ಬೆಳಗ್ಗೆ ಪೋಸ್ಟರ್‌ ಹಿಡಿದು ಪ್ರತಿಭಟನೆ | ಮಧ್ಯಾಹ್ನ ಹುಬ್ಬಳ್ಳಿಗೆ ತೆರಳಿ ನೇಹಾ ತಂದೆ-ತಾಯಿಗೆ ಸಾಂತ್ವನ | ಕೆಎಸ್ ಈಶ್ವರಪ್ಪ ಹೇಳಿದ್ದೇನು?

After the protest against the death of Neha Hiremath in Hubli, KS Eshwarappa went to Hubli and condoled with Neha's parents.Hubli Neha Hiremath

ಬೆಳಗ್ಗೆ ಪೋಸ್ಟರ್‌ ಹಿಡಿದು ಪ್ರತಿಭಟನೆ  | ಮಧ್ಯಾಹ್ನ ಹುಬ್ಬಳ್ಳಿಗೆ ತೆರಳಿ ನೇಹಾ ತಂದೆ-ತಾಯಿಗೆ ಸಾಂತ್ವನ  |  ಕೆಎಸ್ ಈಶ್ವರಪ್ಪ ಹೇಳಿದ್ದೇನು?
Hubli Neha Hiremath

SHIVAMOGGA | MALENADUTODAY NEWS | Apr 22, 2024  

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ  ಕಣದಲ್ಲಿರುವ ಕೆಎಸ್‌ ಈಶ್ವರಪ್ಪ ಇವತ್ತು ಹುಬ್ಬಳ್ಳಿಯ ನೇಹಾ ಹಿರೇಮಠರವರ ನಿವಾಸಕ್ಕೆ ಭೇಟಿಕೊಟ್ಟಿದ್ದಾರೆ. 

ಇವತ್ತು ಬೆಳಗ್ಗೆ  ಶಿವಮೊಗ್ಗದಲ್ಲಿ ಯುವತಿಯ ಕೊಲೆಯ ಸಂಬಂಧ ಘಟನೆ ಖಂಡಿಸಿ ರಾಷ್ಟ್ರಭಕ್ತರ ಬಳಗದಿಂದ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಕೆಎಸ್‌ ಈಶ್ವರಪ್ಪರವರು ಪಾಲ್ಗೊಂಡು ತಮ್ಮ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೆ ಹುಬ್ಬಳ್ಳಿಗೆ ತೆರಳಿದ ಅವರು  ನೇಹಾ ಹಿರೇಮಠರವರ ನಿವಾಸಕ್ಕೆ ಭೇಟಿ ನೀಡಿದರು. 

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಕೇಸ್‌ | ಶಿವಮೊಗ್ಗದಲ್ಲಿ ಬೀದಿಗಿಳಿದ ಕೆಎಸ್‌ಇ | ಹೇಗಿತ್ತು ಧರಣಿ ? ಏನಂದ್ರು?

ಅಲ್ಲಿ ಅವರು ನೇಹಾರ ತಂದೆ ತಾಯಿಗಳಿಗೆ ಸಾಂತ್ವನ ಹೇಳಿ ಕುಟುಂಬದವರ ನೆರವಿಗೆ ನಿಲ್ಲುವುದಾಗಿ ತಿಳಿಸಿದರು. ಪ್ರಕರಣವನ್ನು  ಸಿಬಿಐ  ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ರು.