ಪೆಟ್ರೋಲ್​ ಬಂಕ್​ನಲ್ಲಿ ಮಲಗಿದ್ದವನ ಮೇಲೆ ಹರಿದ ಟಿಪ್ಪರ್! ಸಾಗರದ ಕಾರ್ಮಿಕ ಸಾವು!

A labourer from Sagar taluk was killed when a tipper ran over him at a petrol pump in Someshwara near Hebri.

ಪೆಟ್ರೋಲ್​ ಬಂಕ್​ನಲ್ಲಿ ಮಲಗಿದ್ದವನ ಮೇಲೆ ಹರಿದ ಟಿಪ್ಪರ್! ಸಾಗರದ ಕಾರ್ಮಿಕ ಸಾವು!

SHIVAMOGGA NEWS / ONLINE / Malenadu today/ Nov 24, 2023 NEWS KANNADA

Shivamogga   |  Malnenadutoday.com    ಮಲಗಿದ್ದ ವ್ಯಕ್ತಿಯ ಮೇಲೆ ಟಿಪ್ಪರ್ ಹರಿದು ಆತ ಸಾವನ್ನಪ್ಪಿರುವ ಘಟನೆ ಹೆಬ್ರಿಯಲ್ಲಿ ನಡೆದಿದೆ. ಇಲ್ಲಿನ ಸೋಮೇಶ್ವರದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಈ ಘಟನೆ ಸಂಭವಿಸಿದೆ. ಮತ್ತು ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಹೇಗಾಯ್ತು ಘಟನೆ 

ಇಲ್ಲಿರುವ ಪೆಟ್ರೋಲ್​ ಬಂಕ್ ಟಿಪ್ಪರ್​ ಒಂದು ಬಂದಿದೆ. ಇಂಧನ ತುಂಬಿಸಿಕೊಂಡು ವಾಪಸ್​ ಹೋಗುವಾಗ ಟಿಪ್ಪರ್ ಚಾಲಕನಿಗೆ ಅಲ್ಲಿ ಮಲಗಿದ್ದ ಕಾರ್ಮಿಕನ ಇರುವಿಕೆ ಕಾಣಲಿಲ್ಲ. ಹೀಗಾಗಿ ಏಕಾಯೇಕಿ ಟಿಪ್ಪರ್ ತಿರುಗಿಸಿಕೊಂಡು ಆತ ಮುಂದಕ್ಕೆ ಹೋಗಿದ್ದಾನೆ. 

READ : ಶಿವಮೊಗ್ಗ, ದಾವಣಗೆರೆಯಲ್ಲಿ ಎಷ್ಟಿದೆ ಅಡಿಕೆ! ಯಾವ್ಯಾವ ಮಾರ್ಕೆಟ್​​ನಲ್ಲಿ ಏನಿದೆ ಧಾರಣೆ ! ಇಲ್ಲಿದೆ 24-11-23 ರ ಅಡಿಕೆ ದರ

ಪರಿಣಾಮ ಟಿಪ್ಪರ್ ಚಕ್ರಕ್ಕೆ ಸಿಲುಕಿ ಕಾರ್ಮಿಕ ಶಿವರಾಜ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಬೆಳಗಿನ ಜಾವ ಈ ಘಟನೆ ನಡೆದಿದ್ದು, ಘಟನೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರಯಾಗಿದೆ.

ಇನ್ನೂ ಮೃತ ಕಾರ್ಮಿಕನನ್ನ ಸಾಗರ ತಾಲ್ಲೂಕಿನ ಕೊರ್ಲಿ ಕೊಪ್ಪ ನಿವಾಸಿ ಎಂದು ಗುರುತಿಸಲಾಗಿದೆ