತಿರುವುದು ಗೊತ್ತಾಗಿದೆ. 

ಆ ಬಳಿಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂಧ ಅದಿಕಾರಿಗಳು, ರಕ್ಷಣಾ ತಂಡ  ಎರಡು ತಾಸು ಕಾರ್ಯಾಚರಣೆ ನಡೆಸಿ ಹಾವನ್ನ ರಕ್ಷಿಸಿದ್ದಾರೆ. ಖಾಂಡೆವಾಡಿ ಗ್ರಾಮದಲ್ಲೇ ಕಾರಿನೊಳಗೆ ಕಾಳಿಂಗ ಸರ್ಪ ಸೇರಿಕೊಂಡಿರುವ ಸಾಧ್ಯತೆ ಇದ್ದು ಕಾಳಿಂಗ ಸರ್ಪದೊಂದಿಗೆ ಸುಮಾರು 50 ಕಿಮೀ ದೂರದ ದೇವಸ್ಥಾನಕ್ಕೆ ಹೋಗಲಾಗಿತ್ತು.


ಇನ್ನಷ್ಟು ಸುದ್ದಿಗಳು 

ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ


 

Share This Article