election case / ಪತ್ರಿಕೆ ನಡುವೆ ಕರಪತ್ರಗಳನ್ನಿಟ್ಟು ಹಂಚಿದವರ ವಿರುದ್ಧ ಕೇಸ್/ ಪರ್ಮಿಟ್ ಇಲ್ಲದ ಪ್ರಚಾರಕ್ಕೂ ದಾಖಲಾಯ್ತು ಎಫ್​ಐಆರ್​!

election case / election case /Case against those who distributed pamphlets in newspapers and campaigning without a permit!

election case /  ಪತ್ರಿಕೆ ನಡುವೆ ಕರಪತ್ರಗಳನ್ನಿಟ್ಟು ಹಂಚಿದವರ ವಿರುದ್ಧ ಕೇಸ್/ ಪರ್ಮಿಟ್ ಇಲ್ಲದ ಪ್ರಚಾರಕ್ಕೂ ದಾಖಲಾಯ್ತು ಎಫ್​ಐಆರ್​!

KARNATAKA NEWS/ ONLINE / Malenadu today/ May 5, 2023 GOOGLE NEWS

ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ 2023 ಹತ್ತಿರವಾಗುತ್ತಿರುವಂತೆಯೇ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳ ವಿರುದ್ಧದ ಪ್ರಕರಣಗಳು ಸಹ ಹೆಚ್ಚುತ್ತಿವೆ.

ಚುನಾವಣೆಯಲ್ಲಿ ಮಕ್ಕಳನ್ನು ಬಳಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ದ ಜೆಡಿಎಸ್ ಅಭ್ಯರ್ಥಿ ಹಾಗೂ ಶಿವಮೊಗ್ಗ ನಗರ ಕ್ಷೇತ್ರ ದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ವಿರುದ್ಧ ಕೇಸ್ ಆಗಿತ್ತು.  

ಇದಕ್ಕೆ ಪೂರಕವಾಗಿ ಇದೀಗ ಮತ್ತೆರಡು ಕೇಸ್​ಗಳು ದಾಖಲಾಗಿವೆ.  ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿಂತೆ ಜಯನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಕೇಸ್​ವೊಂದು ದಾಖಲಾಗಿದೆ. ಮಾದರಿ ನೀತಿ ಸಂಹಿತೆ ಜಾರಿ ನೋಡಲ್ ಅಧಿಕಾರಿ  ನಾಗರಾಜ್‌ರವರ ನಿರ್ದೇಶನದ ಮೇರೆಗೆ ಆನಂದಪ್ಪ ಎಂಬವರು ಈ ಸಂಬಂಧ ಕಂಪ್ಲೆಂಟ್ ಮಾಡಿದ್ದಾರೆ.  

ಜಯನಗರ ಪೊಲೀಸ್ ಸ್ಟೇಷನ್​ ನಲ್ಲಿ ಕೇಸ್​ 

 ಶಿವಮೊಗ್ಗ ನಗರದ ಮಹಾವೀರ ವೃತ್ತದಿಂದ ಗೋಪಿ ಸರ್ಕಲ್ ವರೆಗೆ  ಕೆ.ಎ. 14 ಸಿ 4846 ನಂಬರಿನ ಗೂಡ್ಸ್‌ ಕ್ಯಾರಿಯರ್ ನಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ -113 ದ ಜನಾತ ದಳ (ಜಾತ್ಯಾತೀತ) ಪಕ್ಷದ ವಿಧಾನಸಭಾ ಅಭ್ಯರ್ಥಿ ಆಯನೂರು ಮಂಜುನಾಥ ರವರ ಹಾಗೂ ಇತರರ ಪೋಟೋ ಮತ್ತು ಪಕ್ಷದ ಚಿಹ್ನೆ ಇರುವ ಫೆಕ್ಸ್ ಕಟೌಟ್ ಗಳನ್ನು ಹಾಕಿಕೊಂಡು ಪ್ರಚಾರ ಮಾಡಲಾಗುತ್ತಿತ್ತು. 

ಈ ಸಂಬಂಧ ಗೂಡ್ಸ್​ ವಾಹನಗಳ ಬಳಸಿಕೊಂಡು ಪ್ರಚಾರ ನಡೆಸಲು,  ಚುನಾವಣಾ ಅಧಿಕಾರಿಗಳಿಂದ  ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ ಎಂದು ದೂರಲಾಗಿದೆ. ಇದು  2023 ರ ವಿಧಾನ ಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಉಲಂಘನೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. 

 

ಸಾಗರದಲ್ಲಿಯು ದಾಖಲಾಯ್ತು ಪ್ರಕರಣ

ಇನ್ನು ಕಳೆದ ಒಂದನೇ ತಾರೀಖು ಸಾಗರ ಟೌನ್​ ಸ್ಟೇಷನ್​ ನಲ್ಲಿ ಕೇಸ್​ ವೊಂದು ದಾಖಲಾಗಿದೆ. ಅದರ ಪ್ರಕಾರ,  ಸಂಘಟನೆಯೊಂದರ ಹೆಸರಲ್ಲಿ ಕರಪತ್ರಗಳನ್ನು ಪತ್ರಿಕೆಗಳ ನಡುವಲ್ಲಿ ಇಟ್ಟು ಹಂಚಲಾಗಿದ್ದು, ಇದರ ವಿರುದ್ಧ ಕ್ರಮಕ್ಕೆ ಮನವಿ ಮಾಡಲಾಗಿದೆ. 

ಬಿ.ಜೆ.ಪಿ ಅಭ್ಯರ್ಥಿಯಾದ ಹರತಾಳು ಹಾಲಪ್ಪ ರವರ ಬಗ್ಗೆ ಅಪಪ್ರಚಾರ ಮಾಡುವಂತಹ ಬರಹವಿದ್ದ ಕರಪತ್ರದಲ್ಲಿ ಅದಕ್ಕೆ ಸಂಬಂಧಿಸಿದ ಯಾವುದೇ ವಿವರಗಳು ಪತ್ತೆಯಾಗಿಲ್ಲ. ಇದನ್ನ ದುರುದ್ದೇಶ ಪೂರ್ವಕವಾಗಿ ಮಾಡಲಾಗಿದೆ ಎಂಧು ಆರೋಪಿಸಿ ದೂರು ನೀಡಲಾಗಿದ್ದು, ಈ ಸಂಬಂಧ ಎಫ್​ಐಆರ್ ದಾಖಲಾಗಿದೆ. 

ಕಾಂಗ್ರೆಸ್ ಪಕ್ಷದ ಸಭೆಗೆ ಏಕೆ ಹೋಗಿದ್ದೆ ಎಂದು ಹಲ್ಲೆ! ದಾಖಲಾಯ್ತು ಕೇಸ್ 



ಶಿಕಾರಿಪುರ/ ಶಿವಮೊಗ್ಗ/ ಜಿಲ್ಲೆ ರಾಜಕೀಯದ ಜಿದ್ದಾಜಿದ್ದಿ ಜೋರಾಗಿದೆ. ಎಲೆಕ್ಷನ್​ ಪ್ರಚಾರದಲ್ಲಿ ವೈಮನಸ್ಯಗಳು ಸಹ ಹೆಚ್ಚಾಗುತ್ತಿದೆ. 

ಇದಕ್ಕೆ ಸಾಕ್ಷಿ ಎಂಬಂತೆ, ಶಿಕಾರಿಪುರದಲ್ಲಿ ಒಂದೇ ಕುಟುಂಬದವರ ನಡುವೆ ಕಾಂಗ್ರೆಸ್​ ಪಕ್ಷದ ಸಭೆಗೆ ಹೋಗಿದ್ದ ವಿಚಾರಕ್ಕೆ ಜಗಳವಾಗಿ ಹಲ್ಲೆ ಯಾಗಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ. 

ದಿನಾಂಕ:01-05-2023 ರಂದು  ಇಲ್ಲಿನ ಶೆಟ್ಟಿಹಳ್ಳಿ  ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ. ಕುಮಾರ್ ಎಂಬವರು, ನವೀನ್ ಎಂಬವರ ಬಳಿಗೆ ಬಂದು ಅಂಗಡಿ ಹಾಗೂ ಮನೆ ಬಿಟ್ಟುಕೊಡುವಂತೆ ಹೇಳಿದ್ದಾರೆ. 

ಈ ವೇಳೆ ನವೀನ್ ಶುಂಠಿ ಜಮೀನು ಬಿಟ್ಟುಕೊಡುವಂತೆ ಕೇಳಿದ್ದಾರೆ. ಆಗ ಕುಮಾರ್​ ನೀನೆಕೆ ಕಾಂಗ್ರೆಸ್ ಪಕ್ಷದ ಸಭೆಗೆ ಹೋಗಿದ್ದೆ ಎಂದು ಬೈದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ಇದೇ ವಿಚಾರದಡಿಯಲ್ಲಿ ಸೆಕ್ಷನ್  IPC 1860 (U/s-504,324,506)  ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.  

ಶಿವಮೊಗ್ಗ ಜಿಲ್ಲೆ ಮಾಣಿ ಡ್ಯಾಂ ಬಳಿ ಕರಿಚಿರತೆ ಪ್ರತ್ಯಕ್ಷ! ನಾಯಿಯನ್ನ ಬೇಟೆಯಾಡಿದ ದೃಶ್ಯ ಸೆರೆ 

ಯಡೂರು ಶಿವಮೊಗ್ಗ/ ಇಲ್ಲಿನ  ಮಾಣಿ ಡ್ಯಾಂ ಬಳಿಯಲ್ಲಿ ಮತ್ತೆ ವನ್ಯಮೃಗವೊಂದು ನಾಯಿಯನ್ನ ಬೇಟೆಯಾಡಿದೆ. ಈ ಹಿಂದೆ ಹೊಸಂಗಡಿಯ ವಾರಾಹಿ ಪವರ್ ಹೌಸ್ ಭದ್ರತಾ ಕೊಠಡಿಯ ಆವರಣದಲ್ಲಿ  ಚಿರತೆಯೊಂದು ನಾಯಿಯನ್ನ ಬೇಟೆಯಾಡಲು ,ಗೇಟಿನ ಬಳಿ ದಾಳಿ ನಡೆಸಿತ್ತು. ಈ ವೇಳೆ ಅಲ್ಲಿಯ ಕಾವಲುಗಾರ, ಚಿರತೆಯನ್ನ ಓಡಿಸಿ ನಾಯಿಯನ್ನ  ರಕ್ಷಿಸಿದ್ದರು. 

ಇದೀಗ ಅಂತುಹುದ್ದೆ ಘಟನೆಯೊಂದು ಮಾಣಿ ಡ್ಯಾಂ ಲೆಫ್ಟ್ bank ಸೆಕ್ಯೂರಿಟಿ ಚೆಕ್ ಪೋಸ್ಟ್ ಬಳಿ  ಸಂಭವಿಸಿದೆ. ಚೆಕ್​ಪೋಸ್ಟ್ ಬಳಿ ಮಲಗಿದ್ದ ನಾಯಿಯನ್ನು ಕರಿಚಿರತೆಯೊಂದು ಹೊಂಚು ಹಾಕಿ ಬೇಟೆಯಾಡಿದೆ. ಸಿಸಿ ಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಘಟನೆಯು ದಿನಾಂಕ 03/05/23ರಂದು ಬೆಳಗಿನ ಜಾವ 02:23 ರ ಸುಮಾರಿಗೆ ನಡೆದಿದೆ. 

ಕಬ್ಬಿಣ  ಕತ್ತರಿಸುವಾಗ ಹಾರಿದ ಕಿಡಿ ಅಂಗಡಿಯನ್ನೆ ಸುಟ್ಟಿತು! 

ಆನವಟ್ಟಿ/ ಸೊರಬ/ ಕಟ್ಟಡ ಸಾಮಗ್ರಿಗಳನ್ನು ಮಾರುವ ಅಂಗಡಿಯೊಂದಕ್ಕೆ ಬೆಂಕಿ ಬಿದ್ದು ಬರೋಬ್ಬರಿ 20 ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾದ ಘಟನೆ ಆನವಟ್ಟಿಯಲ್ಲಿ ಸಂಭವಿಸಿದೆ. 

ಇಲ್ಲಿನ ಶಿವಶಕ್ತಿ ಟೇಡರ್‌ ಅಂಗಡಿ, ಅಗ್ನಿ ಆಕಸ್ಮಿಕದಲ್ಲಿ ಸುಟ್ಟು ಹೋಗಿದೆ. 20 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಟೈರ್, ಪೇಂಟ್, ಆಯಿಲ್, ಕಬ್ಬಿಣ ಮಾರಾಟ ಮಾಡುವ ಅ೦ಗಡಿ ಇದಾಗಿದೆ.

ಕಬ್ಬಿಣವನ್ನು ಕತ್ತರಿಸುವ ವೇಳೆ ಹಾರಿದ ಬೆಂಕಿ ಕಿಡಿ, ಕೆಮಿಕಲ್ ಹಾಗಾ ಆಯಿಲ್​ಗೆ ತಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗುತ್ತಿದೆ. ಇನ್ನೂ ಘಟನೆ ಬೆನ್ನಲ್ಲೆ ಅಗ್ನಿಶಾಮಕ ವಾಹನಕ್ಕೆ ಕರೆ ಮಾಡಲಾಯ್ತಾದರೂ, ಸ್ಥಳೀಯವಾಗಿ ಒಂದು ಬೆಂಕಿ ನಂದಿಸುವ ವಾಹನವಿಲ್ಲ. ಸೊರಬದಿಂದ ವಾಹನ ಬಂದು ಬೆಂಕಿ ನಂದಿಸುವ ಹೊತ್ತಿಗೆ, ಎಲ್ಲವೂ ಸುಟ್ಟುಹೋಗಿದ್ದವು. ಇದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ. ಸ್ಥಳೀಯವಾಗಿಯೇ ಒಂದು ಅಗ್ನಿಶಾಮಕ ದಳದ ವಾಹನದ ವ್ಯವಸ್ಥೆಯನ್ನು ಜನಪ್ರತಿನಿಧಿಗಳು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. 

Malenadutoday.com Social media