ಬೆಚ್ಚಿದ ಆನಂದಪುರ | ಹೆದ್ದಾರಿಯಲ್ಲಿ ಯುವಕ ಮಚ್ಚು ಬೀಸಿದ್ದೇಕೆ ? | ನಡೆದಿದ್ದೇನು?

A young man caused a disturbance in Anandapura, Shivamogga district, by wielding a long knife on the highway. The incident, captured on mobile cameras, occurred midday near the Anandapura highway.

ಬೆಚ್ಚಿದ ಆನಂದಪುರ |  ಹೆದ್ದಾರಿಯಲ್ಲಿ ಯುವಕ ಮಚ್ಚು ಬೀಸಿದ್ದೇಕೆ ? | ನಡೆದಿದ್ದೇನು?
Anandapura, Shivamogga district,

SHIVAMOGGA | MALENADUTODAY NEWS | May 26, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದಲ್ಲಿ ಹೆದ್ದಾರಿಯಲ್ಲೆ ಯುವಕನೊಬ್ಬ ಲಾಂಗ್‌ ಹಿಡಿದು ಹೆದರಿಸಿದ ಘಟನೆಯೊಂದರ ಬಗ್ಗೆ ವರದಿಯಾಗಿದೆ. ಅಲ್ಲದೆ ಈ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಆನಂದಪುರದ ಹೆದ್ದಾರಿ ಸಮೀಪ ಇವತ್ತು ಮಧ್ಯಾಹ್ನ ಯುವಕನೊಬ್ಬ ಲಾಂಗ್‌ ಹಿಡಿದು ರೋಡಲ್ಲಿ ಬೀಸಿದ್ದಾನೆ. ಸ್ಥಳೀಯರು ಹೇಳುವ ಪ್ರಕಾರ, ಆತ ವೆಹಿಕಲ್‌ಗಳ ಮೇಲೆ ಆತ ಲಾಂಗ್‌ ಬೀಸಿದ್ದಾನೆ ಎನ್ನಲಾಗಿದೆ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಈ ಹೈಡ್ರಾಮಾ ನಡೆದಿದ್ದು, ಆನಂದಪುರದಲ್ಲಿ ಜನರು ಆತಂಕಗೊಂಡಿದ್ದರು. ಇಷ್ಟಕ್ಕೂ ಏನು ನಡೆಯಿತು ಎಂಬುದನ್ನ ಗಮನಿಸುವುದಾದರೆ, ಸ್ಥಳೀಯರು ಹೇಳುವ ಪ್ರಕಾರ, ಆನಂದಪುರಕ್ಕೆ ಮೂವರು ಯುವಕರು ಮದುವೆಗೆ ಅಂತಾ ಬಂದಿದ್ದರು.

 ಅವರು ಸ್ಥಳೀಯ ಅಂಗಡಿಯೊಂದರ ಬಳಿಯಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಈ ಗಲಾಟೆ ಯಾವ ಕಾರಣಕ್ಕೆ ನಡೆದಿದೆ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ. ಆದರೆ ಮೂವರು ಯುವಕರು ನಾರ್ಮಲ್‌ ಆಗಿರಲಿಲ್ಲ ಎಂದು ‍ಸ್ಥಳೀಯರು ಆರೋಪಿಸಿದ್ದಾರೆ. ಈ ಗಲಾಟೆ ಬೆನ್ನಲ್ಲೆ ಯುವಕರ ಕಡೆಯ ಇನ್ನೊಬ್ಬ ಯುವಕ ಆನಂದಪುರಕ್ಕೆ ಬಂದಿದ್ದಾನೆ. ಅಲ್ಲದೆ ಆನಂದಪುರ ಪೇಟೆ ಸಮೀಪ ಮಾರಾಟಕ್ಕೆ ಇಡಲಾಗಿದ್ದ ಲಾಂಗ್‌ನ್ನ ಹಿಡಿದು ಅಲ್ಲಿದ್ದವರ ಜೊತೆಗೆ ಬೀಸಲು ಆರಂಭಿಸಿದ್ದಾರೆ. 

ಸ್ಥಳೀಯರು ಇದರಿಂದ ಇನ್ನಷ್ಟು ಕೆರಳಿದ್ದು, ಯುವಕನನ್ನ ಬೆನ್ನಟ್ಟಿದ್ದಾರೆ. ಆತನನ್ನ ಸಮಾಧಾನದಿಂದ

ಮನವೊಲಿಸಿದ ಸ್ಥಳೀಯರು ಲಾಂಗ್‌ ಕಸಿದುಕೊಂಡು ಮನಸ್ಸೋ ಇಚ್ಚೆ ಥಳಿಸಿದ್ದಾರೆ. ಆ ಬಳಿಕ ಆನಂದಪುರ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ. ಮೊದಲಿಗೆ ಇದೊಂದು ಚಿಕ್ಕ ಘಟನೆ ಎಂದು ಭಾವಿಸಲಾಗುತ್ತಿದ್ದಾದರೂ, ವಿವಿಧೆಡೆಗಳಲ್ಲಿ ನಡೆದ ಗ್ಯಾಂಗ್‌ ವಾರ್‌ ಪ್ರಕರಣದ ವಿಡಿಯೋ ಹರಿದಾಡುತ್ತಿರುವ ನಡುವೆ ಶಿವಮೊಗ್ಗದ  ದೃಶ್ಯ ಹೊರಬಿದ್ದಿರುವುದು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. 

ಸದ್ಯ ಈ ಬಗ್ಗೆ ಪೊಲೀಸ್‌ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮೂಲಗಳ ಪ್ರಕಾರ, ಪೊಲೀಸರು ಸ್ಥಳೀಯರು ವಶಕ್ಕೆ ಒಪ್ಪಿಸಿರುವ ಯುವಕನನ್ನ ಮಾದಕವಸ್ತು ಸೇವನೆಯ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಅಲ್ಲದೆ ಆತನ ಜೊತೆಗಿದ್ದವರನ್ನು ವಶಕ್ಕೆ ಪಡೆಯುವ ಪ್ರಯತ್ನ ನಡೆಸ್ತಿದ್ದಾರೆ ಎನ್ನಲಾಗಿದೆ.  

A young man caused a disturbance in Anandapura, Shivamogga district, by wielding a long knife on the highway. The incident, captured on mobile cameras, occurred midday near the Anandapura highway.