ತುಂಗಾ ನದಿಯ ಸೇತುವೆ ಮೇಲೆ ರೈಲ್ವೆ ವಿದ್ಯುತ್​ ಲೈನ್​/ ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​/ ಏನಿದು? ವಿವರ ಇಲ್ಲಿದೆ

Railway power line on tunga river bridge/ Good news for railway passengers

ತುಂಗಾ ನದಿಯ ಸೇತುವೆ ಮೇಲೆ ರೈಲ್ವೆ ವಿದ್ಯುತ್​ ಲೈನ್​/ ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​/ ಏನಿದು? ವಿವರ ಇಲ್ಲಿದೆ

ಸರಿ ಸುಮಾರು 2 ವರ್ಷಗಳ ಹಿಂದೆ ಕೇಂದ್ರ ಸರ್ಕಾರ  ಬೀರೂರು-ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗದ ವಿದ್ಯುದ್ದೀಕರಣ ಯೋಜನೆಗೆ ಕೇಂದ್ರ ಸರ್ಕಾರವು 25 ಕೋಟಿ ರೂ, ಮಂಜೂರು ಮಾಡಿತ್ತು. ಬಜೆಟ್​ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿತ್ತು.  ಬೀರೂರು-ಶಿವಮೊಗ್ಗ-ತಾಳಗುಪ್ಪ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದ್ದರಿಂದ ಕೇಂದ್ರ ಸರ್ಕಾರ, ಈ ಬಗ್ಗೆ ಸ್ಪಂದನೆ ನೀಡಿ 25 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿತ್ತು.  

ಜಸ್ಟ್ 2 ಸಾವಿರ ರೂಪಾಯಿಗೆ ಕೊಲೆ/ ಶಿವಮೊಗ್ಗದ ಆ ರೆಸಾರ್ಟ್​ನಲ್ಲಿ ಹತ್ಯೆ ಮಾಡಿದ ಉತ್ತರಪ್ರದೇಶದವ ಸಿಕ್ಕಿಬಿದ್ದಿದ್ದೇಗೆ?

ಈ ಕಾಮಗಾರಿಯು ಸದ್ಯ  ಶಿವಮೊಗ್ಗ ನಗರವನ್ನು ಸಹ ತಲುಪಿದೆ. ಇದಕ್ಕೆ ಪೂರಕವೆಂಬಂತೆ ಶಿವಮೊಗ್ಗ ನಗರದ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರೈಲ್ವೆ ಸೇತುವೆಯ ಮೇಲೆ ವಿದ್ಯುತ್​ ಕಂಬಗಳನ್ನು ಅಳವಡಿಸಲಾಗಿದೆ. ಕರೆಂಟ್ ಪೋಲ್​ಗಳನ್ನು ಅಳವಡಿಸಲಾಗಿದ್ದು, ಅದಕ್ಕೆ ಲೈನ್​ಗಳನ್ನು ಸಹ ಫಿಕ್ಸ್ ಮಾಡಲಾಗಿದೆ. 

ಸಾಗರ ಟೌನ್​ನಲ್ಲಿ ಹಲ್ಲೆ ಯತ್ನ ಕೇಸ್​ | ಸುನೀಲ್ ಹತ್ಯೆಗೆ 6 ತಿಂಗಳ ಹಿಂದೆಯೇ ಸ್ಕೆಚ್​? ಹಿಂದೂ ಸಂಘಟನೆಗಳ ಆರೋಪಗಳು ಏನೇನು?

ರೈಲ್ವೆ ಇಲಾಖೆಯ ಸೆಂಟ್ರಲ್​ ಆರ್ಗನೈಸೇಷನ್​ ಫಾರ್​ ರೈಲ್ವೆ ಎಲೆಕ್ಟ್ರಿಫಿಕೇಷನ್​ ಸಂಸ್ಥೆ ಈ ಕಾಮಗಾರಿ ನಡೆಸ್ತಿದ್ದು, ಈ ಹಿಂದೆ ತಾಳಗುಪ್ಪದಲ್ಲಿಯು ವಿದ್ಯುದೀಕರಣದ ಕಾಮಗಾರಿ ವೇಗ ಪಡೆದುಕೊಂಡಿದ್ದರ ಬಗ್ಗೆ ಮಲೆನಾಡು ಟುಡೆ ಸುದ್ದಿ ಮಾಡಿತ್ತು. 

ಸಂಕ್ರಾಂತಿಯ ಹಬ್ಬದಂದು ತೀರ್ಥಹಳ್ಳಿಯ ಬೆಜ್ಜವಳ್ಳಿ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಏನೆಲ್ಲಾ ವಿಶೇಷವಿದೆ ಗೊತ್ತಾ? ವಿವರ ಇಲ್ಲಿದೆ

ನಿರೀಕ್ಷೆಯಂತೆ  ಕಾಮಗಾರಿ ಅಂತಿಮ ಹಂತ ತಲುಪುವ ಸಾಧ್ಯತೆ ಇದ್ದು, ಈ ಮಾರ್ಗದಲ್ಲಿ ಓಡಾಡುವ ರೈಲುಗಳು ವಿದ್ಯುತ್ ಚಾಲಿತ ಇಂಜಿನ್​ಗಳ ಮೂಲಕ ಸಂಚರಿಸಲಿವೆ. ಇದರಿಂದ ಟ್ರೈನ್​ಗಳ ವೇಗ ಇನ್ನಷ್ಟು ಹೆಚ್ಚಾಗುವ  ನಿರೀಕ್ಷೆಯಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com