ಅಧಿಕಾರಿಗಳ ಮನಸ್ಸಲ್ಲಿ ವರ್ಗಾವಣೆ ವಿಚಾರ! ಸರ್ಕಲ್​ ಇನ್​ ಸ್ಪೆಕ್ಟರ್​ ಮೆಂಟಾಲಿಟಿ ಸರಿಯಲ್ಲ! ಶಿವಮೊಗ್ಗದಲ್ಲಿ ಎಡಿಜಿಪಿ ಮಹತ್ವದ ಹೇಳಿಕೆ !

Transfer in the minds of officials! Circle Inspector Mentality is not right! ADGP's statement in Shimoga

ಅಧಿಕಾರಿಗಳ ಮನಸ್ಸಲ್ಲಿ ವರ್ಗಾವಣೆ ವಿಚಾರ! ಸರ್ಕಲ್​ ಇನ್​ ಸ್ಪೆಕ್ಟರ್​ ಮೆಂಟಾಲಿಟಿ ಸರಿಯಲ್ಲ! ಶಿವಮೊಗ್ಗದಲ್ಲಿ ಎಡಿಜಿಪಿ ಮಹತ್ವದ ಹೇಳಿಕೆ !

KARNATAKA NEWS/ ONLINE / Malenadu today/ Jun 26, 2023 SHIVAMOGGA NEWS

ಶಿವಮೊಗ್ಗದಲ್ಲಿ ನಿನ್ನೆ ನಡೆದ ಘಟನೆ ಸಂಬಂಧ ಇವತ್ತು ನಗರದ ಎಡಿಜಿಪಿ ಹಿತೇಂದ್ರ ಭೇಟಿಕೊಟ್ಟಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಅವರು, ಮುಂಬರುವ ಹಬ್ಬ ಹಾಗೂ ಚುನಾವಣೆಗಳ ಸಂಬಂಧ ಅಧಿಕಾರಿಗಳಿಂದ ಸಾಕಷ್ಟು ಮಾಹಿತಿ ಪಡೆದಿದ್ದು, ಈ ಸಂಬಂಧ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ನಡೆದ ಘಟನೆಗಳ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡದ ಎಡಿಜಿಪಿ ಹಿತೇಂದ್ರರವರು ಘಟನೆ ವಿಚಾರವಾಗಿ ಎಸ್​ಪಿ ಮಿಥುನ್​ ಕುಮಾರ್​ ಮಾಹಿತಿ ನೀಡಲಿದ್ದಾರೆ ಎಂದಿದ್ದಾರೆ. 

ಅಧಿಕಾರಿಗಳ ಮನಸ್ಸಲ್ಲಿ ವರ್ಗಾವಣೆಯ ವಿಚಾರವಿದೆ

ಚುನಾವಣೆಯಲ್ಲಿ ಬಂದೋಬಸ್ತ್​ ಚೆನ್ನಾಗಿ ನಡೆದಿದ್ದು, ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ಹೊಸ ಸರ್ಕಾರ ಬಂದಮೇಲೆ ಕೆಲವು ಅಧಿಕಾರಿಗಳ ಮನಸ್ಸಿನಲ್ಲಿ ವರ್ಗಾವಣೆಯ ವಿಚಾರವಿದೆ. ಅವರಿಗೆ ವರ್ಗಾವಣೆ ಆಗಲಿ, ಆಗದಿರಲಿ ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ ಅಪ್​ಗ್ರೇಡ್​ ಆಗಿರುವಂತಹ ಸ್ಟೇಷನ್​ಗಳಲ್ಲಿ ಇನ್​ಸ್ಪೆಕ್ಟರ್​ಗಳು ಸರ್ಕಲ್​ ಇನ್​ಸ್ಪೆಕ್ಟರ್​ ಗಳ ಮೆಂಟಾಲಿಟಿಯ ರೀತಿಯಲ್ಲಿ ಕೆಲಸ ಮಾಡಬಾರದು. ಇನ್​ಸ್ಪೆಕ್ಟರ್​ಗಳ ರೀತಿಯಲ್ಲಿಯೇ ಸ್ಟೇಷನ್​ನಲ್ಲಿ ಕಾರ್ಯನಿರ್ವಹಿಸಬೇಕು ಎಂದುಸೂಚಿಸಿದ್ದೇನೆ ಎಂದಿದ್ದಾರೆ.