ತಟ್ಟಿ ಕಟ್ಟಿದ ತಗಡು ಮನೆ ಮೇಲೆ ಅರಣ್ಯ ಇಲಾಖೆಯ ಕಣ್ಣು! ತೀರ್ಥಹಳ್ಳಿಯಲ್ಲಿ ಹೆಣ್ಣುಮಕ್ಕಳೆಂದು ನೋಡದೇ ತಾಯಿ-ಮಗಳ ಮೇಲೆ ಹಲ್ಲೆ

Mother, daughter attacked by forest staff in Thirthahalli

ತಟ್ಟಿ ಕಟ್ಟಿದ ತಗಡು ಮನೆ ಮೇಲೆ ಅರಣ್ಯ ಇಲಾಖೆಯ ಕಣ್ಣು!  ತೀರ್ಥಹಳ್ಳಿಯಲ್ಲಿ ಹೆಣ್ಣುಮಕ್ಕಳೆಂದು ನೋಡದೇ  ತಾಯಿ-ಮಗಳ ಮೇಲೆ ಹಲ್ಲೆ

KARNATAKA NEWS/ ONLINE / Malenadu today/ Apr 27, 2023 GOOGLE NEWS


ತೀರ್ಥಹಳ್ಳಿ/ಶಿವಮೊಗ್ಗ/ ಚುನಾವಣೆ ಸಂದರ್ಭವನ್ನು ನೋಡಿಕೊಂಡು ಅರಣ್ಯ ಇಲಾಖೆಯಲ್ಲಿ ಜನಸಾಮಾನ್ಯರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆಯಾ? ಹೀಗೊಂದು ಅನುಮಾನ ಕಾಡಲು ಕಾರಣ ತೀರ್ಥಹಳ್ಳಿಯಲ್ಲಿ ನಡೆದಿರುವ ಘಟನೆ 

ಒತ್ತುವರಿ ತೆರವು ನೆಪದಲ್ಲಿ   ಅರಣ್ಯ ಇಲಾಖೆ ಅಧಿಕಾರಿಗಳು ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡಿದ ಆರೋಪವೊಂದು ಕೇಳಿಬಂದಿದೆ.  ತಾಯಿ ಹಾಗೂ ಮಗಳ ಮೇಲೆ ಅಮಾನವೀಯ ಹಲ್ಲೆ ಮಾಡಿದ್ದಾರೆ ಎಂದು ತೀರ್ಥಹಳ್ಳಿಯವರು ಆರೋಪಿಸಿದ್ದಾರೆ. 

 

ಇದನ್ನೂ ಓದಿ / ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/  ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​ 

 

ನಡೆದಿದ್ದೇನು?

ತೀರ್ಥಹಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಮರ ಸಮೀಪದ ಸುಣ್ಣದಮನೆ ಎಂಬಲ್ಲಿ  ರವಿ ನಾಯಕ್ ಎಂಬುವರ ಪತ್ನಿ ಕಲ್ಯಾಣಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಅಲ್ಲಿ ಡಿಮ್ಯಾಂಡ್ ಮೂಲಕ ಮನೆಯನ್ನು ಕಟ್ಟಿಕೊಂಡಿದ್ದರು. 

ಆದರೆ ಏಕಾಏಕಿ ಮನೆಗೆ ನುಗ್ಗಿದ  ಗಾರ್ಡ್ ಒಬ್ಬರು ಮನೆಯಲ್ಲಿ ಇದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಸುಮಾರು 8 ಜನ ಅರಣ್ಯ ಅಧಿಕಾರಿಗಳು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯಲ್ಲಿ ಇದ್ದ ಸಾಮಾನುಗಳನ್ನು ಬೀದಿಗೆ ಎಸೆದು, ಮನೆ ಖಾಲಿ ಮಾಡುವಂತೆ ಬೆದರಿಸಿದ್ದಾರಂತೆ. 

ಸದ್ಯ  ಹಲ್ಲೆಗೊಳಗಾದವರು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತು ಈ ಸಂಬಂಧ ಆಗುಂಬೆ ಪೊಲೀಸರಿಗೆ ದೂರು ನೀಡಲು ಸಹ ಭಯ ಪಡುತ್ತಿದೆ. ಸಾಮಾನ್ಯವಾಗಿ ಜನಪ್ರತಿನಿಧಿಗಳು ಇದ್ದಾಗ ಅರಣ್ಯ ಇಲಾಖೇಯ ದೌರ್ಜನ್ಯದ ವಿರುದ್ಧ ಧ್ವನಿಯಾಗುತ್ತಾರೆ. 

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

ಆದರೆ ಇದು ಚುನಾವಣಾ ಸಮಯ, ಇಂತಹ ಸಮಯದಲ್ಲಿ ಮಲೆನಾಡಿನಲ್ಲಿ ಒಂಟಿ ಮನೆಗಳ ಮೇಲೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿ ಹಲ್ಲೆ ನಡೆಸಿದ್ದು ನಿಜಕ್ಕೂ ಆತಂಕದ ವಿಷಯ. ಬಡ ಕುಟುಂಬದ ಆರೋಪ ನಿಜವಾದಲ್ಲಿ ಅವರಿಗೆ ನ್ಯಾಯ ಸಲ್ಲಬೇಕಿದೆ. 

ತೀರ್ಥಹಳ್ಳಿಯಲ್ಲಿ ಎಂಪಿಎಂ ಫಾರೆಸ್ಟ್ ಸೇರಿದಂತೆ, ಬಹಳಷ್ಟು ಮಂದಿ ಕಾಡಿಗೆ ಬೇಲಿ ಹಾಕಿದ್ದಾರೆ. ಅರಣ್ಯ ಇಲಾಖೆಯಲ್ಲಿ ಲಂಚದ ವ್ಯವಸ್ಥೆ ಎಷ್ಟರ ಮಟ್ಟಿಗಿದೆ ಎಂಬುದಕ್ಕೆ ಮೊನ್ನೆ ಮೊನ್ನೆ ನಡೆದ ಲೋಕಾಯುಕ್ತ​ ಕೂಡ ಜನರ ಗಮನದಲ್ಲಿದೆ. ಬಡವರನ್ನಷ್ಟೆ ಒಕ್ಕೆಲೆಬ್ಬಿಸುವ ಅಧಿಕಾರಿಗಳ ಜಾಣತನಕ್ಕೆ ತೀರ್ಥಹಳ್ಳಿಯ ಜನರು ಅವರದ್ದೆ ಆದ ಭಾಷೆಯಲ್ಲಿ ಉತ್ತರಿಸುತ್ತಿದ್ದಾರೆ.



Malenadutoday.com Social media