Harige case ನೆತ್ತಿಯಲ್ಲಿಯೇ ಸಿಲುಕಿದ ಮಚ್ಚಿನೇಟು! ಹರಿಗೆ ಕೇಸ್‌ನಲ್ಲಿ ಆರು ಮಂದಿ ಅರೆಸ್ಟ್‌ ! ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram

Shivamogga Mar 20, 2024 Harige case  ಶಿವಮೊಗ್ಗ ನಗರದ ಹರಿಗೆ ಬಸ್‌ ನಿಲ್ದಾಣದ ಬಳಿ ಯವಕನೊಬ್ಬನ ಮೇಲೆ ಮಚ್ಚು ಲಾಂಗ್‌ಗಳಿಂದ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ  ಲಭ್ಯವಾದ ಮಾಹಿತಿ ಪ್ರಕಾರ, ಹಲ್ಲೆಗೊಳಗಾದವರು ಮತ್ತು ಹಲ್ಲೆ ಮಾಡಿದವರು ಪರಿಚತರೇ ಆಗಿದ್ದಾರೆ ಎನ್ನಲಾಗಿದೆ. ವೈಯಕ್ತಿಕ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗುತ್ತಿದ್ದು, ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ಗೆ ಹಲ್ಲೆಗೊಳಗಾದ ಯುವಕನ ಪತ್ನಿ ನೀಡಿದ ಕಂಪ್ಲೆಂಟ್‌ ನೀಡಿದ್ದಾರೆ. ಅದರಡಿಯಲ್ಲಿ ಎಫ್‌ಐಆರ್‌ ಸಹ ದಾಖಲಾಗಿದೆ. 

ಹರಿಗೆ ಸಮೀಪ ಅಂದು ನಡೆದಿದ್ದ ಘಟನೆಯ ವರದಿ ಇಲ್ಲಿದೆ ಓದಿ : ಹರಿಗೆ ಬಳಿ ಯುವಕನ ಮೇಲೆ ಅಟ್ಯಾಕ್!‌ ನೆತ್ತಿಯಲ್ಲಿಯೇ ಸಿಲುಕಿಕೊಂಡ ಮಚ್ಚು! ಬೈಕ್‌ನಲ್ಲಿ ಆಸ್ಪತ್ರೆಗೆ ಶಿಫ್ಟ್‌ ಮಾಡಿದ ಸ್ಥಳೀಯರು!

ಹರಿಗೆಯಲ್ಲಿ ನಡೆದ ಘಟನೆಯಲ್ಲಿ ಪ್ರಶಾಂತ್‌ ಎಂಬ ಶಿವಮೊಗ್ಗದ ವಿದ್ಯಾನಗರ ನಿವಾಸಿ ತೀವ್ರವಾಗಿ ಹಲ್ಲೆಗೊಳಗಾಗಿದ್ದ. ಆತನ ನೆತ್ತಿಗೆ ದುಷ್ಕರ್ಮಿಗಳು ಬೀಸಿದ ಮಚ್ಚು ಸಿಲುಕಿಹಾಕಿಕೊಂಡಿತ್ತು. ಸದ್ಯ ಅವರು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಖಾಸಗಿ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್‌ ಪಡೆಯುತ್ತಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಸಂಬಂಧ ಪೊಲೀಸರು ಆರು ಮಂದಿಯನ್ನು ಅರೆಸ್ಟ್‌ ಮಾಡಿದ್ದಾರೆ ಎನ್ನಲಾಗಿದೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor