ಅಮಾವಾಸ್ಯೆ ಅಪಘಾತ? ಆಗುಂಬೆ ನೋಡಲು ಬಂದು ವಿದಿಗೆ ಬಲಿಯಾದ ಅಣ್ಣ-ತಂಗಿ! ತೀರ್ಥಮತ್ತೂರಿನಲ್ಲಿ ನಡೆದಿದ್ದು ಏನು?

Amavasya accident? The brother-sister who came to see Agumbe and fell victim to vidhi! What happened in Theerthamattur?

ಅಮಾವಾಸ್ಯೆ ಅಪಘಾತ? ಆಗುಂಬೆ ನೋಡಲು ಬಂದು ವಿದಿಗೆ ಬಲಿಯಾದ ಅಣ್ಣ-ತಂಗಿ! ತೀರ್ಥಮತ್ತೂರಿನಲ್ಲಿ ನಡೆದಿದ್ದು ಏನು?

KARNATAKA NEWS/ ONLINE / Malenadu today/ Jun 19, 2023 SHIVAMOGGA NEWS 

ಅಮಾವಾಸ್ಯೆಯ ದಿನ ಮನೆಯಿಂದ ಹೊರಟವರಿಗೆ ಹಿರಿಯರು ಜಾಗ್ರತೆ ಎನ್ನುತ್ತಾರೆ. ಅಲ್ಲದೆ ವಾಹನಗಳಿಗೆ ಪೂಜೆ ಮಾಡಿಸಿಕೊಂಡು ಹೋಗು ಎನ್ನುತ್ತಾರೆ. ಮತ್ತೆ ಕೆಲವರು ದೇವಾಲಯಕ್ಕೆ ಹೋಗಿ ಕೈ ಮುಗಿದು ಅಮವಾಸ್ಯೆ ಪೂಜೆ ಮಾಡಿ ಬರುತ್ತಾರೆ. ಅದರಲ್ಲಿಯು ವಿಶೇಷವಾಗಿ ಕೆಲವೊಂದು ವಿಶಿಷ್ಟ ಅಮಾವಾಸ್ಯೆಗಳಲ್ಲಿ ಜನರು ತೀರ್ಥಕ್ಷೇತ್ರಗಳಿಗೆ ಹೋಗಿ ಬಂದು ಪೂಜೆ ಸಲ್ಲಿಸುತ್ತಾರೆ. ಇವೆಲ್ಲವೂ ಧಾರ್ಮಿಕ ನಂಬಿಕೆಯಾದರೆ, ಅಮಾವಾಸ್ಯೆಗಳ ಸಂದರ್ಭದಲ್ಲಿ ಹೆಚ್ಚು ಆಕ್ಸಿಡೆಂಟ್​ಗಳು ಸಂಭವಿಸುತ್ತವೆ ಎಂಬುದು ಆಸ್ತಿಕರ ಮಾತು. ಈ ವಿಚಾರದ ಸತ್ಯಾಸತ್ಯತೆಯ ತರ್ಕ ಏನೇ ಇರಲಿ! ನಿನ್ನೆ ಶಿವಮೊಗ್ಗದಲ್ಲಿ ಸಂಭವಿಸಿದ ಎರಡು ಘಟನೆಗಳು ನಿಜಕ್ಕೂ ಬೇಸರ ಮೂಡಿಸುತ್ತಿದೆ. 

ಆಗುಂಬೆ ನೋಡಲು ಬಂದು ವಿದಿಗೆ ಬಲಿಯಾದ ಅಣ್ಣ-ತಂಗಿ! 

ರಾಷ್ಟ್ರೀಯ ಹೆದ್ದಾರಿ 169 (ಎ) ಮಾರ್ಗದ ಆಗುಂಬೆ ಘಾಟಿಯ 11ನೇ ತಿರುವಿನಲ್ಲಿ ನಿನ್ನೆ ಭೀಕರ ಅಪಘಾತ ಸಂಭವಿಸಿತ್ತು.ಆಗುಂಬೆಯನ್ನು ನೋಡಲು ಬಾರ್ಕೂರಿನಿಂದ ಬೈಕ್​ನಲ್ಲಿ  ಬಂದಿದ್ದ ಅಣ್ಣತಂಗಿಗೆ ಬಸ್​ ಡಿಕ್ಕಿಯಾಗಿತ್ತು.  ಆಗುಂಬೆಯಿಂದ ಬ್ರಹ್ಮಾವರ ಕಡೆಗೆ ತೆರಳುತ್ತಿದ್ದ ಬೈಕ್‌ ಹಾಗೂ ಮಂಗಳೂರು ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್​ ನಡುವೆ ಭೀಕರ ಅಪಘಾತ ಸಂಭವಿಸಿದೆ ಘಟನೆಯಲ್ಲಿ  ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಬಾರಕೂರು ಹೆರಾಡಿ ಗ್ರಾಮದ ಶಶಾಂಕ್ (21), ನಿರ್ಮಿತ (19)  ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಡಿಪ್ಲೊಮಾ ಎಂಜಿನಿಯರ್ ಪದವೀಧರ ಶಶಾಂಕ್ ಬೆಂಗಳೂರಿನಲ್ಲಿ ವೃತ್ತಿ ನಿರ್ವಹಿಸುತ್ತಿದ್ದರು. 

ತೀರ್ಥಮತ್ತೂರಿನಲ್ಲಿ ನಡೆದಿದ್ದು ಏನು? 

ಇನ್ನೂ ಅತ್ತ ತೀರ್ಥಹಳ್ಳಿಯ ತೀರ್ಥ ಮತ್ತೂರಿನ ಬಳಿ ಹರಿಯುವ ತುಂಗಾನದಿಯಲ್ಲಿ ಮುಳುಗಿ ಇಬ್ಬರು ಸಹಾಯಕ ಪ್ರಾಧ್ಯಾಪಕರುಸಾವನ್ನಪ್ಪಿದ್ದಾರೆ. ಇಬ್ಬರು ಸಹ ಕಾರ್ಕಳ ತಾಲೂಕಿನ ನಿಟ್ಟೆ ಎಂಜಿನಿ ಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರನ್ನು ಬಾಲಾಜಿ(38), ಪುನೀತ್ (35) ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರ ಮೃತದೇಹವೂ ಪತ್ತೆಯಾಗಿದೆ. ಗ್ರಾಮದ ವಿದ್ಯಾರ್ಥಿಯ ಮನೆಯಲ್ಲಿ ಶನಿವಾರ ನಡೆದ ಸಂತೋಷ ಕೂಟಕ್ಕೆ ಸುಮಾರು 15ಕ್ಕೂ ಹೆಚ್ಚು ಪ್ರಾಧ್ಯಾಪಕರು, ಉಪನ್ಯಾಸಕರು, ಸಿಬ್ಬಂದಿ ಆಗಮಿಸಿದ್ದರು. ಸ್ಥಳೀಯ ಪ್ರವಾಸಿ ಸ್ಥಳಗಳನ್ನು ವೀಕ್ಷಿಸುವ ಉದ್ದೇಶ ಹೊಂದಿದ್ದರು. ಭಾನುವಾರ ಬೆಳಗ್ಗೆ ಪ್ರವಾಸಿ ಸ್ಥಳಕ್ಕೆ ತೆರಳುವ ಮುನ್ನ  ನೀರಿಗಿಳಿದಿದ್ದಾರೆ. ಈ ವೇಳೆ ಪುನೀತ್​ ನೀರಿನ ಸುಳಿಗೆ ಸಿಕ್ಕಿದ್ದಾರೆ. ಅವರನ್ನ ಕಾಪಾಡಲು ಹೊದ ಬಾಲಾಜಿಯು ಸಹ ನೀರಿನ ಸೆಳೆತದಿಂದ ಹೊರಕ್ಕೆ ಬರಲಾರದೇ ಮುಳುಗಿದ್ದಾರೆ. ಮೃತ ಬಾಲಾಜಿ ಚಿತ್ರದುರ್ಗ ಜಿಲ್ಲೆ ಹಿರಿಯೂರಿನವರು. ಪುನೀತ್ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವರು. ಇಬ್ಬರು ವಿವಾಹಿತರಾಗಿದ್ದು ಪತ್ನಿ, ಮಕ್ಕಳಿದ್ದಾರೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ನಡೆದ ಈ ಎರಡು ಘಟನೆಗಳು ಬೇಸರ ಮೂಡಿಸುತ್ತಿದ್ದು ಬಾಳಿ ಬದುಕಬೇಕಾದವರು ಹೆಣವಾಗುತ್ತಾರೆ ಎಂಬುದು ನಿಜಕ್ಕೂ ನೋವಿನ ಸಂಗತಿ