ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಕೇಸ್‌ | ಶಿವಮೊಗ್ಗದಲ್ಲಿ ಬೀದಿಗಿಳಿದ ಕೆಎಸ್‌ಇ | ಹೇಗಿತ್ತು ಧರಣಿ ? ಏನಂದ್ರು?

Hubli's Neha Hiremath murder case KSE protest

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಕೇಸ್‌ | ಶಿವಮೊಗ್ಗದಲ್ಲಿ ಬೀದಿಗಿಳಿದ ಕೆಎಸ್‌ಇ | ಹೇಗಿತ್ತು ಧರಣಿ ? ಏನಂದ್ರು?
Hubli Neha Hiremath murder case

SHIVAMOGGA | MALENADUTODAY NEWS |  Apr 22, 2024  

ಹುಬ್ಬಳ್ಳಿಯ ನೇಹಾ ಹಿರೇಮಠರವರ ಕೊಲೆ ಖಂಡಿಸಿ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ Hubli Neha Hiremath murder case  ನೇತೃತ್ವದಲ್ಲಿ ರಾಷ್ಟ್ರ ಭಕ್ತರ ಬಳಗ ಪ್ರತಿಭಟನೆ ನಡೆಸಿದೆ. ಈ ವೇಳೆ ಮಾತನಾಡಿದ ಕೆಎಸ್‌ ಈಶ್ವರಪ್ಪ ಕರ್ನಾಟಕದಲ್ಲಿ ಹಿಂದೂ ಸಮಾಜಕ್ಕೆ ರಕ್ಷಣೆ ಇಲ್ಲ ಹಾಡಹಗಲೇ ಕಾಲೇಜಿನ ವಿದ್ಯಾರ್ಥಿನಿ ಕೊಲೆಯಾಗಿರುವ ಪ್ರಕರಣ ಸರ್ಕಾರದ ಬೇಜವಾಬ್ದಾರಿಯನ್ನು ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. 

ಕಾಂಗ್ರೆಸ್‌ ಸರ್ಕಾರದ  ಬೆಜವಾಬ್ದಾರಿ ಹೇಳಿಕೆಯಿಂದ ರಾಜ್ಯದ ಹಿಂದೂಗಳಿಗೆ ನೋವಾಗಿದೆ ಎಂದ ಅವರು  ಕಾಂಗ್ರೆಸ್ ನವರು ಹಿಂದೂ ಸಮಾಜಕ್ಕೆ ಅಪಮಾನ ಮಾಡುತ್ತಿದ್ದಾರೆ. ರಣದೀಪ್‌ ಸಿಂಗ್ ಸುರ್ಜೇವಾಲ ಕೊಲೆ ಆಗಲು ಬಿಡಲ್ಲ ಅನ್ನ ಬೇಕಿತ್ತು.‌ ಸುರ್ಜೇವಾಲಾರವರೇ ನಿಮ್ಮ ಮಗಳಿಗೆ ಹೀಗೆ ಆಗಿದ್ದರೇ ಏನ್ ಮಾಡುತ್ತಿದ್ದೀರಿ ಎಂದು ಈಶ್ವರಪ್ಪ ಪ್ರಶ್ನಿಸಿದ್ರು. 

ಈ ಘಟನೆ ಖಂಡಸಿ ನಾವು ಇವತ್ತು ಶಿವಮೊಗ್ಗ ದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಹಿಂದೂಗಳ ರಕ್ಷಣೆ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು.  ಈ ಪ್ರಕರಣವನ್ನು ಚುನಾವಣೆಗಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಗೃಹ ಸಚಿವರು ತನಿಖೆ ಆಗದೇ ಹೇಳಿಕೆ ನೀಡುತ್ತಿದ್ದಾರೆ .ಸಿಎಂ ,ಗೃಹ ಮಂತ್ರಿ ಬೇಜವಾಬ್ದಾರಿ ಹೇಳಿಕೆ ಕೋಡಬಾರದು . ಹಿಂದೂ ಸಮಾಜ ಜಾಗೃತಗೊಳ್ಳಬೇಕು.  ಹಿಂದೂ ಸಮಾಜ ಕಾನೂನು ಕೈ ತಗೆದುಕೊಂಡರೆ ಏನ್ ಆಗಬಹುದು ಯೋಚಿಸಿ ಎಂದಿದ್ದಾರೆ. 

ಇನ್ನೂ ಹುಬ್ಬಳ್ಳಿಯ ವಿದ್ಯಾರ್ಥಿನಿ ಸಹೋದರಿ ನೇಹಾ ಹಿರೇಮಠ ಕೊಲೆ ಖಂಡಿಸಿ ನಡೆದ ಪ್ರತಿಭಟನೆ ಮೆರೆವಣಿಗೆ ದೈವಜ್ಞ ಕಲ್ಯಾಣ ಮಂದಿರ ಸರ್ಕಲ್ (ಜೈಲ್ ಸರ್ಕಲ್) ನಿಂದ ಆರಂಭಗೊಂಡು ದುರ್ಗಿಗುಡಿ ಮುಖ್ಯ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಈ ಮಧ್ಯೆ ಮಹಾವೀರ್‌ ಸರ್ಕಲ್‌ನಲ್ಲಿ ರಾಷ್ಟ್ರಭಕ್ತರ ಬಳಗ ಕೆಲಕಾಲ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿತು