BREAKING NEWS / ಹರಿವು ನಿಲ್ಲಿಸಿದ ತುಂಗಾನದಿ/ ಸಾಯುತ್ತಿವೆ ದೇವರ ಮೀನುಗಳು!

BREAKING NEWS / The flow of the Tunga river has stopped / The fishes of God are dying! Fish are dying at Chibbalagudde in Theerthahalli

BREAKING NEWS /  ಹರಿವು ನಿಲ್ಲಿಸಿದ ತುಂಗಾನದಿ/ ಸಾಯುತ್ತಿವೆ ದೇವರ ಮೀನುಗಳು!
BREAKING NEWS / ಹರಿವು ನಿಲ್ಲಿಸಿದ ತುಂಗಾನದಿ/ ಸಾಯುತ್ತಿವೆ ದೇವರ ಮೀನುಗಳು!

MALENADUTODAY.COM/ SHIVAMOGGA / KARNATAKA WEB NEWS  

ಶಿವಮೊಗ್ಗದಲ್ಲಿ ಮಳೆಯ ಆಗಮನ ಆಗದಿದ್ದರೇ, ನೀರಿಗಾಗಿ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆ. ವಿಶೇಷವಾಗಿ ತುಂಗೆಯ ತೀರದುದ್ದಕ್ಕೂ ಕುಡಿಯುವ ನೀರಿಗೂ ಬರಗಾಲ ಎದುರಾಗಬಹುದು.. ಏಕೆಂದರೆ, ಮಲೆನಾಡಿನ ಜೀವ ನದಿ ತುಂಗೆ ತನ್ನ ಹರಿವನ್ನ ನಿಲ್ಲಿಸಿದೆ. ಅಷ್ಟರಮಟ್ಟಿಗೆ ತುಂಗಾನದಿಯಲ್ಲಿ ನೀರು ಕಡಿಮೆಯಾಗಿದೆ. ಗುಂಡಿ, ತಗ್ಗು ಇಳಿಜಾರಿನಲ್ಲಿ ಚೂರು ನೀರು ನಿಂತಿರುವುದು ಬಿಟ್ಟರೆ,  ಹರಿವ ನೀರು ಕಾಣಲು ಸಿಗುತ್ತಿಲ್ಲ. ಇದು ನಿಜಕ್ಕೂ ಆತಂಕಕ್ಕಾಗಿ ವಿಚಾರ.

ಹೊಸನಗರಲ್ಲೂ ನೀರಿಲ್ಲ, ತೀರ್ಥಹಳ್ಳಿಯಲ್ಲಿಯು ನೀರಿಲ್ಲ 

ಆ ಕಡೆ ಹೊಸನಗರ ದಲ್ಲಿ ಶರಾವತಿ ಹಿನ್ನೀರು ಸೇತುವೆ ನಿರ್ಮಾಣಕ್ಕೆ ಹರಿದು, ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತಿದೆ. ಇತ್ತ ತೀರ್ಥಹಳ್ಳಿ ಯಲ್ಲಿ ತುಂಗಾನದಿ ಇಂಧನ ಖಾಲಿಯಾದಂತೆ ಬತ್ತುತ್ತಿದೆ. ಇನ್ನೂ ತುಂಗಾನದಿಗಳ ಉಪನದಿಗಳು , ಹಳ್ಳ, ತೊರೆಗಳು ಖಾಲಿಯಾಗಿ ತಿಂಗಳು ಮೇಲೆ ಇಪ್ಪತ್ತು ದಿನಗಳಾಗಿವೆ.  , ಕುಡುಮಲ್ಲಿಗೆ, ಬೆಜ್ಜವಳ್ಳಿ, ತೂದೂರು ಸೇರಿದಂತೆ ತೀರ್ಥಹಳ್ಳಿ ಭಾಗದ ಪಂಚಾಯಿತಿಗಳು ತುಂಗಾನದಿಯಿಂದಲೇ ಕುಡಿಯುವ ನೀರನ್ನು ಇಲ್ಲಿಯವರೆಗೂ ಹರಿಸಿತ್ತು. ಮುಂದೇನು ಕಥೆ ಗೊತ್ತಿಲ್ಲ

Read / ಶಿವಮೊಗ್ಗದ ಹೋಟೆಲ್​ ವಿರುದ್ಧ ಕೇಸ್​ ಗೆದ್ದ ಬೆಂಗಳೂರು ಗಾಂಧಿ ಬಜಾರ್​ನ ವಿದ್ಯಾರ್ಥಿ ಭವನ

ಸಾಯುತ್ತಿದೆ ದೇವರ ಮೀನುಗಳು

ಹೌದು, ಕುಡಿಯುವ ನೀರಿನ ಬರ ಒಂದು ಕಡೆಯಾದರೆ, ಇನ್ನೊಂದು ಕಡೆ ಚಿಬ್ಬಲಗುಡ್ಡೆ ಸಿದ್ಧಿವಿನಾಯಕ ದೇವಾಲಯದ ಬಳಿ ಇರುವ ದೇವರ ಮೀನುಗಳಿಗೂ ತುಂಗಾ ನದಿಯ ನೀರಿನ ಬರ ತಟ್ಟಿದೆ. ನೀರಿಲ್ಲದೆ ಇಲ್ಲಿನ ಮೀನುಗಳು ಸಾಯುತ್ತಿವೆ. ಈ ಭಾಗದಲ್ಲಿ ನೀರು ತೀರಾ ಕೆಳಗೆ ಇಳಿದಿದ್ದು, ಮೀನುಗಳಿಗೆ ಸಮಸ್ಯೆಯಾಗುತ್ತಿದೆಯಷ್ಟೆ ಅಲ್ಲದೆ, ನೀರಿನ ಹರಿವೇ ಇಲ್ಲದೆ, ಸಾಯಲು ಆರಂಭಿಸಿದೆ. ಇಲ್ಲಿ ಸಮಸ್ಯೆಯ ಗಂಭೀರತೆ ಎಷ್ಟರಮಟ್ಟಿಗೆ ಇದೆ ಎಂದರೆ, ದೇವಾಲಯದ ಸಮಿತಿಯವರು ತೀರ್ಥಹಳ್ಳಿ ತಹಶೀಲ್ದಾರ್ (thirthahalli tahashildar) ​ಗೆ ಪತ್ರ ಬರೆದು ಪರಿಸ್ಥಿತಿಯ ವಿವರಣೆ ಕೊಟ್ಟಿದ್ಧಾರೆ. 

ಮನವಿ ಪತ್ರದಲ್ಲಿ ಏನಿದೆ? 

ದೇವಾಲಯದ ವ್ಯವಸ್ಥಾಪನ ಸಮಿತಿ ಬರೆದಿರುವ ಪತ್ರದಲ್ಲಿ ಸಿದ್ದಿ ವಿನಾಯಕ ದೇವಸ್ಥಾನ ಹೊಂದಿಕೊಂಡಿರುವ ತುಂಗಾ ನದಿಯ ತೀರದಲ್ಲಿ ದೇವರ ಮೀನುಗಳಿದ್ದು, ಅವುಗಳನ್ನ ಭಕ್ತರು ಭಕ್ತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಆದರೆ ಕಳೆದ ಒಂದು ತಿಂಗಳಿನಿಂದ ಮೀನುಗಳಿರುವ ಗುಂಡಿಯಲ್ಲಿ ನೀರು ಸಂಗ್ರಹಣೆಯು ಕಡಿಯಾಗಿತ್ತಿದೆ. ಪರಿಣಾಮ ದೊಡ್ಡ ಮೀನುಗಳು ಸಾಯುತ್ತಿರುವುದು ಗಮನಕ್ಕೆ ಬಂದಿದೆ. ಉಳಿದ ಮೀನುಗಳ ಜೀವವನ್ನು ಉಳಿಸುವ ಸಲುವಾಗಿ ಈ ಗುಂಡಿಯ ಬಳಿ ಇರುವ ಕರೆಂಟ್ ಮೋಟಾರ್​ಗಳಿಂದ ನೀರು ತೆಗೆಯುವುದನ್ನು ನಿರ್ಬಂಧಿಸಬೇಕು ಎಂದು ಪತ್ರ ಬರೆಲಾಗಿದೆ. ಮಳೆ ಬರುವವರೆಗೂ ಮೋಟಾರ್​ಗಳಿಂದ ನೀರು ಎತ್ತುವುದನ್ನು ನಿಲ್ಲಿಸಬೇಕು ಎಂದು ಕೋರಲಾಗಿದೆ. 

Read/ ಶಿವಮೊಗ್ಗ ಬಳಿಕ ಸಾಗರ ಸಂಚಲನ/  ಕಾಂಗ್ರೆಸ್​ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ?

ಸಮಸ್ಯೆ ಏಕೆ? 

ಈ ಸಲ ಬಿಸಿಲು ಜಾಸ್ತಿ ಎಂಬುದು ಮಾತಿಗೆ ತಕ್ಷಣ ಸಿಗುವ ಕಾರಣವಾದರೂ ಸಹ, ತೀರ್ಥಹಳ್ಳಿಯ ಭಾಗದಲ್ಲಿ ಅಡಿಕೆ ತೋಟಗಳಿಗೆ ಹರಿವ  ನೀರು ಕೂಡ ಹಾಹಾಕಾರ ಸೃಷ್ಟಿಗೆ ಕಾರಣವಾಗುತ್ತಿದೆ. ಏಕೆಂದರೆ, ಈ ಸಲ ಹೆಚ್ಚುವರಿಯಾಗಿ ನೀರು ಬಳಕೆಯಾಗುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಿದ್ಧಾರೆ.. ಮತ್ತೆ ಕೆಲವೆಡೆ ರೈತರಿಗೆ ನೀಡುವ ವಿದ್ಯುತ್ ಪೂರೈಕೆಯ ಅವಧಿಯಲ್ಲಿಯು ಹೆಚ್ಚಳವಾಗಿದ್ದರ ಪರಿಣಾಮವಾಗಿ, ನೀರು ವಾಡಿಕೆಗಿಂತ ಹೆಚ್ಚುವರಿಯಾಗಿ ತೋಟಗಳಿಗೆ ಹರಿದಿದೆ. 

ಹಳ್ಳಕೊಳ್ಳ ಖಾಲಿ

.ಹಳ್ಳ, ಕೊಳ್ಳಗಳು ಅವಧಿಗೂ ಮೊದಲೇ ಬತ್ತಿದ್ದರಿಂದ ತುಂಗಾನದಿಗೆ ಒಳಹರಿವು ನಿಂತಿದೆ. ಮಾಲತಿ, ಕುಶಾವತಿ, ಕುಂಟೆಹಳ್ಳ, ದೇಗಿ ಹಳ್ಳಗಳು ಬರಿದಾಗಿವೆ. ತುಂಗಾನದಿಯ ತೀರದಲ್ಲಿ ಆಗುತ್ತಿರುವ ಕಾಮಗಾರಿಗಳು ಸಹ ನೀರಿನ ಬರಕ್ಕೆ ದೇಣಿಗೆ ನೀಡುತ್ತಿವೆ. ಇನ್ನೂ ನದಿಯಲ್ಲಿ ಅಲ್ಲಲ್ಲಿ ಕಟ್ಟಲಾಗಿರುವ ಕಟ್ಟೆಗಳಿಂದಾಗಿ ನೀರು ಅಲ್ಲಲ್ಲಿಯೇ ನಿಲ್ಲುತ್ತಿದ್ದು, ಮುಂದಕ್ಕೆ ಸಾಗಿದಂತೆ ನೀರಿನ ಬರ ಎದುರಾಗುತ್ತಿದೆ ಇದರ ಜೊತೆಯಲ್ಲಿ ಮೋಟಾರ್ ಪಂಪ್​ಗಳು ತುಂಗೆಯಲ್ಲಿರುವ ನೀರನ್ಜು ಯತೇಚ್ಚವಾಗಿ ಎತ್ತುತ್ತಿವೆ.. ಇದೇ ಕಾರಣಕ್ಕೆ ಚಿಬ್ಬಲಗುಡ್ಡೆಯ ಗುಂಡಿಗಳಲ್ಲಿ ನೀರು ಬತ್ತುತ್ತಿದೆ. 

ಮಲೆನಾಡು ಟುಡೆ, ಕಳೆದ ಫೆಬ್ರವರಿಯಲ್ಲಿ ತುಂಗಾನದಿಯ ನೀರಿನ ಬರದ ಬಗ್ಗೆ ಸುದ್ದಿಮಾಡಿತ್ತು. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತ್ತು. ಹಾಗಿದ್ದೂ ಪರಿಸ್ತಿತಿ ಇನ್ನಷ್ಟು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ಪೂರ್ಣ ಪರಿಹಾರ ಮಳೆಯ ಆಗಮನವಷ್ಟೆ ನೀಡಬಲ್ಲದು. ಅಲ್ಲಿವರೆಗಾದರೂ ನೀರಿನ ಬಳಕೆ ಹಿತಮಿತಕ್ಕೆ ಸೀಮಿತವಾಗಿಸಿಬೇಕಿದೆ. ಕನಿಷ್ಟ ಪಕ್ಷ ದೇವರ ಮೀನುಗಳ ಜೀವ ಉಳಿಸುವ ಕೆಲಸವಾಗಬೇಕಿದೆ. 

ಇದನ್ನು ಸಹ ಓದಿ

Read /ಶಿವಮೊಗ್ಗ ನಗರ ಕಾಂಗ್ರೆಸ್  ಅಲ್ಪಸಂಖ್ಯಾತರ ಘಟಕದ  ಅಧ್ಯಕ್ಷರಾಗಿ ಮೊಹಮದ್​ ನಿಹಾಲ್​  ನೇಮಕ

Read /ಮತದಾನ  ಮತ್ತು ಮತದಾರ ಜಾಗೃತಿಗಾಗಿ ಶಿವಮೊಗ್ಗ ನಗರ ಪಾಲಿಕೆಯ ವಿಶಿಷ್ಟ ಪ್ರಯತ್ನ 

Read / ಬಿಎಸ್​ವೈ ರೂಲ್ಸ್​, ಈಶ್ವರಪ್ಪನವರಿಗೂ ಅಪ್ಲೆಯಾಯ್ತಾ? ಕೆ.ಇ.ಕಾಂತೇಶ್​ ಮಾಜಿ  ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದೇಕೆ? 

Read / BREAKING NEWS/  ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್​ ದಾವಣಗೆರೆ ಎಲಿಫೆಂಟ್ ಸಕ್ಸಸ್​/  ಸೆರೆಯಾಗಿದ್ದೇಗೆ  ವೈಲ್ಡ್ ಟಸ್ಕರ್​!

Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ  9.5 KG  ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ? 

Read / ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ!  ಸಣ್ಣ ಅಸಡ್ಡೆಗೆ  ಜೀವವೇ ಹೋಯಿತೆ?  ಪೋಷಕರೇ  ಪ್ಲೀಸ್​ ಎಚ್ಚರ ವಹಿಸಿ! 

Read / ಶಿವಮೊಗ್ಗ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮತ್ತು ನಾಲ್ಕನೇ ‘ಪ್ರಬಲ’ ಅಭ್ಯರ್ಥಿ ಯಾರು? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News