ಎರಡನೇ ಹೆಂಡ್ತಿ ಬಿಟ್ಟು ಮೂರನೆಯವಳಿಗಾಗಿ ಹೊಡೆದಾಟ! ಬ್ಯೂಟಿ ಪಾರ್ಲರ್ನಲ್ಲಿ ನಡೀತು ಫೈಟ್
Sagar police have registered a case of assault on a man who left his second wife and went to the third
SHIVAMOGGA | Jan 27, 2024 | shivamogga police ಸಲ್ಲದ ಸಂಘ ಅಭಿಮಾನ ಭಂಗ ಎನ್ನುವ ಹಾಗಿನ ಪ್ರಕರಣವೊಂದು ಸಾಗರ ತಾಲ್ಲೂಕುನಲ್ಲಿ ನಡೆದಿದೆ. ಈ ಸಂಬಂಧ ಸಾಗರ ತಾಲ್ಲೂಕಿಗೆ ಸಂಬಂಧಿಸಿದ ಪೊಲೀಸ್ ಸ್ಟೇಷನ್ ವೊಂದರಲ್ಲಿ ಕೇಸ್ ದಾಖಲಾಗಿದೆ.
ಇಬ್ಬರನ್ನ ಮದುವೆಯಾಗಿದ್ದ ವ್ಯಕ್ತಿಯೊಬ್ಬರು ಮೂರನೇಯವಳ ಸಹವಾಸದಿಂದ ಆಸ್ಪತ್ರೆ ಸೇರುವಂತಾಗಿದೆ. ಸಾಗರ ತಾಲ್ಲೂಕು ನಿವಾಸಿಯೊಬ್ಬರು ತಮ್ಮ ಎರಡನೇ ಪತ್ನಿ ಜೊತೆಗೆ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರಂತೆ. ಆನಂತರ ಎರಡನೇ ಪತ್ನಿಯವರಿಂದಲೇ ಪರಿಚಯವಾದ ಮಹಿಳೆಯ ಜೊತೆಗೆ ಸಂಪರ್ಕ ಸಾಧಿಸಿದ್ದಾರೆ. ಸಂಪರ್ಕ ಸಂಬಂಧವಾಗಿ ಬದಲಾದ ನಂತರ ಎರಡನೇ ಪತ್ನಿ ದೂರವಾಗಿದ್ದಾರೆ.
ಇದೆಲ್ಲದರ ಬಳಿಕವೂ ಸಾಗರ ತಾಲ್ಲೂಕು ನಿವಾಸಿ ಚೆನ್ನಾಗಿಯೇ ಇದ್ದರು. ಈ ನಡುವೆ ಜೊತೆಗಿದ್ದ ಮಹಿಳೆ ಅವರನ್ನ ದೂರ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ಅದನ್ನು ಪ್ರಶ್ನೆ ಮಾಡುವ ಸಲುವಾಗಿ ನಿವಾಸಿಯು ಮಹಿಳೆ ನಡೆಸ್ತಿದ್ದ ಬ್ಯೂಟಿ ಪಾರ್ಲರ್ ವೊಂದಕ್ಕೆ ಬಂದಿದ್ದಾರೆ. ಅಲ್ಲಿ ಆಕೆಗಾಗಿ ಖರ್ಚು ಮಾಡಿದ ದುಡ್ಡಿನ ಬಗ್ಗೆ ಹೇಳಿ ಜೊತೆಗಿರು ಎಂದಿದ್ದಾರೆ. ಈ ವೇಳೆ ಜೋರು ಜೋರು ಮಾತು ನಡೆದು ಸಿಟ್ಟಿನಲ್ಲಿ ಡೋರ್ನ ಗ್ಲಾಸ್ಗೆ ಹೊಡೆದಿದ್ದಾರೆ.
ಇದೇ ಸಂದರ್ಭದಲ್ಲಿ ಅಂಗಡಿಯಲ್ಲಿದ್ದ ಪುರುಷರು ನಿವಾಸಿಯ ಕೈಗೆ ಅವರು ಒಡೆದಿದ್ದ ಗಾಜಿನ ಚೂರಿನಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಕೈಗಳ ನರ ಕಟ್ ಆಗಿದೆ. ಇದರಿಂದ ಅಲ್ಲಿಯೇ ಕುಸಿದುಬಿದ್ದ ಅವರನ್ನ ಆಸ್ಪತ್ರೆಯೊಂದಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ IPC 1860 (U/s-324,504,506,34) ಅಡಿಯಲ್ಲಿ ಮೂವರ ವಿರುದ್ಧ ಕೇಸ್ ದಾಖಲಾಗಿದೆ.