ಶಿವಮೊಗ್ಗದಲ್ಲಿ ಇವತ್ತು ಬಹುತೇಕ ಪ್ರದೇಶದಲ್ಲಿ ಪವರ್ ಕಟ್! ಎಲ್ಲೆಲ್ಲಿ? ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS 

ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್-1, 2, 4 ಮತ್ತು 5ರಲ್ಲಿ ಸೆ.3 ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ  (Mescom,)ಪ್ರಕಟಣೆಯಲ್ಲಿ ತಿಳಿಸಿದೆ. 

ಮೆಗ್ಗಾನ್ ಆಸ್ಪತ್ರೆ, ಶರಾವತಿನಗರ ಎ ಮತ್ತು ಬಿ ಬ್ಲಾಕ್, ಹೊಸಮನೆ, ಜೈಲ್ ರಸ್ತೆ, ಕುವೆಂಪು ರಸ್ತೆ, ಯುನಿಟಿ ಆಸ್ಪತ್ರೆ, ಶಿವಶಂಕರ್ ಗ್ಯಾರೇಜ್, ದೈವಜ್ಞ ಕಲ್ಯಾಣ ಮಂದಿರ, ಸುಬ್ಬಯ್ಯ ಆಸ್ಪತ್ರೆ, ನರ್ಸ್ ಕ್ವಾಟ್ರಸ್, ಆಯುರ್ವೇದ ಆಸ್ಪತ್ರೆ, ಸಾಗರ ರಸ್ತೆ ಸುರಂಗ, ಬಿ.ಎಸ್.ಎನ್.ಎಲ್ ಕ್ವಾಟ್ರಸ್, ಗೊಮ್ಮಟೇಶ್ವರ ದೇವಸ್ಥಾನ, ಎಸ್. ಪಿ. ಕಛೇರಿ, ಪೋಲಿಸ್ ಠಾಣೆ, ಪೋಲೀಸ್ ಕ್ವಾಟ್ರಸ್, ಸಾಗರ ಮುಖ್ಯ ರಸ್ತೆ, ಅಶೋಕ್ ನಗರ, ಎ.ಆರ್. ಬಿ ಕಾಲೋನಿ, ನಾಗರಾಜಪುರ ಬಡಾವಣೆ, ಕುವೆಂಪು ರಸ್ತೆ, ಜ್ಯೋತಿ ಗಾರ್ಡನ್, ದುರ್ಗಿಗುಡಿ, ಸವರ್ ಲೈನ್ ರಸ್ತೆ, ಎಲ್.ಐ.ಸಿ ಕಛೇರಿ, ಮಿಷನ್ ಕಾಂಪೌಂಡ್, ಜೈಲ್ ಸರ್ಕಲ್  ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.


ಶಿವಮೊಗ್ಗದಿಂದ ಕಡೂರಿಗೆ ಹೋಗುತ್ತಿದ್ದ 3550 ಕೆ.ಜಿ. ರೇಷನ್​ ಅಕ್ಕಿ ಜಪ್ತಿ ಮಾಡಿದ ಭದ್ರಾವತಿ ಪೊಲೀಸರು!

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು Bhadravati Taluk ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂರುವರೆ ಟನ್​  ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಗೂಡ್ಸ್ ಟೆಂಪೋ ವಾಹನದಲ್ಲಿ ಶಿವಮೊಗ್ಗದಿಂದ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಬೆನ್ನಲ್ಲೆ  ಪೇಪರ್ ಟೌನ್ ಪೊಲೀಸ್ ಠಾಣೆ (Paper Town Police Station) ಪೊಲೀಸರು  ಬೈಪಾಸ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ್ಧಾರೆ. ವಾಹನವನ್ನು ಅಡ್ಡಗಟ್ಟಿ 3,550 ಕೆ.ಜಿ ಅಕ್ಕಿ ವಶಕ್ಕೆ ಪಡೆಯಲಾಗಿದೆ.  ಅಕ್ಕಿಯನ್ನು ಕಡೂರಿನಲ್ಲಿ ಪಾಲಿಶ್​ ಮಾಡಲು ತೆಗೆದುಕೊಂಡು ಹೋಗುತ್ತಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.   


ಇನ್ನಷ್ಟು ಸುದ್ದಿಗಳು 


 

Leave a Comment