Public Nuisance/ ಅನುಮಾಸ್ಪದ ವ್ಯಕ್ತಿಗಳ ವಿರುದ್ಧ ಶಿವಮೊಗ್ಗ ಜಿಲ್ಲಾ ಪೊಲೀಸ್ 50 ಕ್ಕೂ ಹೆಚ್ಚು ಕೇಸ್

Malenadu Today

SHIVAMOGGA |  Dec 9, 2023ಶಿವಮೊಗ್ಗ ಪೊಲೀಸರು (superintendent of police shimoga )ರಾತ್ರಿ ಕಾರ್ಯಾಚರಣೆ ಮುಂದುವರಿದಿದೆ. ಇತ್ತೀಚೆಗೆ ಅಷ್ಟೆ 200 ಕ್ಕೂ ಹೆಚ್ಚು ಪ್ರಕರಣವನ್ನು ದಾಖಲಿಸಿದ್ದ ಪೊಲೀಸರು ನಿನ್ನೆ  ದಿನಾಂಕ: 09-12-2023 ರಂದು ಸಂಜೆ ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯಲ್ಲಿ ಹಾಗೂ ಸಾಗರ ಉಪ ವಿಭಾಗ ವ್ಯಾಪ್ತಿಯಲ್ಲಿ ಮತ್ತು ಶಿಕಾರಿಪುರ ಉಪವಿಭಾಗ ವ್ಯಾಪ್ತಿಯಲ್ಲಿ ಐವತ್ತಕ್ಕೂ ಹೆಚ್ಚು ಕೇಸ್​ಗಳನ್ನು ದಾಖಲಿಸಿದ್ದಾರೆ. 

ಶಿವಮೊಗ್ಗ ಜಿಲ್ಲಾ ಪೊಲೀಸ್ 

ಹೂವಿನ ಮಾರುಕಟ್ಟೆ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾ, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ, ಹೊಳೆಹೊನ್ನೂರು ಭಗೀರಥ ವೃತ್ತ ಹಾಗೂ  ಸಾಗರ ಉಪ ವಿಭಾಗ ವ್ಯಾಪ್ತಿಯ ತಾಳಗುಪ್ಪ, ಕಾರ್ಗಲ್ ಟೌನ್ ಬಜಾರ್ ರೋಡ್, ಆನಂದಪುರದ ಗೌತಮ್ ಪುರ, ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ  ಶಿಕಾರಿಪುರ ಟೌನ್ ಸಂತೆ ಮೈದಾನ, ಹಿತ್ಲ ಗ್ರಾಮ, ಆನವಟ್ಟಿ ವೈಎಂಟಿ ವೃತ್ತದ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ ಏರಿಯಾ ಡಾಮಿನೇಷನ್ ( Area Domination ) ಗಸ್ತು ನಡೆಸಿದ್ದಾರೆ. 

READ : 5 COTPA , 9 IMV CASE | ಒಂದೇ ದಿನ ಒಂದೇ ಸ್ಟೇಷನ್​ ವ್ಯಾಪ್ತಿಯಲ್ಲಿ 30 ಕೇಸ್​ ದಾಖಲು! ಏನಿದು?

Public Nuisance

ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು  / ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡವು  Area Domination ವಿಶೇಷ ಗಸ್ತು ಮಾಡಿ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 30 ಲಘು ಪ್ರಕರಣಗಳನ್ನು ಮತ್ತು IMV ಕಾಯ್ದೆ ಅಡಿಯಲ್ಲಿ 22 ಪ್ರಕರಣಗಳನ್ನು ದಾಖಲಿಸಿದ್ದಾರೆ. 


 

Share This Article