ಬಡ್ಡಿ ಬಂಗಾರಮ್ಮರ ಲೇಟೆಸ್ಟ್‌ ಸಂಬಂಧಿಕರ ಕಾಟಕ್ಕೆ ಪೊಲೀಸರ ಬ್ರೇಕ್‌ | ಏನಾಗ್ತಿದೆ ಗೊತ್ತಾ?

Shivamogga police are cracking down on illegal money lending operations. These lenders, mostly women, are charging exorbitant interest rates,

ಬಡ್ಡಿ ಬಂಗಾರಮ್ಮರ ಲೇಟೆಸ್ಟ್‌ ಸಂಬಂಧಿಕರ ಕಾಟಕ್ಕೆ ಪೊಲೀಸರ ಬ್ರೇಕ್‌ | ಏನಾಗ್ತಿದೆ ಗೊತ್ತಾ?
Shivamogga police , illegal money lending

SHIVAMOGGA | MALENADUTODAY NEWS | May 26, 2024  ಮಲೆನಾಡು ಟುಡೆ 

ಶಿವಮೊಗ್ಗ ಪೊಲೀಸ್‌ ಇಲಾಖೆ ಮಾಡುತ್ತಿರುವ ಒಂದೊಳ್ಳೆ ಕೆಲಸ ಅದರೆ ಮೀಟರ್‌ ಬಡ್ಡಿ ದಂಧೆಕೋರರನ್ನು ಅಂದರ್‌ ಮಾಡುತ್ತಿರುವುದು. ವಿಶೇಷ ಅಂದರೆ, ಮೀಟರ್‌ ಬಡ್ಡಿಗಿಂತಲೂ ಶಿವಮೊಗ್ಗದಲ್ಲೀಗ 10 ದಿನದ ಬಡ್ಡಿ, 2 ದಿನದ ಬಡ್ಡಿ, ರೌಂಡ್‌ ಇಂಟರಸ್ಟ್‌ ಎಂಬಂತವು ಹೆಚ್ಚು ಚಾಲನೆಯಲ್ಲಿದೆ ಎಲ್ಲದಕ್ಕಿಂತ ಹೆಚ್ಚಾಗಿ ಈ ಬಡ್ಡಿ ದಂಧೆಯನ್ನು  ಹೆಣ್ಮೆಕ್ಕಳೇ ಸ್ಟಾಂಗ್‌ ಆಗಿ ನಡೆಸ್ತಿರುವುದು ಅಚ್ಚರಿ ಆತಂಕ ಎರಡನ್ನು ಮೂಡಿಸುತ್ತಿದೆ.

ಶಿವಮೊಗ್ಗದಲ್ಲಿ ಬಡ್ಡಿ ಬಂಗಾರಮ್ಮನ ರಿಲೆಟಿವ್‌ಗಳೇ ಜಾಸ್ತಿ ಇದ್ದಾರೆ ಎಂಬುದಕ್ಕೆ ಎರಡು ಲೇಟೆಸ್ಟ್‌ ಪ್ರಕರಣಗಳು ಸಾಕ್ಷಿ ನೀಡಿವೆ. ಮೊದಲನೆ ಪ್ರಕರಣದಲ್ಲಿ ಕೋಟೆ ಪೊಲೀಸ್‌ ಠಾಣೆಯ ಪೊಲೀಸರು Karnataka Prevention of Charging Exorbitant Interest Act 2004, SC & ST (PA Act) ಅಡಿಯಲ್ಲಿ ಇಬ್ಬರು ಮಹಿಳೆಯರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಅಲ್ಲದೆ ಅವರ ಮನೆಗಳ ಮೇಲೆ ದಾಳಿ ನಡೆಸಿ 54 ಚೆಕ್‌, 25 ಬಾಂಡ್‌ ಪೇಪರ್‌ ಹಾಗೂ ಒಂದು ಅಗ್ರಿಮೆಂಟ್‌ಗಳನ್ನ ವಶಕ್ಕೆ ಪಡೆದಿದ್ದಾರೆ. 

ಈ ಪ್ರಕರಣದಲ್ಲಿ ಆರೋಪಿತ ಮಹಿಳೆಯರು 10% ಬಡ್ಡಿಯಂತೆ  15% ಬಡ್ಡಿಯಂತೆ ಸಾಲ ನೀಡಿದ್ದಲ್ಲದೆ, ಸಾಲ ಪಡೆದವರನ್ನ  ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡುತ್ತಿದ್ದರಂತೆ.

ಇನ್ನೊಂದು ಪ್ರಕರಣ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು, ಅಲ್ಲಿಯು ಓರ್ವ ಮಹಿಳೆ ತನ್ನ ಪತಿಯ ಜೊತೆಗೆ ಸೇರಿಕೊಂಡು 10 ಪರ್ಸೆಂಟ್‌ಗೆ ಬಡ್ಡಿ ನೀಡುತ್ತಿದ್ದಾಳೆ ಎಂದು ಸಂತ್ರಸ್ತೆಯರಿಬ್ಬರು ಆರೋಪಿಸಿದ್ದಾರೆ. 

ದೂರುದಾರರ ಪ್ರಕಾರ, ಸಾಲ ಕೊಡುವಾಕೆ ಮೊದಲು ತಿಂಗಳಿಗೆ 10 ಪರ್ಸೆಂಟ್‌ ಬಡ್ಡಿಗೆ  ಸಾಲ ನೀಡುತ್ತಾಳೆ. ಆ ಬಳಿಕ ಬಡ್ಡಿಯನ್ನು 10 ದಿನಕ್ಕೆ 10 ಪರ್ಸೆಂಟ್‌ ಆಗಿ ಬದಲಾಯಿಸುತ್ತಾಳೆ. ಬಳಿಕ ಎರಡು ದಿನಕ್ಕೆ  10 ಪರ್ಸೆಂಟ್‌ ಬಡ್ಡಿ ಎಂದು ಸಾಲಗಾರರನ್ನ ದಬಾಯಿಸಿ ಎಲ್ಲೆಂದರಲ್ಲಿ ನಿಂದಿಸುತ್ತಾಳಂತೆ. ಇಷ್ಟೆ ಅಲ್ಲದೆ, ಈಕೆಯ ಬಳಿ ಸಾಲ ತೆಗೆದುಕೊಂಡ ಸಂತ್ರಸ್ತೆಯರು ಕಂಡ ಕಂಡಲ್ಲಿ ಈಕೆಯ ಸಾಲ ತೀರಿಸಲೆಂದೆ ಸಾಲ ಮಾಡಿದ್ದಾರೆ ಎನ್ನಲಾಗಿದೆ. 

ಸದ್ಯ ಶಿವಮೊಗ್ಗ ಪೊಲೀಸರು ಬಡ್ಡಿ ದಂಧೆ ವಿರುದ್ಧ ನಿಜವಾಗಿಯು ಕ್ರಮ ಕೈಗೊಳ್ಳುತ್ತಿದ್ದು, ಈ ಸಂಬಂಧ ಸಂತ್ರಸ್ತೆಯರು ಮುಂದೆ ಬಂದು ದೈರ್ಯವಾಗಿ ದೂರು ಕೊಡಲಿ ಎಂದು ಮನವಿ ಮಾಡಿದ್ದಾರೆ. ಸಾಲ ಮಾಡಿದ ತಪ್ಪಿಗೆ ದುಡಿದ ದುಡ್ಡನ್ನ ಯಾರದ್ದೋ ಬಾಯಿಗೆ ಹಾಕಿಯು ನೆಮ್ಮದಿ ಇಲ್ಲದೆ ಬದುಕುವುದಕ್ಕಿಂತ ಸಂತ್ರಸ್ತೆಯರು ಬಡ್ಡಿ ಬಂಗಾರಮ್ಮನ ಸಂಬಂಧಿಗಳ ವಿರುದ್ಧ ಪೊಲೀಸ್‌ ಕೇಸ್‌ ಕೊಡುವುದು ಉತ್ತಮ, ನಿಮ್ಮ ಸುತ್ತಮುತ್ತಲು ಇಂತಹವರಿದ್ದರೇ ನೇರವಾಗಿ ಪೊಲೀಸರಿಗೊಂದು ಕರೆ ಮಾಡಿ ದೂರು ಕೊಡಿ. 

The Shivamogga police are cracking down on illegal money lending operations. These lenders, mostly women, are charging exorbitant interest rates, with some charging 10% interest every 2 days. Two recent cases highlight the severity of the problem. In one case, two women were charged under the Karnataka Prevention of Charging Exorbitant Interest Act 2004, SC & ST (PA Act) for lending money at 10-15% interest and publicly abusing borrowers. In another case, a woman and her husband are accused of charging 10% interest per month, then changing it to 10% every 10 days, and finally 10% every 2 days. The police are urging victims to come forward and file complaints.