ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಬಜರಂಗದಳದ ಕಾರ್ಯಕರ್ತ ಸುನಿಲ್ ಮೇಲೆ ಹಲ್ಲೆ ಯತ್ನದ ಘಟನೆ ವೈಯಕ್ತಿಕ ವಿಚಾರಕ್ಕೆ ನಡೆದಿದ್ದ ಗಲಾಟೆ ಎಂಬ ತಿರುವು ಪಡೆದುಕೊಂಡಿತ್ತು. ಮೇಲಾಗಿ ಈ ಸಂಬಂಧ ಎಸ್ಪಿ ಮಿಥುನ್ ಕುಮಾರ್ ಕೂಡ ಸುದ್ದಿಗೋಷ್ಟಿ ನಡೆಸಿ ತಂಗಿಯನ್ನು ಚುಡಾಯಿಸ್ತಿದ್ದ ಎಂಬ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದಿದ್ದರು. ಇನ್ನೂ ಇದೇ ವಿಚಾರವಾಗಿ ಆರೋಪಿಯ ಸಹೋದರಿ ಕೂಡ ಸಾಗರದಲ್ಲಿ ಸುದ್ದಿಗೋಷ್ಟಿ ನಡೆಸಿ, ಸುನೀಲ್ ವಿರುದ್ಧ ಆರೋಪಿಸಿದ್ದರು.
ಇದರ ಬೆನ್ನಲ್ಲೆ ನಿನ್ನೆ ಸಾಗರ ತಾಲ್ಲೂಕಿನಲ್ಲಿ ಹಿಂದೂ ಪರ ಸಂಘಟನೆಯ ಸದಸ್ಯರು ಸುದ್ದಿಗೋಷ್ಟಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ನ ಸಾಗರ ತಾಲ್ಲೂಕು ಅಧ್ಯಕ್ಷ ರವೀಶ್, ಪ್ರಕರಣದಲ್ಲಿ ಆರೋಪಿ ಸಹೋದರಿ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಕೆಲವರ ಬಲವ೦ತದ ಪರಿಣಮ ನೀಡಿದ ಹೇಳಿಕೆ ಯಾಗಿದೆ. ಘಟನೆ ನಡೆದಿದ್ದರಲ್ಲಿ ಸುನಿಲನ ಯಾವುದೇ ಪಾತ್ರವಿಲ್ಲ ಎಂದಿದ್ದಾರೆ. ಆರೋಪಿ ಸಮೀರನ ಸಹೋದರಿಯ ಹೇಳಿಕೆ ಕೇವಲ ಕಟ್ಟುಕತೆ ಯಾಗಿದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನಿಜ ಸಂಗತಿಯನ್ನು ಮರೆ ಮಾಚಿ, ಪ್ರಕರಣದ ದಿಕ್ಕು ತಪ್ಪಿಸುವುದಕ್ಕಾಗಿ ಈ ರೀತಿಯ ಹೇಳಿಕೆ ಕೊಡಿಸಿದ್ದಾರೆ ಎಂದಿದ್ದಾರೆ.
ಸಾಗರ ಸುದ್ದಿ : ನಡೆವ ಘಟನೆಗಳಿಗೆಲ್ಲಾ ಕೋಮು ಬಣ್ಣ ಕಲ್ಪಿಸುವುದು ಬೇಡ
ಸುನಿಲನ ಹತ್ಯೆಗೆ ಕಳೆದ 6 ತಿಂಗಳಿನಿಂದ ಸ್ಕೆಚ್
ಸಾಗರದ ಬಜರಂಗದಳದ ಸಕ್ರಿಯಕಾರ್ಯಕರ್ತ ಸುನಿಲನ ಹತ್ಯೆಗೆ ಕಳೆದ 6 ತಿಂಗಳಿನಿಂದ ಸ್ಕೆಚ್ ಹಾಕಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ 10-02-2022ರಂದು FIR ದಾಖಲಾಗಿದೆ. ನೆಹರೂ ನಗರದ ಇಮ್ರಾನ್ ಮತ್ತು ಕೆಲವರು ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿರುವ ಕುರಿತಾದ ದೂರಿನ ಸಾಕ್ಷ್ಯ ನಮ್ಮ ಹತ್ತಿರ ಇದೆ ಎಂದು ಬಜರಂಗದಳದ ಶಿವಮೊಗ್ಗ ಜಿಲ್ಲಾ ಸಂಚಾಲಕ ರಾಜೇಶ್‌ಗೌಡ ಆರೋಪಿಸಿದ್ದಾರೆ. ಅಂದಿನಿಂದಲೇ ಈ ಸಂಬಂಧ ಯೋಜನೆ ರೂಪಿಸಲಾಗಿದೆ. ಹೊರ ಊರಿನವರು ಕ್ರಿಕೆಟ್ ಆಟಗಾರರ ಸೋಗಿನಲ್ಲಿ ಸಾಗರದ ವಸತಿಗೃಹವೊಂದರಲ್ಲಿ ಉಳಿದುಕೊಂಡು ಸುನಿಲನ ಹತ್ಯೆಗೆ ಸ್ಕೆಚ್ ಹಾಕಿದ್ದರು ಎಂದು ದೂರಿದ್ದಾರೆ.
ಸಾಗರ ಟೌನ್ನಲ್ಲಿ ನಡೆದ ಹಲ್ಲೆ ಯತ್ನ ಕೇಸ್ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ
ಆರೋಪಿ ಸಮೀರನ ಸಹೋದರಿಗೆ ಸುನೀಲ್ ಚುಡಾಯಿಸುತ್ತಿದ್ದ ಎನ್ನುವುದಾದರೆ ಆಕೆಯಲ್ಲಿಯೇ ಫೋನ್ ನಂಬರ್ ಕೇಳುತ್ತಿದ್ದ. ಆಕೆಯ ಅಣ್ಣನಲ್ಲಿ ಕೇಳುತ್ತಿರಲಿಲ್ಲ. ಮುಖ್ಯವಾಗಿ ಆಕೆಯ ತನ್ನಲ್ಲಿ ಪೋನ್ ಇಲ್ಲ ಎಂದು ಹೇಳಿದ್ದಾರೆ. ಅಲ್ಲಿಗೆ ಫೋನ್ ನಂಬರ್ ಕೇಳುವ ಪ್ರಶ್ನೆಯೆ ಬರುವುದಿಲ್ಲ ಎಂದು ಪ್ರಶ್ನಿಸಿದರು.
ಸಾಗರ ಟೌನ್ನಲ್ಲಿ ಹಲ್ಲೆಗೆ ಯತ್ನ ಕೇಸ್/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ
ಇನ್ನೂ ಇದೇ ವಿಚಾರವಾಗಿ ಮಾತನಾಡಿದ ಸ೦ಘ ಪರಿವಾರದ ಪ್ರಮುಖ ಅ.ಪು.ನಾರಾಯಣಪ್ಪ ಮಾತನಾಡ್ತಾ ಸುನಿಲ್ ಚುಡಾಯಿಸಿದ್ದೆ ನಿಜವಾದರೆ ಇದನ್ನು ಕಳೆದ 6 ತಿಂಗಳಿನಿಂದ ಸಮುದಾಯ ಸಹಿಸಿ ಕೊಂಡಿದೆಯೆ?, ತಕ್ಷಣದಲ್ಲಿ ಯಾಕೆ ಪೊಲೀಸರಿಗೆ ದೂರು ಕೊಡಲಿಲ್ಲ. ಹಲ್ಲೆ ನಡೆದ ಜಾಗದಲ್ಲಿ ಸುನೀಲ್ನ ಕಚೇರಿ ಇದ್ದ ಹಾಗಾಗಿ ಆತ ಅಲ್ಲಿಗೆ ಹೋಗಿದ್ದ. ಆದರೆ ಆರೋಪಿ ಯಾಕಾಗಿ ಅಲ್ಲಿಗೆ ಹೋಗಿದ್ದ. ಆತ ಅಲ್ಲಿ ಕೆಲಸಕ್ಕಾಗಿ ಹೋಗಿದ್ರೂ ಸಹ ಮಚ್ಚು ತರುವ ಅಗತ್ಯವೇನಿತ್ತು. ಸಹೋದರಿಯನ್ನು ಚುಡಾಯಿಸುತ್ತಿದ್ದ ಎಂಬ ದ್ವೇಷಕ್ಕೆ ಹಲ್ಲೆಗೆ ಮುಂದಾಗಿದ್ದರೆ ನಂತರ ಪೊಲೀಸರಿಗೆ ಸರಂಡರ್ ಆಗದೆ ಅಡಗಿದ್ದು ಯಾಕೆ. ಹಾಗಾಗಿ ಇದೊಂದು ಪೂರ್ವನಿಯೋಜಿತ ಸಂಚಿನ ಪ್ರಯತ್ನವಾಗಿದೆ ಎಂದರು.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
