”ತೀರ್ಥಹಳ್ಳಿ ಚುನಾವಣೆ ಸರ್ವೆ ರಿಪೋರ್ಟ್​ ಕಿಮ್ಮನೆ ರತ್ನಾಕರ್​ ಪರ/ ಆರಗ ಜ್ಞಾನೇಂದ್ರರಿಗೆ ಭೀತಿ”

Malenadu Today

ಕೇವಲ ಫೋನ್​ನಲ್ಲಿ ಕೇಳಿ ತೆಗೆದುಕೊಳ್ಳಬಹುದಾದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ತಪಾಸಣೆ ನೆಪದಲ್ಲಿ ಇಡಿ ಬರುವಂತೆ ಮಾಡಿದ್ದು, ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರ ಎಂದು ಕಿಮ್ಮನೆ ಗಂಭೀರ ಆರೋಪ ಮಾಡಿದ್ದಾರೆ. ಶಂಕಿತ ಉಗ್ರ ಶಾರಿಖ್ ಖಾತೆಗೆ ಸಂಬಂಧಿಸಿದಂತೆ ಆದ ಹಣಕಾಸಿನ ವಿಚಾರದಲ್ಲಿ ಇಡಿ ತೀರ್ಥಹಳ್ಳಿಯ ಕಾಂಗ್ರೇಸ್ ಕಛೇರಿಗೆ ಬಂದು ಪರಿಶೀಲನೆ ನಡೆಸಿದ್ದಕ್ಕೆ ಕಿಮ್ಮನೆ ರತ್ನಾಕರ್ (kimmane rathnakar shivamogga) ತೀಕ್ಷ್ೞವಾಗಿ ಪ್ರತಿಕ್ರೀಯಿಸಿದ್ದಾರೆ.

ತುಂಗಾ ನದಿಯ ಸೇತುವೆ ಮೇಲೆ ರೈಲ್ವೆ ವಿದ್ಯುತ್​ ಲೈನ್​/ ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​/ ಏನಿದು? ವಿವರ ಇಲ್ಲಿದೆ

ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾರೀಖ್ ಕುಟುಂಬಕ್ಕೂ ನನಗೂ ಸಂಬಂಧವಿಲ್ಲ.ಅವರ ಸಂಬಂಧಿಯಿಂದ ತೀರ್ಥಹಳ್ಳಿಯಲ್ಲಿ ಕಾಂಗ್ರೇಸ್ ಕಛೇರಿಗಾಗಿ ಕಾನೂನು ಬದ್ಧವಾಗಿ ಕರಾರು ಪತ್ರ ಮಾಡಿಕೊಂಡು,ಕಟ್ಟಡ ಬಾಡಿಗೆ ಪಡೆಯಲಾಗಿತ್ತು. ಬಾಡಿಗೆ ಕೊಟ್ಟ ವಿಚಾರಕ್ಕೆ ಮಾಹಿತಿ ಪಡೆಯಲು ಇಡಿಯವರು ದೆಹಲಿಯಿಂದ ಬರುವ ಅಗತ್ಯವಿರಲಿಲ್ಲ ಎಂದಿದ್ಧಾರೆ. 

ಜಸ್ಟ್ 2 ಸಾವಿರ ರೂಪಾಯಿಗೆ ಕೊಲೆ/ ಶಿವಮೊಗ್ಗದ ಆ ರೆಸಾರ್ಟ್​ನಲ್ಲಿ ಹತ್ಯೆ ಮಾಡಿದ ಉತ್ತರಪ್ರದೇಶದವ ಸಿಕ್ಕಿಬಿದ್ದಿದ್ದೇಗೆ?

ನನಗೂ ಆ ಕುಟುಂಬಕ್ಕೂ ಸಂಬಂಧವಿಲ್ಲ

ನನಗೂ ಆ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. ಇದು ಬಾಡಿಗೆದಾರರ ಸಂಬಂಧ.2015 ರಲ್ಲಿ ಎಂಟು ವರ್ಷಕ್ಕೆ ಕರಾರು ಪತ್ರ ಸಬ್ ರಿಜಿಸ್ಟ್ರಾರ್ ನಲ್ಲಿ ರಿಜಿಸ್ಟರ್ ಆಗಿದೆ. ಹತ್ತು ಲಕ್ಷ ಅಡ್ವಾನ್ಸ್ ಮತ್ತು ಪ್ರತಿ ತಿಂಗಳು ಒಂದು ಸಾವಿರ ಬಾಡಿಗೆ ಮಾಲೀಕರ ಖಾತೆಗೆ ಜಮಾ ಆಗಿದೆ. 2023 ಮೇ 30 ರವರೆಗೆ ನಮಗೆ ಖಾಲಿ ಮಾಡಲು ಅವಕಾಶವಿದೆ. ಆ ಮಾಹಿತಿಯನ್ನು ಆನ್ ಲೈನ್ ನಲ್ಲಿ ಪಡೆಯಬಹುದು.ಮೇ ತಿಂಗಳ ಅಂತ್ಯದಲ್ಲಿ ಕಟ್ಟಡವನ್ನು ವೇಕೆಂಟ್ ಮಾಡಬೇಕಿತ್ತು. ಮಾಲೀಕರು ಹಣ ಕೊಟ್ಟಿಲ್ಲ. ಆರಗ ಜ್ಞಾನೇಂದ್ರ ಹಣ ಕೊಟ್ಟರೆ ನಾವು ಬಿಡಲು ಸಿದ್ದರಿದ್ದೇವೆ ಎಂದಿದ್ದಾರೆ. 

ಸಾಗರ ಟೌನ್​ನಲ್ಲಿ ಹಲ್ಲೆ ಯತ್ನ ಕೇಸ್​ | ಸುನೀಲ್ ಹತ್ಯೆಗೆ 6 ತಿಂಗಳ ಹಿಂದೆಯೇ ಸ್ಕೆಚ್​? ಹಿಂದೂ ಸಂಘಟನೆಗಳ ಆರೋಪಗಳು ಏನೇನು?

ಆರಗರಿಗೆ ಸರ್ವೆ ರಿಪೋರ್ಟ್ ಭೀತಿ

ಜ್ಞಾನೇಂದ್ರರಿಗೆ ಇದರಲ್ಲಿ ರಾಜಕೀಯ ಬೇಕಿದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಆರಗ ಜ್ಞಾನೇಂದ್ರರಿಗೆ ಸೋಲಿನ ಭೀತಿ ಎದುರಾಗಿದೆ. ಸರ್ವೆ ರಿಪೋರ್ಟ್ ಕೂಡ ಪ್ರಕಾರ ನನಗೆ ಗೆಲುವಿನ ಅವಕಾಶ ಹೆ್ಚ್ಚಿದ್ದು, ಆರಗ ಜ್ಞಾನೇಂದ್ರಗೆ ಭೀತಿ ಉಂಟಾಗಿದೆ. ಈ ಹಿಂದೆ ನಂದಿತಾ ಪ್ರಕರಣದಿಂದ ಅವರು ಗೆಲವು ಸಾಧಿಸಿದ್ರು. ಈ ಬಾರಿ ಸೋಲುವ ಭೀತಿಯಲ್ಲಿದ್ದಾರೆ. ಹೀಗಾಗಿ ಕುಕ್ಕರ್ ಬ್ಲಾಸ್ಟ್ ವಿಚಾರದಲ್ಲಿ ಸಿಲುಕಿಸುವ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಒಂದು ಚುನಾವಣೆಯಲ್ಲಿ ಗೆಲ್ಲಲು ವರಿಗೆ ಕೋಮುಗಲಭೆ ಭೇಕು. ತೀರ್ಥಹಳ್ಳಿ ಸಾಗರ ಮತ್ತು ಶಿವಮೊಗ್ಗದಲ್ಲಿ ಆಗಿದ್ದು ಇದೇ. ದೇಶಕ್ಕೆ ಇದೊಂದು ಕೆಟ್ಟ ಸಂದೇಶ ಎಂದರು

ಸಂಕ್ರಾಂತಿಯ ಹಬ್ಬದಂದು ತೀರ್ಥಹಳ್ಳಿಯ ಬೆಜ್ಜವಳ್ಳಿ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಏನೆಲ್ಲಾ ವಿಶೇಷವಿದೆ ಗೊತ್ತಾ? ವಿವರ ಇಲ್ಲಿದೆ

ಸ್ಯಾಂಟ್ರೋ ರವಿ ಮತ್ತು ಗೃಹಸಚಿವರು

ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಹಾಗು ಪಿಎಸ್ ಐ ಹಗರಣದಲ್ಲಿ ಆರಗ ಜ್ಞಾನೇಂದ್ರ ಮೊದಲ ಆರೋಪಿ.ಮುಖ್ಯಮಂತ್ರಿಗಳು ಅವರಿಂದ ರಾಜೀನಾಮೆ ಪಡೆದು ಅವರನ್ನು ಆರೋಪಿಯನ್ನಾಗಿ ಮಾಡಬೇಕು. ಸಾಕ್ಷ್ಯಾಧಾರಗಳು ಪೂರಕವಾಗಿ ಲಭ್ಯವಾಗಿರುವಾಗ ಆರಗ ಜ್ಞಾನೇಂದ್ರ ರಾಜಿನಾಮೆ ನೀಡಬೇಕು.  ಟ್ರಾನ್ಸ್ ಫರ್ ವಿಚಾರದಲ್ಲಿ ಸ್ಯಾಂಟ್ರೋ ರವಿ ಹೇಳಿದಂತೆ ಆರಗ ಜ್ಞಾನೇಂದ್ರ ವರ್ಗಾವಣೆ ಮಾಡಿದ್ದಾರೆ.ದುಡ್ಡಿನ ವ್ಯವಹಾರ ದೊಡ್ಡದಾಗಿ ನಡೆದಿದೆ.ಸ್ಯಾಂಟ್ರೋ ರವಿಗೂ ಗೃಹ ಇಲಾಖೆಗೂ ಎನು ಸಂಬಂಧ.ಯಾವ್ಯಾವ ಅಧಿಕಾರಿಗಳನ್ನು ಎಲ್ಲಿಗೆ ಹಾಕಬೇಕು ಎನ್ನುವ ಪಟ್ಟಿ ಸ್ಯಾಂಟ್ರೋ ರವಿ ಬಳಿ ಇದೆ ಎಂದ್ರೆ ನೆಕ್ಸಸ್ ಇಲ್ಲಾ ಅಂತಾ ಹೇಗೆ ಹೇಳಲು ಸಾಧ್ಯ.ಸ್ಯಾಂಟ್ರೋ ರವಿ ಎಲ್ಲಿ ಅಡಗಿದ್ರೂ ಬಂಧಿಸಲಾಗುವುದು ಎಂದು ಹೇಳ್ತಾರೆ. ಸ್ಯಾಂಟ್ರೋ ರವಿಯನ್ನು ಅಡಗಿಸಿಟ್ಟಿರುವುದು ಇವರೇ..ಅಧಿಕಾರದಲ್ಲಿದ್ದಾರೆ ಬದುಕಿದ್ದಾರೆ ಅಷ್ಟೆ.

ಶಿವಮೊಗ್ಗದಲ್ಲಿ ಮರಳು ಮಾಫಿಯದ ಮೇಲೆ ನಿಯಂತ್ರಣಕ್ಕೆ ಪಾತಕ ಲೋಕ ಸ್ಕೆಚ್..ಹಂದಿ ಅಣ್ಣಿ ಕೊಲೆ ನಂತರ ಶಿವಮೊಗ್ಗದ ಕ್ರೈಂ ಲೋಕದಲ್ಲಿ ನಡೆಯುತ್ತಿರೋದು ಏನು? JP ಬರೆಯುತ್ತಾರೆ

ನನ್ನ ಪ್ರಕಾರ ಪಿಎಸ್ಸೈ ಮತ್ತು ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಮೊದಲು ಅರೆಸ್ಟ್ ಆಗಬೇಕಾದವರು ಈರಗಾ ಜ್ಞಾನೇಂದ್ರ.ಇವರು ಎನ್ ಕ್ರೇಜ್ ಕೊಟ್ಟಿದ್ದರಿಂದಲೇ ಸ್ಯಾಂಟ್ರೋ ರವಿ ಓಡಾಡುತ್ತಿರುವುದು. ಏನಾರ ಕೇಳಿದ್ರೆ ಕಾಂಗ್ರೇಸ್ ಸರ್ಕಾರದ ಮೇಲೆ ಗೂಬೆ ಕೂರಿಸ್ತಾರೆ. ನಮ್ಮ ಸರ್ಕಾರವಿದ್ದಾಗ, ಇವರು ವಿರೋಧ ಪಕ್ಷದಲ್ಲಿದ್ದು ಕಡುಬು ತಿಂದಿದ್ರಾ ಎಂದು ಪ್ರಶ್ನಿಸಿದ್ರು. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Malenadu Today

Share This Article