ಕಾರುಗಳ ನಡುವೆ ಡಿಕ್ಕಿ | ಬೈಕ್​ನಿಂದ ಬಿದ್ದ ಸವಾರ | ಶಿವಮೊಗ್ಗದಲ್ಲಿ ಸಾಗರ ಯುವಕ ಆರೆಸ್ಟ್! ಪೂರ್ತಿ ಡಿಟೇಲ್ಸ್

Collision between cars The rider fell from the bike Sagara taluk youth arrested in Shimoga! Full details ಕಾರುಗಳ ನಡುವೆ ಡಿಕ್ಕಿ | ಬೈಕ್​ನಿಂದ ಬಿದ್ದ ಸವಾರ | ಶಿವಮೊಗ್ಗದಲ್ಲಿ ಸಾಗರ ತಾಲ್ಲೂಕಿನ ಯುವಕ ಆರೆಸ್ಟ್! ಪೂರ್ತಿ ಡಿಟೇಲ್ಸ್

ಕಾರುಗಳ ನಡುವೆ ಡಿಕ್ಕಿ |  ಬೈಕ್​ನಿಂದ ಬಿದ್ದ ಸವಾರ |  ಶಿವಮೊಗ್ಗದಲ್ಲಿ ಸಾಗರ ಯುವಕ ಆರೆಸ್ಟ್!  ಪೂರ್ತಿ ಡಿಟೇಲ್ಸ್

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS

Shivamogga | Malnenadutoday.com |ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ (Shimoga Rural Police Station) ವ್ಯಾಪ್ತಿಯಲ್ಲಿ ಎರಡು ಕಾರುಗಳ ನಡುವೆ ಅಪಘಾತವಾಗಿರುವ ಘಟನೆ ನಿನ್ನೆ ನಡೆದಿದೆ. ಘಟನೆಯ ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಎರಡು ಕಾರುಗಳು ಜಖಂಗೊಂಡಿರುವುದು ಕಾಣಿಸಿದೆ. ಇನ್ನೂ ಘಟನೆಯಲ್ಲಿ ಯಾರಿಗೂ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಪ್ರಕರಣದಲ್ಲಿ ಚಾಲಕರು ರಾಜಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಹೊಳೆಹೊನ್ನೂರಲ್ಲಿ ಸ್ಕಿಡ್​ ಆಗಿ ಬಿದ್ದ ಸವಾರ

ಇನ್ನೂ ಅತ್ತ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ವ್ಯಕ್ತಿಯೊಬ್ಬ ಬೈಕ್​ ಸ್ಕಿಡ್ ಆಗಿ ಬಿದ್ದ ಘಟನೆಯ ಬಗ್ಗೆ ವರದಿಯಾಗಿದೆ. ಬೈಕ್​ ಚಲಾಯಿಸುತ್ತಿದ್ಧಾಗ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿದೆ. ಕೆಳಕ್ಕೆ ಬಿದ್ದ ಯುವಕ ಗಾಯಗೊಂಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.  



READ : ನಾಲ್ವರನ್ನ ಸಾಯಿಸಿ ಬೆಳಗಾವಿಯಲ್ಲಿ ಅಡಗಿದ್ದ ಆರೋಪಿ! ಉಡುಪಿ ಕೇಸ್​ನಲ್ಲಿ ಕಂಡು ಬಂದಿದ್ದೇನು?

ಸಿಕ್ಕಿಬಿದ್ದ ಗಾಂಜಾ ಆರೋಪಿ

ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ನಗರದ ಅನುಪಿನಕಟ್ಟೆ ರಸ್ತೆಯ ತುಂಗಾ ಮೇಲ್ದಂಡೆ ಚಾನಲ್ ನ ಸೇತುವೆಯ ಹತ್ತಿರ ಇಬ್ಬರು ವ್ಯಕ್ತಿಗಳು ಸ್ಕೋಡಾ ಕಾರಿನಲ್ಲಿ ಗಾಂಜಾ ಮಾರುತ್ತಿರುವುದನ್ನ ಗಮನಿಸಿದ ಪೊಲೀಸರು  ರೇಡ್ ನಡೆಸಿದ್ದಾರೆ. ಶಿವಪ್ರಸಾದ್ ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳ ತಂಡ ದಾಳಿ ನಡೆಸಿ  1) ಅಲ್ತಾಫ್ @ ಮಚ್ಚಿ, 38 ವರ್ಷ, ರಾಮನಗರ ಸಾಗರ ಟೌನ್  ಮತ್ತು  2) ಇನಾಯತ್, 29 ವರ್ಷ, ಟಿಪ್ಪು ನಗರ ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿದ್ದಾರೆ. 

READ : ಅಪ್ಪನನ್ನ ಕೂರಿಸಿಕೊಂಡು ಬೈಕ್​ನಲ್ಲಿ ಹೋಗುತ್ತಿದ್ದ ಮಗನಿಗೆ ಲಾರಿ ಡಿಕ್ಕಿ! ದುರಂತ ಘಟನೆ

ಇವರಿಂದ ಅಂದಾಜು ಮೌಲ್ಯ 2,10,000/-  ರೂಗಳ 5 ಕೆ.ಜಿ 250 ಗ್ರಾಂ ತೂಕದ ಒಣ  ಗಾಂಜಾ  ಅಂದಾಜು ಮೌಲ್ಯ 2,50,000/- ರೂಗಳ ಸ್ಕೋಡ ಕಾರು ಮತ್ತು 02 ಮೊಬೈಲ್ ಫೋನ್ ಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. 



ಆರೋಪಿತರ ವಿರುದ್ಧ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0437/2023  ಕಲಂ 8(ಸಿ), 20(ಬಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ