ಬೆಜ್ಜವಳ್ಳಿ ಜಾತ್ರೆಯಲ್ಲಿ ಜೋರು ಇಸ್ಪೀಟ್​ನ ಅಂದರ್ ಬಾಹರ್​ ವಹಿವಾಟು! ಎಸ್​ಪಿಗೆ ತಲುಪಿದ ವೈರಲ್ ವಿಡಿಯೋ

Andar Bahar card game in Bejjavalli SP Mithun Kumar

ಬೆಜ್ಜವಳ್ಳಿ ಜಾತ್ರೆಯಲ್ಲಿ ಜೋರು ಇಸ್ಪೀಟ್​ನ ಅಂದರ್ ಬಾಹರ್​ ವಹಿವಾಟು! ಎಸ್​ಪಿಗೆ ತಲುಪಿದ ವೈರಲ್ ವಿಡಿಯೋ
Andar Bahar card game in Bejjavalli

SHIVAMOGGA  |  Jan 14, 2024  | Andar Bahar card game in Bejjavalli   ಶಿವಮೊಗ್ಗ ಜಿಲ್ಲೆ ಬೆಜ್ಜವಳ್ಳಿ ಸದ್ಯ ಸಂಕ್ರಾಂತಿ ಜಾತ್ರೆ ಜೋರಾಗಿ ನಡೆಯುತ್ತಿದೆ. ನೂರಾರು ಕಡೆಗಳಿಂದ ಜಾತ್ರೆಗೆಂದೇ ಸಾವಿರಾರು ಮಂದಿ ಬಂದಿದ್ದಾರೆ. ಅಲ್ಲದೆ ಮಾಳೂರು ಸುತ್ತಮುತ್ತ ವಲಸೆ ಬಂದಿರುವ ಪರವೂರಿನ ಜನರು ಸೇರಿದಂತೆ ಅನ್ಯಜಿಲ್ಲೆಗಳಿಂದಲೂ ಜನಸಾಗರ ಬೆಜ್ಜವಳ್ಳಿಯಲ್ಲಿ ನೆರೆದಿದೆ. 

ಇಸ್ಪೀಟ್ ಅಂದರ್ ಬಾಹರ್ ಜಾತ್ರೆ 

ಇದರ ಜನರ ಅಲ್ಪಸ್ವಲ್ಪ ಕಾಸನ್ನ ಖಾಲಿಮಾಡಿಸಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಬೆಜ್ಜವಳ್ಳಿ ಜಾತ್ರೆಯಲ್ಲಿ  ಕೆಲವು ವ್ಯಕ್ತಿಗಳು ಇಸ್ಪೀಟ್ ಆಟಗಳನ್ನ ಬಹಿರಂಗವಾಗಿಯೇ ಆಟವಾಡಿಸ್ತಿದ್ದಾರೆ.. ದೇವಸ್ಥಾನದ ಸಮೀಪವೇ ಅಕ್ರಮ ಇಸ್ಪೀಟ್ ಆಟ ನಡೆಯುತ್ತಿರುವುದು ಅಚ್ಚರಿ ಮೂಡಿಸಿದ್ದು ಹಲವರಲ್ಲಿ  ಆಕ್ರೋಶ ಮೂಡಿಸಿದೆ. 

ಎಂಟು ಸ್ಟಾಲ್​ಗಳಲ್ಲಿ ಅಂದರ್ ಬಾಹರ್

ಸುಮಾರು ಎಂಟು ಸ್ಟಾಲ್​ಗಳನ್ನ ಇಸ್ಪೀಟ್ ಆಟಕ್ಕಾಗಿ ಹಾಕಲಾಗಿದ್ದು, ಅದರ ದೃಶ್ಯಗಳನ್ನು ಮಲೆನಾಡು ಟುಡೆಗೆ ಸ್ಥಳೀಯರು ಕಳುಹಿಸಿದ್ದರು. ಈ ವಿಡಿಯೋವನ್ನು ಮಲೆನಾಡು ಟುಡೆ ತಂಡ ಎಸ್​ಪಿ ಮಿಥುನ್ ಕುಮಾರ್​ರವರ ಗಮನಕ್ಕೆ ತಂದು ಅವರಿಗೆ ವಿಡಿಯೋವನ್ನು ವರ್ಗಾಯಿಸಿದೆ. ಸದ್ಯ ಎಸ್​ಪಿ ಮಿಥುನ್ ಕುಮಾರ್​ ರವರು ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ. 

ಏನಿದು ಇಸ್ಪೀಟ್​​ ಅಕ್ರಮದ ಆಟ

ಇಸ್ಪೀಟ್​ ಎಲೆಯಲ್ಲಿ ಒಟ್ಟು 52 ಕಾರ್ಡ್​ ಇರುತ್ತವೆ. ಸ್ಟಾಲ್​ಗಳಲ್ಲಿ ಈ ಕಾರ್ಡ್​ಗಳನ್ನು ಬಳಸಿ ಅಂದರ್ ಬಾಹರ್ ಆಡುತ್ತಾರೆ. ಆಟ ಆಡಿಸುವಾತ ಒಂದು ಎಲೆ ಹೊರಗೆ ಒಂದು ಎಲೆ ಒಳಗೆ ಹಾಕುತ್ತಾನೆ. ಆಗ ನೆಕ್ಟ್​ ಕಾರ್ಡ್​ ಯಾವುದು ಬರುತ್ತೆ ಅಂತಾ ಹಣ ಕಟ್ಟಲಾಗುತ್ತದೆ. 

ಹಳ್ಳಿಗರಿಗೆ ಮೋಸ

ಇದು ಆಟವಾದರೆ, ಇದರಲ್ಲಿ ಇಸ್ಪೀಟ್ ಎಲೆಗಳನ್ನು ತೆಗೆದಿಟ್ಟು ಬೇರೆ ಎಲೆ ಬರುವಂತೆ ಮಾಡಿ ಮೋಸಮಾಡುತ್ತಾರೆ. ಹಳ್ಳಿಜನಗಳಿಗೆ ಅಂದರ್ ಬಾಹರ್​ನ ಒಳಗಿನ ಕರಾಮತ್ತು ಗೊತ್ತಿರುವುದಿಲ್ಲ. ಹೀಗಾಗಿ ಮೋಸ ಹೋಗುತ್ತಾರೆ. 

ಕಾನೂನು ಏನು ಹೇಳುತ್ತೆ?

ಕಾನೂನು ವ್ಯಾಪ್ತಿಯಲ್ಲಿ ನೋಡುವುದಾದರೂ ಅಂದರ್ ಬಾಹರ್ ಆಟ ನಿಷಿದ್ಧ. ಆದಾಗ್ಯು ಬೆಜ್ಜವಳ್ಳಿ ಸುತ್ತಮುತ್ತ ಜಾತ್ರೆ ಹೆಸರಿನಲ್ಲಿ ಜೋರಾಗಿ ನಡೆಯುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಅದರಲ್ಲಿಯು ಬಹಿರಂಗವಾಗಿಯೇ ಜಾತ್ರೆಯಲ್ಲಿ ಸ್ಟಾಲ್ ಹಾಕಿಕೊಂಡು ಅಂದರ್ ಬಾಹರ್ ಆಡಿಸುತ್ತಿದ್ದಾರೆ ಎಂಬುದು ಸ್ಥಳೀಯ ಪೊಲೀಸರಿಗೆ ಮಾಹಿತಿ ಇದೆಯೆ? ಇಲ್ಲವೆ? ಎಂಬುದು ಪೊಲೀಸ್ ಇಲಾಖೆಯ ಮೂಲಗಳೇ ಹೇಳಬೇಕಿದೆ.