ಶಿವಮೊಗ್ಗ ಕ್ಷೇತ್ರಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಶಿವರಾಜ್‌ ಕುಮಾರ್‌ ದಂಪತಿ ! ಕ್ಯಾಂಪೇನ್‌ ಆರಂಭಿಸಿ ಹೇಳಿದ್ದೇನು?

Shivamogga Mar 20, 2024  ಬಿಜೆಪಿಯ ಅಬ್ಬರದ ಪ್ರಚಾರ ಆರಂಭವಾದ ಬೆನ್ನಲ್ಲೆ ಕಾಂಗ್ರೆಸ್‌ನ ತಾರಾ ಪ್ರಚಾರ ಆರಂಭವಾಗಿದೆ. ಇವತ್ತು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಕಾರೇಹಳ್ಳಿ ಮೂಲಕ ಶಿವಮೊಗ್ಗಕ್ಕೆ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್  ಎಂಟ್ರಿಯಾಗಿದ್ದಾರೆ. ಕಾರಹಳ್ಳಿಯಿಂದ ಭದ್ರಾವತಿಗೆ ವರೆಗೂ ಬೃಹತ್ ಬೈಕ್ ರ್ಯಾಲಿ ನಡೆದಿದ್ದು,  ನಟ ಶಿವರಾಜ್ ಕುಮಾರ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. 

ಅವರಿಗೆ ಅದ್ಧೂರಿ ಸ್ವಾಗತವನ್ನು ಕೋರಿ ಬರಮಾಡಿಕೊಂಡ ಶಿವಮೊಗ್ಗ ಕಾಂಗ್ರೆಸ್‌ ಬೈಕ್‌ ರ್ಯಾಲಿ ನಡೆಸಿದೆ.  ಇನ್ನೂ ಈ ವೇಳೆ ಮಾತನಾಡಿದ ನಟ ಶಿವರಾಜ್‌ ಕುಮಾರ್‌,  ಶಿವಮೊಗ್ಗದಲ್ಲಿ ಕಾರ್ಯಕರ್ತರ ಸಭೆ ಇದೆ, ಆ ಸಭೆಯಲ್ಲಿ ಪಾಲ್ಗೊಂಡ ನಂತರ ಬೈಂದೂರಿಗೆ ಹೋಗುತ್ತಿದ್ದೇವೆ. ಇದೇ ಮಾರ್ಚ್‌ 24 ರಿಂದ ಪ್ರತಿದಿನ ಪ್ರಚಾರ ನಡೆಸುತ್ತಿದ್ದೇವೆ . ನನ್ನ ಶೂಟಿಂಗ್‌ ಷೆಡ್ಯೂಲ್‌ ನೋಡಿಕೊಂಡು ಶಿವಮೊಗ್ಗಕ್ಕೆ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದಾರೆ. 

 

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಕಾರ್ಯಕರ್ತರ ಉತ್ಸಾಹ ನೋಡಿ ತುಂಬಾ ಸಂತೋಷ ಆಗುತ್ತಿದೆ, ಕಾರೇಹಳ್ಳಿಯಿಂದ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ, ಬೇಳೂರು ಗೋಪಾಲಕೃಷ್ಣ, ಬಿ.ಕೆ ಸಂಗಮೇಶ್ ನಮ್ಮ ಜೊತೆಗಿದ್ದಾರೆ. ಗೆಲ್ಲಬೇಕೆಂದು ಚುನಾವಣೆಗೆ ನಿಂತಿದ್ದೇನೆ. ವಾತಾವರಣ ತುಂಬಾ ಚೆನ್ನಾಗಿದೆ. ವಾತಾವರಣ ನೋಡಿದರೆ ನನಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಎನಿಸಿದೆ. ಈ ಕ್ಷೇತ್ರದಲ್ಲಿ ಜನರು ನನ್ನನ್ನ ಉಳಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. 

ನಾವು ಫೈಟ್- ಗಿಟ್ ನೋಡುವುದಿಲ್ಲ.  ಪಕ್ಷ ಏನು ಹೇಳುತ್ತೆ ಅದೇ ರೀತಿಯಲ್ಲಿ ಪ್ರಚಾರ ಆರಂಭಿಸಿದ್ದೇವೆ .ನಮ್ಮ ತಂದೆ ನಡೆದ ದಾರಿಯಲ್ಲೇ ನಾವು ನಡೆಯುತ್ತೇವೆ. ತಂದೆಯವರ ಸೇವೆ ನಮಗೆ ಅನುಕೂಲ ಆಗಲಿದೆ. ಪಂಚಾಯತ್ ಮಟ್ಟದಲ್ಲೂ ಪ್ರಚಾರ ಮಾಡಲು ಪ್ಲಾನ್ ಮಾಡಿದ್ದೇವೆ. ಯಾವ ಸ್ಟಾರ್ ನಟರಿಗೆ ಆಹ್ವಾನ ನೀಡಿಲ್ಲ. ಬಿಸಿಲಿನಲ್ಲಿ ಅವರಿಗೂ ತೊಂದರೆ ಆಗುತ್ತೆ ಎಂದು ಆಹ್ವಾನ ನೀಡಿಲ್ಲ ಎಂದ ಗೀತಾ ಶಿವರಾಜ್‌ ಕುಮಾರ್‌  ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಹೋಗಿ ಆಶೀರ್ವಾದ ಪಡೆಯುತ್ತೇನೆ ಎಂದು ಮಾಹಿತಿ ನೀಡಿದ್ರು. 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು