ಟಿಪ್ಪು ನಗರದಲ್ಲಿ ನಿನ್ನೆ ನಡೆದಿದ್ದೇನು? ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದಿದ್ದಕ್ಕೆ ಲಿಂಕ್ ಏನು? ಹರಿದಾಡ್ತಿರೋ ‘ಕೋಮು’ ಸುದ್ದಿ ಬಗ್ಗೆ ಎಸ್​ಪಿ ಹೇಳಿದ್ದೇನು? 2 ಘಟನೆ 3 ಸುದ್ದಿ! ಏನಿದು?

What happened in Tipu Nagar yesterday? What is the link to what happened in Draupadamma Circle? What did the SP say about the news that is doing the rounds? 2 Incident 3 News! What is this?

ಟಿಪ್ಪು ನಗರದಲ್ಲಿ ನಿನ್ನೆ ನಡೆದಿದ್ದೇನು? ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದಿದ್ದಕ್ಕೆ ಲಿಂಕ್ ಏನು? ಹರಿದಾಡ್ತಿರೋ ‘ಕೋಮು’ ಸುದ್ದಿ ಬಗ್ಗೆ ಎಸ್​ಪಿ ಹೇಳಿದ್ದೇನು?  2 ಘಟನೆ 3  ಸುದ್ದಿ! ಏನಿದು?

KARNATAKA NEWS/ ONLINE / Malenadu today/ Jun 25, 2023 SHIVAMOGGA NEWS

ಅಸಲಿಗೆ ಶಿವಮೊಗ್ಗದ ಟಿಪ್ಪು ನಗರ ಹಾಗೂ ಗೋಪಾಳದಲ್ಲಿ ನಡೆದಿದ್ದು ಏನು? ಹೀಗೊಂದು ಪ್ರಶ್ನೆಯು ರಾತ್ರಿಯಿಂದಲೂ ನಾನಾ ಸ್ವರೂಪ ಪಡೆದುಕೊಳ್ಳುತ್ತಿದೆ. 

ಮೆಗ್ಗಾನ್​ ಬಳಿಯಲ್ಲಿ

ಶಿವಮೊಗ್ಗದ ಟಿಪ್ಪು ನಗರದಲ್ಲಿ ಎರಡು ಕೋಮುಗಳ ನಡುವೆ ಹೊಡೆದಾಟ ನಡೆದಿದೆ ಎಂಬ ಸುದ್ದಿಯೊಂದು ನಿನ್ನೆ ಸಂಜೆ 4-5 ಗಂಟೆಯಿಂದ ಗರಿಗೆದರಲು ಆರಂಭವಾಗಿತ್ತು. ಆದರೆ ಅದರ ಪೂರ್ವಪರ ತಿಳಿದುಬಂದಿರಲಿಲ್ಲ. ಆನಂತರ ಈ ಘಟನೆ ಬೆನ್ನಲ್ಲೆ ದ್ರೌಪದಮ್ಮ ಸರ್ಕಲ್​ ಸಮೀಪ , ಓರ್ವನಿಗೆ ಭರ್ಚಿಯಿಂದ ಚುಚ್ಚಲಾಗಿದೆ ಎಂಬ ಸುದ್ದಿಯು ಹೊರಬಿದ್ದಿತ್ತು. ಈ ಘಟನೆ ಬೆನ್ನಲ್ಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಬಳಿಯಲ್ಲಿ ಸಂಘಟನೆಗಳ ಕಾರ್ಯಕರ್ತರು ಮುಖಂಡರು ಜಮಾಯಿಸಿದ್ದರು. 

ಗಾಯಾಳು ಸಂದೇಶ್​​ ಹೇಳಿದ್ದೇನು?

ಇನ್ನೂ ಘಟನೆಯ ಬಗ್ಗೆ ಗಾಯಾಳು ಸಂದೇಶ್​ ಹೇಳಿರುವ ಪ್ರಕಾರ, ಗೋಪಿಶೆಟ್ಟಿಕೊಪ್ಪದ ಬಳಿಯಲ್ಲಿಆಟೋ ಚಾಲಕನೊಬ್ಬ ಕಾರೊಂದಕ್ಕೆ ಉಜ್ಜಿಕೊಂಡು ಮುಂದಕ್ಕೆ ಹೋಗಿದ್ಧಾನೆ. ಈ ವೇಳೆ ಕಾರಿನ ಗ್ಲಾಸ್​ ಒಡೆದು ಹೋಗಿದೆ. ಈ ವೇಳೆ ಕಾರ್​ ನಲ್ಲಿದ್ದವರು ಸಂದೇಶ್​ ಹಾಗೂ ನಾಲ್ಕೈದು ಜನ ಆಕ್ಸಿಡೆಂಟ್ ಮಾಡಿದವನನ್ನ ಹಿಡಿಯಲು ಪ್ರಯತ್ನಿಸಿ ಆತನಿಗೆ ಒಂದೆರಡು ಏಟು ಹೊಡೆದಿದ್ದಾರೆ.

ಅಷ್ಟರಲ್ಲಿ ಆತ ಅಲ್ಲಿಂದ ಎಸ್ಕೇಪ್ ಆಗಿದ್ಧಾನೆ. ಹಾಗಾಗಿ ಆತನನ್ನ ಹಿಡಿಯಲು ಸ್ನೇಹಿತನ ಬೈಕ್​ನಲ್ಲಿ ಹಿಂಬಾಲಿಸಿಕೊಂಡು ಹೋಗಿದ್ಧಾರೆ. ಟಿಪ್ಪು ನಗರದಲ್ಲಿ ಆಟೋ ಡ್ರೈವರ್ ಪತ್ತೆಯಾಗುತ್ತಲೇ ಸಂದೇಶ್​ ಹಾಗೂ ಉಳಿದವರು ಆಕ್ಸಿಡೆಂಟ್​ ಮಾಡಿದ್ದರ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಸುಮಾರು 30 ಮಂದಿ ಜಮಾಯಿಸಿದ್ದರಂತೆ, ಅಲ್ಲದೆ ಪ್ರಶ್ನಿಸಲು ಬಂದವರ ಮೇಲೆ ಹಲ್ಲೆ ನಡೆಸಿದ್ದಾರೆ. ಸಂದೇಶ್​ರನ್ನ ಗಾಡಿಯಿಂದ ಕೆಳಕ್ಕೆ ಬೀಳಿಸಿ ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ. ಸಂದೇಶ್​ರ ಕಣ್ಣಿಗೆ ಘಟನೆಯಲ್ಲಿ ಪೆಟ್ಟಾಗಿದ್ದು ಮೆಗ್ಗಾನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. 

ಇನ್ನೊಂದು ಘಟನೆಯೇನು?

ಇನ್ನೂ ಟಿಪ್ಪು ನಗರದಲ್ಲಿ ನಡೆದ ಘಟನೆ ಬೆನ್ನಲ್ಲೆ ಅಂದರೆ ಸುಮಾರು 6 ಗಂಟೆಗೆ ವಿಜಯಕುಮಾರ್ ಎಂಬಾತನ ಮೇಲೆ ದ್ರೌಪದಮ್ಮ ಸರ್ಕಲ್​ ಬಳಿಯಲ್ಲಿ ಹಲ್ಲೆಯಾಗಿದೆ.  ಪೊಲೀಸ್ ಮೂಲಗಳಿಂದ ಸಿಕ್ಕಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಜಯ್​ ಕುಮಾರ್ ಎಂಬಾತನನ್ನ ದ್ರೌಪದಮ್ಮ ಸರ್ಕಲ್​ ಬಳಿಗೆ ಬರುವಂತೆ ತಸ್ತ್ರು ಹಾಗೂ  ಗುರುಸಿದ್ದಪ್ಪ ಎಂಬವರು ಕರೆಸಿಕೊಂಡಿದ್ದಾರೆ. ಅಲ್ಲದೆ ಆತನೊಂದಿಗೆ ಗಲಾಟೆ ತೆಗೆದು ಆತನಿಗೆ ಸ್ಕ್ರೂ ಡ್ರೈವರ್​ ಭುಜಕ್ಕೆ ಚುಚ್ಚಿದ್ದಾರೆ. ಈ ಗಲಾಟೆಯು ವೈಯಕ್ತಿಕ ಕಾರಣಕ್ಕೆ ಆಗಿದ್ದು ಎಂಬ ಮಾಹಿತಿಯಿದೆ ಎಂದು ಎಸ್​ಪಿ ಮಿಥುನ್​ ಕುಮಾರ್​ ವಾಟ್ಸ್ಯಾಪ್​ ಮೆಸೇಜ್​ನಲ್ಲಿ ಹೇಳಿದ್ಧಾರೆ.  

ಎರಡು ಪ್ರಕರಣಗಳ ನಡುವೆ ಲಿಂಕ್​!

ಇದರ ನಡುವೆ ಎರಡು ಪ್ರಕರಣಗಳ ನಡುವೆ ಲಿಂಕ್​ಗಳು ಹೇಗೆ ಸೃಷ್ಟಿಯಾದವೋ ಗೊತ್ತಿಲ್ಲ. ಟಿಪ್ಪು ನಗರದಲ್ಲಿ ಗೋ ರಕ್ಷಣೆ ಮಾಡಬೇಕು ಎಂದು ಹೊರಟವರ ಮೇಲೆ ಹಲ್ಲೆ ಮಾಡಲಾಗಿದೆ. ಅವರನ್ನ ಮೆಗ್ಗಾನ್​ನಲ್ಲಿ ನೋಡಲು ಬಂದ ವ್ಯಕ್ತಿಗೆ ದ್ರೌಪದಮ್ಮ ಸರ್ಕಲ್​ನಲ್ಲಿ ಕರೆದು ಇರಿಯಲಾಗಿದೆ ಎಂಬ ಸುದ್ದಿಯೊಂದು ನಿನ್ನೆ ಗಾಳಿಗಿಂತಲೂ ವೇಗವಾಗಿ ಹರಡಿತ್ತು. ಅಲ್ಲದೆ ಮೆಗ್ಗಾನ್ ಆಸ್ಪತ್ರೆಯ ಬಳಿಯಲ್ಲಿ ಸಂಘಟನೆಗಳ ಮುಖಂಡರು ಜಮಾಯಿಸಿದ್ದು, ಇರುವ ವದಂತಿ ಇನ್ನಷ್ಟು ರೆಕ್ಕೆಪುಕ್ಕ ಬರುವಂತೆ ಆಗಿತ್ತು. 

ಸ್ಪಷ್ಟನೆ ನೀಡಿದ ಎಸ್​ಪಿ ಮಿಥುನ್ ಕುಮಾರ್ 

ಆನಂತರ ಎಸ್​ಪಿ ಮಿಥುನ್​ ಕುಮಾರ್​ ಇದೆಲ್ಲಾ ಫೇಕ್​ ನ್ಯೂಸ್​, ಎರಡು ಘಟನೆಗಳಿಗೂ ಸಂಬಂಧವಿಲ್ಲ. ಅದು ಬೇರೆಯ ಘಟನೆ ಇದು ಬೇರೆಯ ಘಟನೆ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೆ ಈ ಸಂಬಂಧ ಹರಡುತ್ತಿರುವ ಸುದ್ದಿಗಳನ್ನು ಪ್ರಸ್ತಾಪಿಸಿ, ಇಂತಹ ಘಟನೆಗಳು ನಡೆದಿಲ್ಲ. ಒಂದು ಘಟನೆ ಡ್ರಂಕ್​ನ್ ಡ್ರೈವ್​ ಪ್ರಕರಣವಾಗಿದ್ದರೇ, ಇನ್ನೊಂದು ಘಟನೆ ವೈಯಕ್ತಿಕ ಕಾರಣಕ್ಕೆ ನಡೆದಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದರು.

ಇಬ್ಬರ ಬಂಧನ

ಇನ್ನೂ ಸಂದೇಶ್ ಹಾಗೂ ಜಿತೇಂದ್ರ ಎಂಬಿಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಈ ಬಗ್ಗೆಯು ಎಸ್​ಪಿ ಮಿಥುನ್​ ಕುಮಾರ್ ಮಾಹಿತಿ ನೀಡಿದ್ದಾರೆ. ಒಟ್ಟಾರೆ ತುಂಗಾನಗರ ಪೊಲೀಸ್ ಸ್ಟೇಷನ್​ ಲಿಮಿಟ್​ನಲ್ಲಿ ನಿನ್ನೆ ನಡೆದಿದ್ದ ಘಟನೆ ಗಾಳಿಸುದ್ದಿಯಾಗಿ ನಾನಾ ರೂಪ ಪಡೆದುಕೊಳ್ಳುವುದಕ್ಕಿಂತಲೂ ಮೊದಲು ಪೊಲೀಸರು ಘಟನೆಯ ಸ್ಪಷ್ಟ ಚಿತ್ರಣವನ್ನ ನೀಡಿದ್ಧಾರೆ. ಇದೇ ರೀತಿಯಲ್ಲಿ ಪೊಲೀಸರು ವಿಷಯವನ್ನು ಇನ್ನಷ್ಟು ಸ್ಪಷ್ಟವಾಗಿ ನೀಡಿದರೇ, ಹಲವು ಘಟನೆಗಳ ಹಿಂದಿನ ಫೇಕ್​ ನ್ಯೂಸ್​ಗಳನ್ನು ತಡೆಯಬಹುದಾಗಿದೆ.