NSUI ನಿಂದ ಸ್ವಾಮಿ ವಿವೇಕಾನಂದರ 160ನೇ ಜಯಂತಿ ಕಾರ್ಯಕ್ರಮ

NSUI Shivamogga organized the 160th birth anniversary of Swami Vivekananda.

NSUI ನಿಂದ ಸ್ವಾಮಿ ವಿವೇಕಾನಂದರ 160ನೇ ಜಯಂತಿ ಕಾರ್ಯಕ್ರಮ

ಯುವಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಸ್ವಾಮಿ ವಿವೇಕಾನಂದರ ಓದು ಎಂದಿಗಿಂತ ಇಂದು ಹೆಚ್ಚಿದೆ ಎಂದು ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದ ಕಟ್ಟೆ  ಅಭಿಪ್ರಾಯ ಪಟ್ಟಿದ್ದಾರೆ.  ಇಂದು ಶಿವಮೊಗ್ಗ ನಗರದ ಮಹಾವೀರ ವೃತ್ತದಲ್ಲಿ ಜಿಲ್ಲಾ ಎನ್.ಎಸ್.ಯು.ಐ.ನಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 160ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಆದರ್ಶ ಹುಂಚದಕಟ್ಟೆ, ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. 

ತುಂಗಾ ನದಿಯ ಸೇತುವೆ ಮೇಲೆ ರೈಲ್ವೆ ವಿದ್ಯುತ್​ ಲೈನ್​/ ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​/ ಏನಿದು? ವಿವರ ಇಲ್ಲಿದೆ

ವಿವೇಕಾನಂದರ ಕಾಲಘಟ್ಟದಲ್ಲಿ ತೀರಾ ವಿಷಮ ಪರಿಸ್ಥಿತಿ ಇತ್ತು. ಅಂದು ಧರ್ಮ ಜಾಗೃತಿಯ ಜೊತೆಗೆ ಯುವಕರಲ್ಲಿ ಜಾಗೃತಿ ಮೂಢಿಸುವ ಅವಶ್ಯಕತೆ ಇತ್ತು. ಅಂತಹ ಸಂದರ್ಭದಲ್ಲಿ ವಿವೇಕಾನಂದರು ಯುವಕರನ್ನು ‘ಏಳಿ ಎದ್ದೇಳಿ’ ಎಂದು ಜಾಗೃತಗೊಳಿಸಿದ್ದರು. ಚಿಕಾಗೋ ಭಾಷಣದಲ್ಲಿ ಅವರು ಕೇವಲ ಹಿಂದೂ ಧರ್ಮದ ಪ್ರಾಚೀನತೆ, ಶ್ರೇಷ್ಠತೆಯನ್ನು ಹೇಳಲಿಲ್ಲ. ಎಲ್ಲ ಧರ್ಮಗಳೂ ಕೊನೆಗೆ ಸಾಕ್ಷಾತ್ಕಾರವನ್ನೇ ಸಾರುತ್ತವೆ ಎಂದು ಹೇಳಿದ್ದರು. ಎಲ್ಲ ಧರ್ಮಗಳವರನ್ನೂ ಸಹೋದರ-ಸಹೋದರಿಯರಂತೆ ಕಾಣಬೇಕು ಎಂದು ಸಂದೇಶ ನೀಡಿದ್ದರು ಎಂದರು.

ಜಸ್ಟ್ 2 ಸಾವಿರ ರೂಪಾಯಿಗೆ ಕೊಲೆ/ ಶಿವಮೊಗ್ಗದ ಆ ರೆಸಾರ್ಟ್​ನಲ್ಲಿ ಹತ್ಯೆ ಮಾಡಿದ ಉತ್ತರಪ್ರದೇಶದವ ಸಿಕ್ಕಿಬಿದ್ದಿದ್ದೇಗೆ?

ಆದರ್ಶ, ಸದೃಢ ದೇಶ ಕಟ್ಟುವಲ್ಲಿ ಯುವಕರ ಪಾತ್ರ ಹೆಚ್ಚಾಗಿದೆ ಎಂದು ತಿಳಿದಿದ್ದ ವಿವೇಕಾನಂದರು ಯುವಕರನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದರು. ಇಂದು ಧರ್ಮ-ಮತೀಯ ವಿಚಾರಗಳಿಂದ ಯುವಕರು ಅಂಧಕಾರದ ಕಡೆಗೆ ಹೋಗುತ್ತಿದ್ದಾರೆ. ಆದ್ದರಿಂದ ಇಂದು ಎಂದಿಗಿಂತ ಹೆಚ್ಚು ವಿವೇಕಾನಂದರ ಭಾಷಣಗಳು, ಕುವೆಂಪುರವರ ಬರಹಗಳನ್ನು ಓದುವ ಅವಶ್ಯಕತೆ ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಇದೆ ಎಂದು ತಿಳಿಸಿದರು.

ಸಾಗರ ಟೌನ್​ನಲ್ಲಿ ಹಲ್ಲೆ ಯತ್ನ ಕೇಸ್​ | ಸುನೀಲ್ ಹತ್ಯೆಗೆ 6 ತಿಂಗಳ ಹಿಂದೆಯೇ ಸ್ಕೆಚ್​? ಹಿಂದೂ ಸಂಘಟನೆಗಳ ಆರೋಪಗಳು ಏನೇನು?

ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ವಿಜಯ್ ಮಾತನಾಡಿ, ಸ್ವಾಮಿ ವಿವೇಕಾನಂದರ ಜಯಂತಿಯನ್ನು ಯುವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಯುವಕರು, ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಪಾಲಿಸಲು ಮುಂದಾಗಬೇಕೆಂದರು.ಎನ್.ಎಸ್.ಯು.ಐ. ನಗರಾಧ್ಯಕ್ಷ ಚರಣ್, ಮುಖಂಡ ಹರ್ಷಿತ್ ಗೌಡ ಮೊದಲಾದವವರು ಮಾತನಾಡಿದರು. ಪ್ರಮುಖರಾದ , ರವಿ, ಆಕಾಶ್, ಶಿವು ಮಲಗೊಪ್ಪ, ತೌಫಿಕ್, ವಿಶಾಲ್, ಚಂದ್ರೋಜಿ ರಾವ್, ರುಕ್ಮಾನ್ ,ಸಾಗರ್, ಚರಣ್, ಉಲ್ಲಾಸ್ ಶೆಟ್ಟಿ, ಗಿರೀಶ್, ಸುಹಾಸ್, ಜಗದೀಶ್, ದೇವರಾಜ್, ಸುದರ್ಶನ್,ಮತ್ತಿತರರು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com