ಶಿವಮೊಗ್ಗದಲ್ಲಿ ಸೋತ ‘ಮಾತು’ ಗೆದ್ದ ಕಾರ್ಯಕರ್ತ! ಅಚ್ಚರಿಗೊಳಿಸಿದ ಪ್ರಜಾಕೀಯ ಪಕ್ಷ ! ನೋಟಾ ವೋಟು!

What happened in the results of Shivamogga City Assembly constituency?

ಶಿವಮೊಗ್ಗದಲ್ಲಿ ಸೋತ ‘ಮಾತು’  ಗೆದ್ದ ಕಾರ್ಯಕರ್ತ! ಅಚ್ಚರಿಗೊಳಿಸಿದ ಪ್ರಜಾಕೀಯ ಪಕ್ಷ ! ನೋಟಾ ವೋಟು!

KARNATAKA NEWS/ ONLINE / Malenadu today/ May 11, 2023 GOOGLE NEWS  

ಶಿವಮೊಗ್ಗ. ರಾಜ್ಯ ವಿಧಾನಸಭಾ ಚುನಾವಣೆ 2023 ಯ ಫಲಿತಾಂಶ ಬಹುತೇಕ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದಿದೆ. ಜನರ ಚರ್ಚೆ ಸಮಾಲೋಚನೆ ಹಾಗೂ ಊಹೆಗೂ ಮೀರಿ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ಧಾರೆ. 

ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ  ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ  ನಡೆಯುತ್ತಿದ್ದು ಕ್ಷೇತ್ರವಾರು ಮುನ್ನಡೆ ಹಾಗೂ ಹಿನ್ನೆಡೆ ಲಭ್ಯವಾಗುತ್ತಿದೆ. ಫಲಿತಾಂಶದ ಲೈವ್ (LIVE) ಅಪ್​ಡೇಟ್ಸ್​  ಮಲೆನಾಡು ಟುಡೆ, ನೀಡುತ್ತಿದೆ. 

ಇನ್ನೂ ಫಲಿತಾಂಶಕ್ಕೆ ಸಂಬಂಧಿಸಿದಂತೆ ನೋಡುವುದಾದರೆ, ಶಿವಮೊಗ್ಗ ನಗರದಲ್ಲಿ ಮಾತಿನ ಚುನಾವಣೆ ನಡೆಯಲಿಲ್ಲ. ಆಯನೂರು ಮಂಜುನಾಥ್​ ಹೈಲೈಟ್​ ಆಗಿದ್ದು ಬಿಟ್ಟರೇ, ಅವರ ಇಮೇಜ್​ ಹಾಗೂ ಕೆಬಿ ಪ್ರಸನ್ನಕುಮಾರ್​ರವರ ಕೆಲಸ ಯಾವುದು ಸಹ ಮತ ಹಾಕಿಸುವಲ್ಲಿ ಯಶಸ್ವಿಯಾಗಿಲ್ಲ. ನಿರೀಕ್ಷಿತ ಮತಗಳನ್ನು ಸಹ ಅವರು ಪಡೆಯದಿರುವುದು ಅಚ್ಚರಿ ಮೂಡಿಸಿದೆ. 

ವಿಶೇಷವಾಗಿ ಚೆನ್ನಬಸಪ್ಪ ತೆಗೆದುಕೊಂಡ ಲೀಡ್​ ಇನ್ನಷ್ಟು ಅಚ್ಚರಿ ಹುಟ್ಟಿಸುತ್ತಿದ್ದ, ಟ್ರೆಂಡ್​ ಸೆಟ್ ಮಾಡಿ, ಪಕ್ಷದಲ್ಲಿ ಯಾರೆ ನಿಂತರೂ ದಿಗ್ವಿಜಯ ಸಾಧಿಸುವ ನಿಟ್ಟಿನಲ್ಲಿ ಬಿಜೆಪಿಯ ಕಾರ್ಯಕರ್ತರು ಯಶಸ್ವಿಯಾಗಿದ್ಧಾರೆ. 

ವಿಶೇಷ ಅಂದರೆ,ಶಿವಮೊಗ್ಗ ನಗರದಲ್ಲಿ ಉತ್ತಮ ಪ್ರಜಾಕೀಯ ಪಕ್ಷ ನಾಲ್ಕು ಅಂಕಿಯ ಮತಗಳನ್ನ ಪಡೆದಿದೆ. 2ಸಾವಿಕ್ಕೂ ಹೆಚ್ಚು ಮತ ಪಡೆದ ಇವರು ಶಿವಮೊಗ್ಗದಲ್ಲಿ ಆಮ್ ಆದ್ಮಿ ಪಕ್ಷವನ್ನು ಹಿಂದಿಕ್ಕಿದ್ದಾರೆ. ಇನ್ನೂ ಸಾವಿರಕ್ಕೂ ಅಧಿಕ ನೋಟಾ ಮತಗಳು ಜಾರಿಯಾಗಿದ್ದು ಕೂಡ ಗಮನಾರ್ಹವಾಗಿದೆ. 



ಚೋರಡಿಯಲ್ಲಿ ಅಪಘಾತ/ ಮೆಗ್ಗಾನ್​ ಆಸ್ಪತ್ರೆಗೆ ಬಿವೈ ರಾಘವೇಂದ್ರ, ಬಿ.ವೈ ವಿಜಯೇಂದ್ರ ದೌಡು/ಸಾವು ನೋವಿನ ಬಗ್ಗೆ ಎಸ್​ಪಿ ಮಿಥುನ್ ಕುಮಾರ್  ಕೊಟ್ಟ ನಿಖರ ಮಾಹಿತಿ ಇಲ್ಲಿದೆ 



Malenadutoday.com Social media