ಮರ್ಮಾಂಗಕ್ಕೆ ಒದ್ದು ಕೊಲೆ | ದರ್ಶನ್‌ ಸೇರಿ 10 ಕ್ಕೂ ಹೆಚ್ಚು ಮಂದಿ ವಶಕ್ಕೆ | ಪವಿತ್ರಾ ಗೌಡ ಕೂಡ ಪೊಲೀಸ್‌ ವಶದಲ್ಲಿ ?

Kannada actor Darshan was taken into custody by the police in connection with the murder of Renukaswamy, a resident of Chitradurga

ಮರ್ಮಾಂಗಕ್ಕೆ ಒದ್ದು ಕೊಲೆ | ದರ್ಶನ್‌ ಸೇರಿ 10 ಕ್ಕೂ ಹೆಚ್ಚು ಮಂದಿ ವಶಕ್ಕೆ | ಪವಿತ್ರಾ ಗೌಡ ಕೂಡ ಪೊಲೀಸ್‌ ವಶದಲ್ಲಿ ?
Kannada actor Darshan arrest

SHIVAMOGGA | MALENADUTODAY NEWS | Jun 11, 2024 ಮಲೆನಾಡು ಟುಡೆ 

ರಾಜ್ಯದಲ್ಲಿ ಮತ್ತೊಂದು ಬಿಗ್‌ ಬೆಳವಣಿಗೆ ನಡೆದಿದೆ. ನಟ ದರ್ಶನ್‌ ರನ್ನ ಕಾಮಾಕ್ಷಿ ಪಾಳ್ಯದ ಪೊಲೀಸರು ಮೈಸೂರಿನಿಂದ ಅರೆಸ್ಟ್‌ ಮಾಡಿಕೊಂಡು ಕರೆದುಕೊಂಡು ಬರುತ್ತಿದ್ದಾರೆ ಎಂದು ಹೇಳಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ, ದರ್ಶನ್‌ನರನ್ನ ಬಂಧನಿಸಲಾಗಿಲ್ಲ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚಿತ್ರದುರ್ಗದ ಲಕ್ಷ್ಮೀ ಬಡಾವಣೆಯ ನಿವಾಸಿ ರೇಣುಕಾಸ್ವಾಮಿಯವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ರನ್ನ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ. 

ಇನ್ನೂ ಈ ಬಗ್ಗೆ ಬೆಂಗಳೂರು ಪೊಲೀಸ್‌ ಕಮಿಷನರ್‌ ದಯಾನಂದ್‌ ಮಾತನಾಡಿದ್ದಾರೆ. ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಟ ದರ್ಶನ್‌ರನ್ನ ವಶಕ್ಕೆ ಪಡೆಯಲಾಗಿದೆ. ದಿನಾಂಕ 9 ರಂದು ಅಂದರೆ ಭಾನುವಾರ ಪತ್ತೆಯಾದ ಅಪರಿಚಿತ ಗಂಡಸಿನ ಶವ ಹಾಗೂ ಆತನ ದೇಹದ ಮೇಲಿದ್ದ ಗುರುತುಗಳನ್ನ ಆಧರಿಸಿ ಕಾಮಾಕ್ಷಿ ಪಾಳ್ಯ ಪೊಲೀಸ್‌ ಠಾಣೆಯಲ್ಲಿ ಕೇಸ್‌ ರಿಜಿಸ್ಟರ್‌ ಮಾಡಿಕೊಳ್ಳಲಾಗಿತ್ತು. ಸಿಸಿ ಟಿವಿ ಹಾಗೂ ಇತರೇ ತಾಂತ್ರಿಕ ಸಾಕ್ಷ್ಯಗಳನ್ನ ಆಧರಿಸಿ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಮಾಡಲಾಗಿದೆ. ಆತ ಚಿತ್ರದುರ್ಗ ಮೂಲದ ರೇಣುಕಾಚಾರ್ಯ ಎಂದು ಗೊತ್ತಾಗಿದೆ. ಆನಂತರ ನಡೆಸಿದ ತನಿಖೆ ಅಡಿಯಲ್ಲಿ ಚಿತ್ರರಂಗದ ನಟ ದರ್ಶನ್‌ ಹಾಗೂ ಆತನ ಸಹಚರನ್ನ ಬಂಧಿಸಿ ಎನ್‌ಕ್ವೈರಿ ನಡೆಸ್ತಿದ್ದೇವೆ. ಈ ಪೈಕಿ ದರ್ಶನ್‌ರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. 

ಮೃತ ರೇಣುಕಾಸ್ವಾಮಿ ನಟನ ಪತ್ನಿಗೆ ಅಸಭ್ಯ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದು, ಆ ಕಾರಣಕ್ಕೆ ಈ ಹತ್ಯೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದಿರುವ ದಯಾನಂದ್‌ರವರು ಈ ಸಂಬಂಧ ಇನ್ನಷ್ಟು ತನಿಖೆ ನಂತರ ಮಾಹಿತಿ ನೀಡಲಾಗುವುದು ಎಂದಿದ್ಧಾರೆ. 

ಕ್ವಿಕ್‌ ಅಪ್‌ಡೇಟ್‌

ಇನ್ನೂ ತೀರಾ ಇತ್ತೀಚಿನ ಮಾಹಿತಿ ಪ್ರಕಾರ, ಇಡೀ ಪ್ರಕರಣದಲ್ಲಿ ಓರ್ವ ಉದ್ಯಮಿ ಸೇರಿದಂತೆ 10 ಕ್ಕೂ ಹೆಚ್ಚು ಮಂದಿಯನ್ನ ವಶಕ್ಕೆ ಪಡೆಯಲಾಗಿದೆಯಷ್ಟೆ ಅಲ್ಲದೆ ಪ್ರಕರಣದಲ್ಲಿ ಪವಿತ್ರಾ ಗೌಡರನ್ನ ಸಹ ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ರಾಜ್ಯದ ಹೈ ಪೋಫ್ರೈಲ್‌ ಮಾಧ್ಯಮಗಳು ವರದಿ ಮಾಡಿವೆ. 

Kannada actor Darshan was taken into custody by the police in connection with the murder of Renukaswamy, a resident of Chitradurga. The police commissioner stated that Renukaswamy had been sending inappropriate messages to the actor's wife,