KARNATAKA NEWS/ ONLINE / Malenadu today/ Aug 3, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಗಿಳಾಲಗುಂಡಿ ಸಮೀಪ ಖಾಸಗಿ ಬಸ್ಸೊಂದು ಕೆಎಸ್ಆರ್ಟಿಸಿ ಬಸ್ಗೆ ಸೈಡ್ನಿಂದ ಡಿಕ್ಕಿಹೊಡೆದ ಘಟನೆ ಸಂಭವಿಸಿದೆ.
ಸಾಗರ-ಶಿವಮೂಗ್ಗ ರೂಟ್ನಲ್ಲಿ KSRTC ಹಾಗೂ ಖಾಸಗಿ ಬಸ್ ಸಂಚರಿಸುತ್ತಿತ್ತು. ಈ ವೇಳೆ ಸೀಟ್ ಹಾಕುವ ವಿಚಾರಕ್ಕೆ ಖಾಸಗಿ ಬಸ್, ಕೆಎಸ್ಆರ್ಟಿಸಿ ಬಸ್ನ್ನ ಓವರ್ ಟೇಕ್ ಮಾಡಲು ಮುಂದಾಗಿದ್ದು, ಈ ವೇಳೆ ಬಸ್ನ ಹಿಂಬದಿ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿಯಾಗಿದೆ.
ಒಂದೇ ರೂಟ್ನಲ್ಲಿ, ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ, ಹಿಂದೆ ಮುಂದೆ ಬರುವ ಬಸ್ಗಳ ನಡುವೆ ಪ್ಯಾಸೆಂಜರ್ಗಳನ್ನು ಹತ್ತಿಸಿಕೊಳ್ಳುವುದಕ್ಕೆ ಬಸ್ಗಳ ನಡುವೆ ಸ್ಪರ್ಧೆ ಏರ್ಪಟ್ಟಿರುತ್ತದೆ. ಇವತ್ತು ಇದೇ ರೀತಿಯಲ್ಲಿ ಪ್ಯಾಸೆಂಜರ್ಗಳನ್ನು ತಮ್ಮ ಬಸ್ಗೆ ಹತ್ತಿಸಿಕೊಳ್ಳಬೇಕು ಎನ್ನುವ ಅವಸರದಲ್ಲಿ ಈ ಆಕ್ಸಿಡೆಂಟ್ ಸಂಭವಿಸಿದೆ. ಇನ್ನೂ ಘಟನೆಯಿಂದಾಗಿ ಎರಡು ಬಸ್ನಲ್ಲಿದ್ದ ಪ್ರಯಾಣಿಕರು ರಸ್ತೆಯಲ್ಲಿಯೇ ನಿಲ್ಲಬೇಕಾದ ಪ್ರಸಂಗ ಎದುರಾಗಿತ್ತು.
ಸಾಗರದ ಗಿಳಾಲಗುಂಡಿ ಸಮೀಪ ಕೆಎಸ್ ಆರ್ ಟಿಸಿ ಬಸ್ ಗೆ ಖಾಸಗಿ ಬಸ್ ಡಿಕ್ಕಿ #shivamogga pic.twitter.com/Pf0aHtsyl1
— malenadutoday.com (@CMalenadutoday) August 3, 2023
ಇನ್ನಷ್ಟು ಸುದ್ದಿಗಳು
ಬಾಯಿ ತಪ್ಪಿ ಆಡಿದ ಮಾತು! ಖರ್ಗೆ, ಖಂಡ್ರೆ ಬಗ್ಗೆ ಅಪಾರ ಗೌರವವಿದೆ ಎಂದರು ಮಾಜಿ ಗೃಹಸಚಿವ!
ಪ್ರತಿಭಟನೆ ಸಂದರ್ಭದಲ್ಲಿ ಆರಗ ಜ್ಞಾನೇಂದ್ರರವರು ಆಡಿದ ಮಾತು ವಿವಾದಕ್ಕೆ ಕಾರಣವಾಯ್ತಾ?
ಮಹಿಳೆಯ ಕೈ ಹಿಡಿದು ಎಳೆದಾಡಿದ್ದಕ್ಕೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ?